ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ನಲ್ಲಿ ಬಿಎಸ್‌–6 ಇಂಧನ ಬಳಕೆ

Last Updated 16 ಡಿಸೆಂಬರ್ 2017, 6:00 IST
ಅಕ್ಷರ ಗಾತ್ರ

ಮಂಗಳೂರು: ಮುಂದಿನ ಏಪ್ರಿಲ್‌ನಿಂದ ದೆಹಲಿಯಲ್ಲಿ ಬಿಎಸ್ 6 ತೈಲೋತ್ಪನ್ನ ಬಳಕೆ ಆರಂಭವಾಗಲಿದೆ. 2020 ರ ವೇಳೆಗೆ ಯುರೋ 6 ತೈಲೋತ್ಪನ್ನಗಳ ಬಳಕೆ ಆರಂಭವಾಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧ್ಯಕ್ಷ ಸಂಜೀವ್‌ ಸಿಂಗ್ ತಿಳಿಸಿದರು.

ಸುರತ್ಕಲ್‌ ಎನ್‌ಐಟಿಕೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿಥೆನಾಲ್‌ ಜತೆಗೆ ಇಥೆನಾಲ್‌ ಬಳಕೆಗೂ ಐಒಸಿ ಹೆಚ್ಚಿನ ಗಮನ ನೀಡುತ್ತಿದ್ದು, ಹರಿಯಾಣ, ಗುಜರಾತ ಸೇರಿದಂತೆ ಮೂರು ಕಡೆಗಳಲ್ಲಿ ಇಥೆನಾಲ್ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇಥೆನಾಲ್‌ನಿಂದ ಒಟ್ಟು ಬಳಕೆಯ ಶೇ 10 ರಷ್ಟು ಇಂಧನವನ್ನು ಪೂರೈಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಮಿಥೆನಾಲ್‌, ಎಥೆನಾಲ್‌ಗಳ ಬಳಕೆಯಿಂದ ಸಾಂಪ್ರದಾಯಿಕ ಇಂಧನಗಳ ಉಳಿತಾಯ ಸಾಧ್ಯವಾಗಲಿದೆ. ಇದರ ಜತೆಗೆ ಮಾಲಿನ್ಯ ನಿಯಂತ್ರಣಕ್ಕೂ ಹೆಚ್ಚಿನ ಅನುಕೂಲ ಆಗಲಿದೆ ಎಂದರು.

ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ ಮಾತನಾಡಿ, ಪರ್ಯಾಯ ಇಂಧನಗಳ ಬಳಕೆಯ ಕುರಿತು ನಾಲ್ಕು ಹಂತಗಳಲ್ಲಿ ಕೆಲಸ ಮಾಡಲಾಗುತ್ತಿದೆ. ಉತ್ಪಾದನೆ, ಸಂಸ್ಕರಣೆ, ನಿರ್ವಹಣೆ ಹಾಗೂ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

* * 

ಮಿಥೆನಾಲ್‌ ಅನ್ನು ಇಂಧನವಾಗಿ ಬಳಕೆ ಮಾಡುವ ಕುರಿತು ಎರಡು ದಿನಗಳಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲಿದೆ.
ಡಾ. ವಿ.ಕೆ. ಸಾರಸ್ವತ್‌
ನೀತಿ ಆಯೋಗದ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT