ಉಡುಪಿ

ಸಾಹಸ ಉತ್ಸವ: ಪ್ರವಾಸೋದ್ಯಮಕ್ಕೆ ಒತ್ತು

ಪ್ರವಾಸೋದ್ಯಮಕ್ಕೆ ಉತ್ತೇ ಜನ ನೀಡುವ ಉದ್ದೇಶದಿಂದ ಮಲ್ಪೆ ಕಡಲ ಕಿನಾರೆಯಲ್ಲಿ ಇದೇ 29ರಿಂದ 31ರ ವರೆಗೆ ‘ಉಡುಪಿ ಪರ್ಬ’ ಹಾಗೂ ‘ಉಡುಪಿ ಸಾಹಸ ಉತ್ಸವ’ ಆಯೋಜಿಸಲಾಗುತ್ತದೆ

ಉಡುಪಿ ಉತ್ಸವದ ಲಾಂಛನವನ್ನು ಸಚಿವ ಪ್ರಮೋದ್ ಮಧ್ವರಾಜ್ ಅನಾವರಣಗೊಳಿಸಿದರು. ಪ್ರಜಾವಾಣಿ ಚಿತ್ರ

ಉಡುಪಿ: ಪ್ರವಾಸೋದ್ಯಮಕ್ಕೆ ಉತ್ತೇ ಜನ ನೀಡುವ ಉದ್ದೇಶದಿಂದ ಮಲ್ಪೆ ಕಡಲ ಕಿನಾರೆಯಲ್ಲಿ ಇದೇ 29ರಿಂದ 31ರ ವರೆಗೆ ‘ಉಡುಪಿ ಪರ್ಬ’ ಹಾಗೂ ‘ಉಡುಪಿ ಸಾಹಸ ಉತ್ಸವ’ ಆಯೋಜಿಸಲಾಗುತ್ತದೆ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಉತ್ಸವದ ಲಾಂಛನವನ್ನು ಶುಕ್ರವಾರ ಬಿಡುಗಡೆ ಮಾಡಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಉತ್ಸವದ ಅಂಗವಾಗಿ ರಾಷ್ಟ್ರಮಟ್ಟದ ಜೂನಿಯರ್‌ ತೆರೆದ ಈಜು ಸ್ಪರ್ಧೆ (ಓಪನ್‌ ವಾಟರ್ ಸ್ವಿಮ್ಮಿಂಗ್) ಮಲ್ಪೆ ಯಲ್ಲಿ 30ರಂದು ನಡೆಯಲಿದೆ. ಇಲ್ಲಿ ವಿಜೇತರಾದವರು ವಿಶ್ವಮಟ್ಟದ ಸ್ಪರ್ಧೆ ಯಲ್ಲಿ ಭಾಗವಹಿಸುವರು. ಈಗಾಗಲೇ 300 ಮಂದಿ ಸ್ಪರ್ಧಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

ರಾಜ್ಯದ ಒಟ್ಟು 10 ಕಡೆ ಸಾಹಸ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾ ಗುತ್ತದೆ. ಇದರಿಂದ ಸಾಹಸ ಪ್ರವಾ ಸೋದ್ಯಮಕ್ಕೆ ಪ್ರೋತ್ಸಾಹ ಸಿಗಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ, ನಿರ್ಮಿತಿ ಕೇಂದ್ರ, ಮಲ್ಪೆ ಅಭಿವೃದ್ಧಿ ಸಮಿತಿ ಹಾಗೂ ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಸಂಯುಕ್ತ ಆಶ್ರಯ ದಲ್ಲಿ ಎಲ್ಲ ಕಾರ್ಯಕ್ರಮ ನಡೆಯ ಲಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ: 29ರಂದು ಸಂಜೆ 6 ಗಂಟೆಗೆ ಮಲ್ಪೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಮೋದ್ ಮಧ್ವರಾಜ್ ಉತ್ಸವಕ್ಕೆ ಚಾಲನೆ ನೀಡುವರು. ಅಂದು ಸಂಜೆ 7ರಿಂದ ನಾಟ್ಯರೂಪಕ ನೃತ್ಯ ಕಲಾವಿದರ ತಂಡ ನೃತ್ಯ ಪ್ರಸ್ತುತಪಡಿಸಲಿದೆ. ರಾತ್ರಿ 8 ಗಂಟೆಗೆ ಶಿವಮಣಿ ಅವರಿಂದ ವಾದ್ಯ ಸಂಗೀತ ಕಾರ್ಯಕ್ರ ನಡೆಯಲಿದೆ.

