ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾದ ಸ್ಫುರದ್ರೂಪಿ

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕಿರು ನಗೆ, ಮುಗ್ಧ ನೋಟದ ಕಣ್ಣುಗಳು, ಸ್ಫುರದ್ರೂಪಿ, ಆಕರ್ಷಕ ಮೈಕಟ್ಟು ಹೊಂದಿರುವ ನಟ ಶಾಹಿದ್‌ ಕಪೂರ್‌. ನಟನೆ, ನೃತ್ಯಗಳ ಜೊತೆಗೆ ತಮ್ಮ ಚೆಲುವಿನ ಮೂಲಕವೂ ಸಿನಿಪ್ರಿಯರ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ಶಾಹಿದ್‌ ಕಪೂರ್‌ ಏಷ್ಯಾದ ಸೆಕ್ಸಿಯೆಸ್ಟ್‌ ಮ್ಯಾನ್‌ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.

ಬ್ರಿಟನ್‌ನ ಈಸ್ಟರ್ನ್‌ ಐ ನಡೆಸಿರುವ ‘ಜಗತ್ತಿನ ಸೆಕ್ಸಿಯೆಸ್ಟ್‌ ಏಷ್ಯನ್‌ ಮ್ಯಾನ್‌’ ಸಮೀಕ್ಷೆಯಲ್ಲಿ 50 ಸ್ಫುರದ್ರೂಪಿಗಳ ಹೆಸರನ್ನು ಪ್ರಕಟಿಸಲಾಗಿದೆ. ಅದರಲ್ಲಿ ಶಾಹಿದ್‌ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ 7ನೇ ಸ್ಥಾನದಲ್ಲಿದ್ದರು ಶಾಹಿದ್‌.

ಈ ವರ್ಷದ ಫಲಿತಾಂಶಕ್ಕೆ ಆಶ್ಚರ್ಯ ಹಾಗೂ ಸಂತಸ ವ್ಯಕ್ತಪಡಿಸಿರುವ ಅವರು ‘ನನಗೆ ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ. ನನ್ನ ಪ್ರಕಾರ ಸೆಕ್ಸಿ ಎನ್ನುವ ಶಬ್ದ ಕೇವಲ ದೇಹ ಸೌಂದರ್ಯಕ್ಕೆ ಸಂಬಂಧಿಸಿದ್ದಲ್ಲ. ಬದುಕಿನ ಬಗ್ಗೆ ನಮ್ಮ ದೃಷ್ಟಿಕೋನ ಏನು ಎನ್ನುವುದೂ ಮುಖ್ಯವಾಗುತ್ತದೆ. ಈ ಗೌರವ ನನಗೆ ಪ್ರೀತಿ ತೋರಿದ ಹಾಗೂ ಪ್ರೋತ್ಸಾಹಿಸಿದ ಎಲ್ಲ ಅಭಿಮಾನಿಗಳಿಗೆ ಅರ್ಪಣೆ’ ಎಂದಿದ್ದಾರೆ.

ಬಾಲಿವುಡ್‌ನ ಮತ್ತೊಬ್ಬ ನಟ ಹೃತಿಕ್‌ ಮೂರನೇ ಬಾರಿಯೂ ಎರಡನೇ ಸ್ಥಾನ ಕಾಪಾಡಿಕೊಂಡಿದ್ದಾರೆ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಗಾಯಕ ಜಾಯ್ನ್‌ ಮಲ್ಲಿಕ್‌ 3ನೇ ಸ್ಥಾನದಲ್ಲಿದ್ದಾರೆ. ವಿವಿಯನ್‌ ಡಿಸೇನಾ, ಆಶಿಶ್‌ ಶರ್ಮಾ, ಫವಾದ್‌ ಖಾನ್‌, ಸಲ್ಮಾನ್‌ ಖಾನ್‌, ಗುರ್ಮೀತ್‌ ಚೌದರಿ, ರಣವೀರ್‌ ಸಿಂಗ್‌, ವಿರಾಟ್‌ ಕೊಹ್ಲಿ ಕ್ರಮವಾಗಿ
ಸ್ಥಾನ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT