ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಬೆಲೆ 10 ಗ್ರಾಂಗೆ ₹ 255 ಏರಿಕೆ

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ಬೆಲೆ ₹ 255 ರಷ್ಟು ಚೇತರಿಕೆ ಕಂಡು, 10 ಗ್ರಾಂಗೆ ₹ 28,610ರಂತೆ ಮಾರಾಟವಾಯಿತು.

ಚಿನ್ನಾಭರಣ ವರ್ತಕರು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಬೇಡಿಕೆ ಹೆಚ್ಚಿಗೆ ಇದೆ. ಜಾಗತಿಕ ಮಾರುಕಟ್ಟೆಯಲ್ಲಿಯೂ ಬೆಲೆ ಏರಿಕೆ ಆಗುತ್ತಿದೆ. ಹೀಗಾಗಿ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಚೇತರಿಕೆ ಕಂಡಿದೆ ಎಂದು ತಜ್ಞರು ಹೇಳಿದ್ದಾರೆ.

ಬೆಳ್ಳಿ ₹ 670 ರಷ್ಟು ಹೆಚ್ಚಾಗಿ ಕೆ.ಜಿಗೆ ₹ 37,000 ದ ಗಡಿ ದಾಟಿತು. ಬುಧವಾರ ₹ 36,450 ಇತ್ತು. ಗುರುವಾರ ₹ 37,120ಕ್ಕೆ ಏರಿತು.

ಸ್ಟ್ಯಾಂಡರ್ಡ್‌ ಚಿನ್ನ ₹ 255 ರಷ್ಟು ಹೆಚ್ಚಾಗಿ ₹ 28,610ಕ್ಕೆ ತಲುಪಿತು. ಬುಧವಾರ ₹ 28,355 ರಂತೆ ಮಾರಾಟವಾಗಿತ್ತು. ಶುದ್ಧ ಚಿನ್ನ
₹ 28,760ಕ್ಕೆ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT