ಉಡುಪಿ

ಅಪಘಾತದಲ್ಲಿ ತೀವ್ರ ಗಾಯ ಮಹಿಳೆ ಅಂಗಾಂಗ ದಾನ

ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಬ್ರಹ್ಮಾವರ ಸಮೀಪದ ಬೆಣ್ಣೆಕುದ್ರು ನಿವಾಸಿ ಕಸ್ತೂರಿ (36) ಎಂಬುವರ ಅಂಗಾಂಗಗಳನ್ನು ಗುರುವಾರ ದಾನ ಮಾಡಲಾಗಿದೆ.

ಮಿದುಳು ನಿಷ್ಕ್ರಿಯಗೊಂಡಿದ್ದ ಬ್ರಹ್ಮಾವರ ಸಮೀಪದ ಬೆಣ್ಣೆಕುದ್ರು ನಿವಾಸಿ ಕಸ್ತೂರಿ ಅವರ ಅಂಗಾಂಗಗಳನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಿಂದ ಮಂಗಳೂರಿಗೆ ಸಾಗಿಸಲಾಯಿತು.

ಉಡುಪಿ: ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಬ್ರಹ್ಮಾವರ ಸಮೀಪದ ಬೆಣ್ಣೆಕುದ್ರು ನಿವಾಸಿ ಕಸ್ತೂರಿ (36) ಎಂಬುವರ ಅಂಗಾಂಗಗಳನ್ನು ಗುರುವಾರ ದಾನ ಮಾಡಲಾಗಿದೆ.

ಪತಿ ಭಾಸ್ಕರ್, ಮಗ ಅನಿವಾಶ್ ಹಾಗೂ ಅತ್ತೆ ಗಿರಿಜಾ ಅವರೊಂದಿಗೆ ಕಸ್ತೂರಿ ಅವರು ಡಿ.12ರಂದು ಕಾರಿನಲ್ಲಿ ಹೋಗುವಾಗ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವಿನಾಶ್ ಹಾಗೂ ಗಿರಿಜಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ತಲೆಗೆ ತೀವ್ರವಾದ ಪೆಟ್ಟು ಬಿದ್ದ ದಂಪತಿಯನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು.

ಕಸ್ತೂರಿ ಅವರ ಮಿದುಳು ನಿಷ್ಕ್ರಿಯಗೊಂಡಿರುವುದನ್ನು ವೈದ್ಯರು ಬುಧವಾರ ಖಚಿತಪಡಿಸಿದ್ದರು. ಆದ್ದರಿಂದ ಅವರ ಅಂಗಾಂಗಗಳನ್ನು ದಾನ ಮಾಡಲು ಸಹೋದರರಾದ ಶೈಲೇಶ್‌, ಪ್ರತಾಪ್‌ ಒಪ್ಪಿಗೆ ಸೂಚಿಸಿದ್ದರು. ಮಣಿಪಾಲದಿಂದ ಮಂಗಳೂರಿನವರೆಗೆ ಸಂಚಾರ ಮುಕ್ತ ಮಾರ್ಗ (ಗ್ರೀನ್ ಕಾರಿಡಾರ್) ವ್ಯವಸ್ಥೆ ಕಲ್ಪಿಸಲಾಯಿತು. ಮೂತ್ರಪಿಂಡವನ್ನು ಫಾದರ್ ಮುಲ್ಲರ್ ಆಸ್ಪತ್ರೆ, ಇನ್ನೊಂದನ್ನು ಕಸ್ತೂರಬಾ ಆಸ್ಪತ್ರೆ, ಕಣ್ಣುಗಳನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಹಾಗೂ ಹೃದಯ ಕವಾಟವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸಾಗಿಸಲಾಯಿತು.

ಭಾಸ್ಕರ್ ಅವರ ಸ್ಥಿತಿ ಈಗಲೂ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಕಾರು ಚಾಲಕ ಭಾಸ್ಕರ್ ಅವರು ಕುಟುಂಬದ ಜತೆಗೆ ಖಾಸಗಿ ಕಾರ್ಯಕ್ರಮಕ್ಕೆ ಹೋಗುವಾಗ ಭೀಕರ ಅಪಘಾತ ಸಂಭವಿಸಿತ್ತು.

* * 

ಅಂಗಾಂಗಗಳನ್ನು ಮಂಗಳೂರಿಗೆ ಸಾಗಿಸಲು ಅಗತ್ಯ ಇರುವ ವ್ಯವಸ್ಥೆಯನ್ನು ಇಲಾಖೆ ವತಿಯಿಂದ ಕಲ್ಪಿಸಿಕೊಡಲಾಯಿತು.
ಕುಮಾರಚಂದ್ರ,
ಹೆಚ್ಚುವರಿ ಎಸ್ಪಿ

Comments
ಈ ವಿಭಾಗದಿಂದ ಇನ್ನಷ್ಟು
ಅಂಗವಿಕಲ ಯುವಕನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ಪದವೀಧರೆ

ಕುಂದಾಪುರ
ಅಂಗವಿಕಲ ಯುವಕನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ಪದವೀಧರೆ

20 Mar, 2018

ಕಾರ್ಕಳ
‘ಕಾರ್ಕಳದಲ್ಲಿ ₹700 ಕೋಟಿಗೂ ಅಧಿಕ ಕಾಮಗಾರಿ’

ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಕಾರ್ಕಳದಲ್ಲಿ ₹700 ಕೋಟಿಗೂ ಅಧಿಕ ಕಾಮಗಾರಿ ನಡೆದಿದೆ ಎಂದು ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.

20 Mar, 2018

ಕುಂದಾಪುರ
ಗಂಡು ಹುಟ್ಟಿದರೆ ಸಂಭ್ರಮಿಸುವ ಕಾಂಗ್ರೆಸ್‌

ದೇಶದಲ್ಲಿ ಪ್ರಸ್ತುತ ಇರುವುದು ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟ ಮಾಡಿದ ಕಾಂಗ್ರೆಸ್‌ ಪಕ್ಷವಲ್ಲ, ಇಲ್ಲಿರುವುದು ಇಂದಿರಾ ಕಾಂಗ್ರೆಸ್‌ ಪಕ್ಷ. ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...

20 Mar, 2018

ಕಾರ್ಕಳ
ಮೊಯಿಲಿಗೆ ಗೌರವ ತಂದುಕೊಟ್ಟವರು ಕಾರ್ಕಳದ ಜನತೆ: ಹರ್ಷ ಮೊಯಿಲಿ

‘ನನ್ನ ತಂದೆ ವೀರಪ್ಪ ಮೊಯಿಲಿ ಅವರಿಗೆ ದೇಶದಲ್ಲಿ ಅತ್ಯಂತ ಗೌರವದ ಸ್ಥಾನ ತಂದು ಕೊಟ್ಟವರು ಕಾರ್ಕಳದ ಜನತೆ’ ಎಂದು ಕರ್ನಾಟಕ ಕಾಂಗ್ರೆಸ್ ರಾಜ್ಯ ಸಮಿತಿಯ...

20 Mar, 2018
ನಿವೇಶನ ರಹಿತ 679 ಮಂದಿಗೆ ಉಚಿತ ನಿವೇಶನ

ಉಡುಪಿ
ನಿವೇಶನ ರಹಿತ 679 ಮಂದಿಗೆ ಉಚಿತ ನಿವೇಶನ

19 Mar, 2018