30ರಂದು ಸಂಜೆ 6ರಿಂದ ರಾತ್ರಿ 9ರ ವರೆಗೆ ಆಳ್ವಾಸ್ ತಂಡದವರು ನೃತ್ಯ ವೈಭವ ಕಾರ್ಯಕ್ರಮ ನಡೆಸಿಕೊ ಡುವರು. 31ರಂದು ಸಂಜೆ 6ರಿಂದ 7ರ ವರೆಗೆ ಪ್ರಹ್ಲಾದ್ ಆಚಾರ್ಯ ಅವರ ಜಾದೂ ಕಾರ್ಯಕ್ರಮ ಇದೆ. 7ರಿಂದ ರಾತ್ರಿ 9 ಗಂಟೆಯ ವರೆಗೆ ಸರಿಗಮಪ ತಂಡದವರು ಸಂಗೀತ ಸಂಜೆ ಕಾರ್ಯಕ್ರಮ ಪ್ರಸ್ತುತಪಡಿಸುವರು.

ಉತ್ಸವದ ಅಂಗವಾಗಿ ಇಂದು (ಡಿ16) ಮಣಿಪಾಲದ ಮಣ್ಣಪಳ್ಳದ ರೋಟರಿ ಸಭಾ ಭವನದಲ್ಲಿ ರಾಷ್ಟ್ರಮಟ್ಟದ ಶಿಲ್ಪಕಲಾ ಶಿಬಿರ ಆಯೋಜಿಸಲಾಗಿದೆ. ಛಾಯಾಚಿತ್ರ ಸ್ಪರ್ಧೆ ಸೇಂಟ್ ಮೇರಿಸ್ ದ್ವೀಪದಲ್ಲಿ ನಡೆಸಲಾಗುತ್ತದೆ. ಅರಣ್ಯ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ಟ್ರೆಕ್ಕಿಂಗ್ ವ್ಯವಸ್ಥೆ ಸಹ ಮಾಡಲಾಗುತ್ತದೆ. ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಉಪಸ್ಥಿತರಿದ್ದರು.

* * 

ರಾಜ್ಯದ ಒಟ್ಟು 10 ಕಡೆಗಳಲ್ಲಿ ಸಾಹಸ ಕ್ರೀಡೆಗಳನ್ನು ನಡೆಸಲಾಗುತ್ತಿದೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ಕಾರ್ಯವು ಇದರಿಂದ ಆಗುತ್ತಿದೆ.
ಪ್ರಮೋದ ಪಧ್ವರಾಜ್‌, ಸಚಿವ

Comments
ಈ ವಿಭಾಗದಿಂದ ಇನ್ನಷ್ಟು
ಪುಷ್ಪ ಹೂರಣ: ಚಂದಗೊಂಡ ಸಭಾಂಗಣ

ಉಡುಪಿ
ಪುಷ್ಪ ಹೂರಣ: ಚಂದಗೊಂಡ ಸಭಾಂಗಣ

18 Jan, 2018
ಪಲಿಮಾರು ಮಠದಲ್ಲಿದೆ  800 ವರ್ಷಗಳ ಹಿಂದಿನ ಗ್ರಂಥ

ಉಡುಪಿ
ಪಲಿಮಾರು ಮಠದಲ್ಲಿದೆ 800 ವರ್ಷಗಳ ಹಿಂದಿನ ಗ್ರಂಥ

18 Jan, 2018
ಧರ್ಮ ಸಂಸತ್‌ ನಡೆಸಿ ದೇಶವನ್ನೇ ಸೆಳೆದ ಸಂತ

ಉಡುಪಿ
ಧರ್ಮ ಸಂಸತ್‌ ನಡೆಸಿ ದೇಶವನ್ನೇ ಸೆಳೆದ ಸಂತ

18 Jan, 2018
ಎಲ್ಲೆಲ್ಲೂ ಸಂಭ್ರಮದ ವಾತಾವರಣ

ಉಡುಪಿ
ಎಲ್ಲೆಲ್ಲೂ ಸಂಭ್ರಮದ ವಾತಾವರಣ

17 Jan, 2018

ಉಡುಪಿ
ಮನಸ್ಸಿನ ವಿಕಾಸಕ್ಕೆ ಸಾಹಿತ್ಯ ಅಗತ್ಯ: ವೈದೇಹಿ

‘ಸಮಗ್ರ ವಿಶ್ವ ಸಾಹಿತ್ಯದ ಪರಿಚಯವೇ ‘ಕೃತಿ ಜಗತ್ತು’ ಪುಸ್ತಕದಲ್ಲಿದೆ. ದುರಂತ, ದುಃಖ, ಸಂತೋಷವೆಲ್ಲವನ್ನೂ ವಿಶ್ಲೇಷಿಸಿ, ವಿಮರ್ಶಿಸಿ, ಅರ್ಥೈಸಿರುವ ಒಟ್ಟು 26 ಲೇಖನಗಳನ್ನು ಒಳಗೊಂಡಿದೆ.

17 Jan, 2018