ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಷಸ್‌ ಪಂದ್ಯಗಳಲ್ಲಿ ಫಿಕ್ಸಿಂಗ್ ಆರೋಪ: ತಳ್ಳಿಹಾಕಿದ ಐಸಿಸಿ

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಪರ್ತ್‌: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಕ್ರಿಕೆಟ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಳ್ಳಿಹಾಕಿದೆ.

ಇಲ್ಲಿಯ ಆಂಗ್ಲ ಪತ್ರಿಕೆ ‘ದಿ ಸನ್‌’ ಫಿಕ್ಸಿಂಗ್ ನಡೆದಿರುವ ಬಗ್ಗೆ ವರದಿ ಮಾಡಿದೆ. ಕುಟುಕು ಕಾರ್ಯಾಚರಣೆ ನಡೆಸಿದ ವಿಡಿಯೋ ತುಣುಕನ್ನು ತನ್ನ ಜಾಲತಾಣದಲ್ಲಿಯೂ ಹಾಕಿದೆ. ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾರತದ ಪ್ರಭಾವಿ ವ್ಯಕ್ತಿಯೊಬ್ಬರು(ಮಿಸ್ಟರ್ ಬಿಗ್) ಮತ್ತು ವಿಶ್ವಕಪ್ ಗೆದ್ದುಕೊಂಡ ತಂಡದ ಮಾಜಿ ಆಲ್‌ರೌಂಡರ್ (ದ ಸೈಲೆಂಟ್ ಮ್ಯಾನ್) ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ಆದರೆ ಇವರಿಬ್ಬರಲ್ಲಿ ಯಾರದೇ ನಿಜವಾದ ಹೆಸರನ್ನೂ ಉಲ್ಲೇಖಿಸಿಲ್ಲ.

‘ಮೂರನೇ ಟೆಸ್ಟ್ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿರುವುದು ನಿರಾಧಾರವಾಗಿದೆ. ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ. ಫಿಕ್ಸಿಂಗ್ ಆರೋಪ ಕೇಳಿಬಂದಿರುವುದರಿಂದ ಸಮಗ್ರ ತನಿಖೆ ನಡೆಸಲಾಗುವುದು’ ಎಂದು ಐಸಿಸಿ ಭ್ರಷ್ಟಾಚಾರ ತಡೆ ಘಟಕದ ಮುಖ್ಯಸ್ಥ ಅಲೆಕ್ಸ್‌ ಮಾರ್ಷಲ್‌ ಹೇಳಿದ್ದಾರೆ.

‘ಬುಕ್ಕಿಗಳ ಜೊತೆಗೆ ಆಟಗಾರರ ಸಂಪರ್ಕ ಇದೆ ಎಂಬ ಬಗ್ಗೆ ಕೂಡ ಯಾವುದೇ ಮಾಹಿತಿ ದೊರೆತಿಲ್ಲ’ ಎಂದು ಅವರು ಹೇಳಿದ್ದಾರೆ.

ಅಂಗಳದಲ್ಲಿ ಬ್ಯಾಟ್ಸ್ ಮನ್ ಗಳು ತಮ್ಮ ಕೈಗವಸುಗಳನ್ನು ಬದಲಿಸುವ ಮೂಲಕ ಸೂಚನೆ ನೀಡುತ್ತಿದ್ದರು. ಆ ಮೂಲಕ  ಬುಕ್ಕಿಗಳು ದೆಹಲಿ ಹಾಗೂ ದುಬೈನಲ್ಲಿ ಕುಳಿತು ಬೆಟ್ಟಿಂಗ್ ನಡೆಸುತ್ತಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ಆ್ಯಷಸ್ ಸರಣಿಯಲ್ಲಿ ಫಿಕ್ಸಿಂಗ್ ನಡೆಯುವ ಕುರಿತು ಅನುಮಾನ ಇದ್ದ ಕಾರಣ ನಾಲ್ಕು ತಿಂಗಳುಗಳಿಂದ ತನಿಖೆ ನಡೆಸಲಾಗುತ್ತಿತ್ತು ಎಂದು ಪತ್ರಿಕೆ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT