ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಷರ್‌ನ ಹೆವಿಡ್ಯೂಟಿ ಲಾರಿ

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿ.ಇ. ಕಮರ್ಷಿಯಲ್ ವೆಹಿಕಲ್ಸ್ ಸಂಸ್ಥೆಯ ಐಷರ್ ಟ್ರಕ್ಸ್ ಮತ್ತು ಬಸ್ಸಸ್ ಕಂಪೆನಿಯು ‘ಎಕ್ಸಕಾನ್‌ ಮೇಳ’ದಲ್ಲಿ ತನ್ನ  ಹೆವಿಡ್ಯೂಟಿ ಪ್ರೊ-ಸಿರೀಸ್ ಲಾರಿಗಳನ್ನು ಪ್ರದರ್ಶಿಸುತ್ತಿದೆ.

‘ಗಣಿಗಾರಿಕೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ನೆರವಾಗಲು ಸಿದ್ಧಪಡಿಸಲಾಗಿರುವ ಪ್ರೊ 8031 ಟಿಪ್ಪರ್ ಹಾಗೂ ಪ್ರೊ 8049 ಟಿಪ್ ಟ್ರೇಲರ್‍ಗಳು ಸಂಸ್ಥೆಯ ಪ್ರಮುಖ ಉತ್ಪನ್ನಗಳಾಗಿವೆ. ನಿರ್ಮಾಣ ಕ್ಷೇತ್ರದಲ್ಲಿ ಇವು ಹೊಸ ಮೈಲುಗಲ್ಲುಗಳನ್ನು ನಿರ್ಮಿಸಲಿವೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಅಗರವಾಲ್ ಹೇಳಿದ್ದಾರೆ.  ‌

‘ಮೂಲ ಸೌಕರ್ಯಗಳ ಅಭಿವೃದ್ಧಿಗೆ ಗಮನಾರ್ಹ ಪ್ರಮಾಣದಲ್ಲಿ ಹಣ ವೆಚ್ಚ ಮಾಡಲಾಗುತ್ತಿದೆ. ಭಾರತದಲ್ಲಿಯೇ ತಯಾರಿಸಿ ಮತ್ತು ಸ್ಮಾರ್ಟ್‌ ಸಿಟಿ ಯೋಜನೆಗಳಿಂದ ವಾಣಿಜ್ಯ ವಾಹನಗಳ ಉದ್ಯಮವು ಚೇತರಿಸಿಕೊಂಡಿದೆ. ಹೆವಿಡ್ಯೂಟಿ ಟ್ರಕ್ ಮತ್ತು ಟಿಪ್ಪರ್‍ಗಳಿಗೆ ಬೇಡಿಕೆಯೂ ಹೆಚ್ಚಿದೆ. ಗ್ರಾಹಕರ ಅಗತ್ಯಗಳನ್ನು ತಮ್ಮ ಸಂಸ್ಥೆ ಪೂರೈಸುತ್ತಿದೆ.

‘ಗಣಿಗಾರಿಕೆ ಮತ್ತು ನಿರ್ಮಾಣ ಉದ್ಯಮಕ್ಕೆ ಬೇಕಾದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಐಷರ್ ಟ್ರಕ್ಸ್ ಕಂಪನಿಯು, ಇಡೀ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಅತ್ಯುತ್ತಮ ಗುಣಮಟ್ಟದ ಇಂಧನ ಉಳಿತಾಯ ಮಾಡುವ ಟ್ರಕ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ನಯಿ ಸೋಚ್’ ತತ್ವದ ಆಧಾರದ ಹೊಸ ಯೋಜನೆ ಪರಿಚಯಿಸಲಾಗಿದೆ. ಇದು ಸಮಯದ ಉಳಿತಾಯ ಮಾಡುವುದಲ್ಲದೇ ಗ್ರಾಹಕರ ಲಾಭಾಂಶ ಹೆಚ್ಚಳ ಮಾಡುತ್ತದೆ. ಜತೆಗೆ ಇಒಎಸ್ ಆ್ಯಪ್‍ ಒದಗಿಸಲಾಗುತ್ತಿದ್ದು, ಇದರ ಸಹಾಯದಿಂದ ಗ್ರಾಹಕರು ತುರ್ತು ಪರಿಸ್ಥಿತಿಯಲ್ಲಿ ಕರೆ ಮಾಡಿ ತಮಗೆ ಬೇಕಾದ ಸಹಾಯ ಪಡೆಯಬಹುದಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT