ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ಸರಣಿ ಗೆದ್ದ ಭಾರತ

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜೆಮಿಮಾ ರಾಡ್ರಿಗಸ್ (63 ರನ್) ಅವರ ಅರ್ಧಶತಕದ ಬಲದಿಂದ ಮಹಿಳೆಯರ ಭಾರತ ‘ಎ’ ತಂಡವು ಗುರುವಾರ ಬಾಂಗ್ಲಾ ‘ಎ’ ತಂಡದ ವಿರುದ್ಧದ ಟ್ವೆಂಟಿ–20 ಪಂದ್ಯದಲ್ಲಿ 40 ರನ್ ಗಳಿಂದ ಜಯಿಸಿತು. ಇದರೊಂದಿಗೆ ಆತಿಥೇಯ ತಂಡವು ಮೂರು ಪಂದ್ಯಗಳ ಸರಣಿಯನ್ನು 2–0ಯಿಂದ ಕೈವಶ ಮಾಡಿಕೊಂಡಿತು.

ಇಲ್ಲಿನ ರಾಮತೀರ್ಥ ನಗರದಲ್ಲಿರುವ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ  ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 152 ರನ್‌ ಗಳಿಸಿತು. ಪ್ರವಾಸಿ ತಂಡ ಎಂಟು ವಿಕೆಟ್‌ ಕಳೆದುಕೊಂಡು 112 ರನ್‌ ಗಳಿಸಿತು.

ಜೆಮಿಮಾ ಅರ್ಧಶತಕ: ತಾನಿಯಾ ಬಾಟಿಯಾ ಹಾಗೂ ಜೆಮಿಮಾ ರಾಡ್ರಿಗಸ್‌ ಮೊದಲ ವಿಕೆಟ್‌ಗೆ ಶತಕದ (101ರನ್) ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಎಂಟು ಬೌಂಡರಿ ಸಿಡಿಸಿ ಪ್ರವಾಸಿ ಬೌಲರ್‌ಗಳನ್ನು ಕಂಗೆಡಿಸಿದ ಜೆಮಿಮಾ 42 ಎಸೆತಗಳಲ್ಲಿ 63 ರನ್‌ ಗಳಿಸಿದರು. ತಾನಿಯಾ (35) ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಿದರು. ನಾಯಕಿ ಅನುಜಾ ಪಾಟೀಲ ಔಟಾಗದೆ 28 ರನ್‌ ಗಳಿಸಿದರು.

ಸವಾಲಿನ ಗುರಿ ಬೆನ್ನತ್ತಿದ ಪ್ರವಾಸಿ ತಂಡ ಕೇವಲ ಐದು ರನ್‌ ಗಳಿಸುವಷ್ಟರಲ್ಲಿ ಮೊದಲ ವಿಕೆಟ್‌ ಕಳೆದುಕೊಂಡಿತು. ಆರಂಭಿಕ ಬ್ಯಾಟ್ಸ್‌ವುಮನ್‌ ಖಾತೆ ತೆರೆಯದೇ ಪೆವಿಲಿಯನ್‌ಗೆ  ಮರಳಿದರು. ಮುರ್ಶಿದಾ ಕಾತೂನ್‌ (31) ಹಾಗೂ ಫರ್ಜಾನಾ ಹಕ್‌ (34) ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಇವರ ಜೊತೆಯಾಟ ಮುರಿದ ನಂತರ ಜೆ.ಆಲಂ (12) ಬಿಟ್ಟರೆ ಉಳಿದ ಯಾರಿಗೂ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಕ್ಯಾಚ್‌ ಪಡೆದುಕೊಳ್ಳಲು ಯತ್ನಿಸಿದ ಜೆಮಿಮಾ ಬಲಗೈ ಹೆಬ್ಬೆರಳಿಗೆ ಗಾಯವಾಯಿತು.

ಬಿಸಿಸಿಐ ಪ್ರಧಾನ ವ್ಯವಸ್ಥಾಪಕ (ಅಭಿವೃದ್ಧಿ ವಿಭಾಗ) ರತ್ನಾಕರ ಶೆಟ್ಟಿ ಪಂದ್ಯ ವೀಕ್ಷಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ ಎ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 152 (ತಾನಿಯಾ ಭಾಟಿಯಾ 35, ಜೆಮಿಮಾ ರಾಡ್ರಿಗಸ್‌ 63, ಅನುಜಾ ಪಾಟೀಲ 28, ಸ್ವಾಗತಿಕಾ 15; ಜೆ.ಆಲಂ 31ಕ್ಕೆ 2, ಸಲ್ಮಾ ಕಾತೂನ್‌ 22ಕ್ಕೆ 1, ಶೈಲಾ ಶರ್ಮಿನ್‌ 22ಕ್ಕೆ1);

ಬಾಂಗ್ಲಾದೇಶ ಎ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 112 (ಮುರ್ಶಿದಾ ಕಾತೂನ್‌ 31, ಫರ್ಜಾನಾ ಹಕ್‌ 34, ಜೆ. ಆಲಂ ಔಟಾಗದೆ 12; ಅನುಜಾ ಪಾಟೀಲ 19ಕ್ಕೆ 2, ಸೋನಿ ಯಾದವ್‌ 15ಕ್ಕೆ 1, ರಾಧಾ ಯಾದವ್‌ 19ಕ್ಕೆ1). ಫಲಿತಾಂಶ: ಭಾರತ ಮಹಿಳಾ ‘ಎ’ ತಂಡಕ್ಕೆ 40 ರನ್‌ಗಳ ಗೆಲುವು.

ಮುಂದಿನ ಪಂದ್ಯ ಡಿಸೆಂಬರ್‌ 16ರಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT