ಕೆಂಭಾವಿ

ನೀರಾವರಿ ಸೌಲಭ್ಯದಿಂದ 12 ಗ್ರಾಮ ವಂಚಿತ: ಜೆಡಿಎಸ್ ಆರೋಪ

‘ನೀರಾವರಿ ಸಚಿವರು ಸುರಪುರ ತಾಲ್ಲೂಕಿನ 12 ಗ್ರಾಮಗಳಿಗೆ ನೀರಾವರಿ ಸೌಲಭ್ಯದಿಂದ ವಂಚಿತರಾಗುವಂತೆ ಮಾಡಿದ್ದಾರೆ. ಅವರು ರಾಜ್ಯದ ಸಚಿವರೊ ಅಥವಾ ವಿಜಯಪುರ ಜಿಲ್ಲೆಗೆ ನೀರಾವರಿ ಸಚಿವರೋ ಎಂಬುದು ಗೊತ್ತಾಗುತ್ತಿಲ್ಲ’

ಕೆಂಭಾವಿ: ‘ನೀರಾವರಿ ಸಚಿವರು ಸುರಪುರ ತಾಲ್ಲೂಕಿನ 12 ಗ್ರಾಮಗಳಿಗೆ ನೀರಾವರಿ ಸೌಲಭ್ಯದಿಂದ ವಂಚಿತರಾಗುವಂತೆ ಮಾಡಿದ್ದಾರೆ. ಅವರು ರಾಜ್ಯದ ಸಚಿವರೊ ಅಥವಾ ವಿಜಯಪುರ ಜಿಲ್ಲೆಗೆ ನೀರಾವರಿ ಸಚಿವರೋ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಜೆಡಿಎಸ್ ಯುವ ಮುಖಂಡ ಅಮೀನರೆಡ್ಡಿ ಮಾಲಿಪಾಟೀಲ ಯಾಳಗಿ ಆರೋಪಿಸಿದರು.

ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆಯಲ್ಲಿ ಸುರಪುರ ತಾಲ್ಲೂಕಿನ 12 ಹಳ್ಳಿಗಳನ್ನು ಕೈಬಿಟ್ಟಿದ್ದನ್ನು ಖಂಡಿಸಿ ಆಲಮಟ್ಟಿ ಕೆಬಿಜೆಎನ್ಎಲ್ ಕಚೇರಿಯ ಮುಂದೆ ಮೂರು ದಿನಗಳಿಂದ ಕರ್ನಾಟಕ ಪ್ರಾಂತ ರೈತ ಸಂಘ ಕೆಂಭಾವಿ ಹೋಬಳಿ ಸಮಿತಿ ವತಿಯಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶುಕ್ರವಾರ ಪಾಲ್ಗೊಂಡು, ನಂತರ ಕೆಂಭಾವಿ ಯಲ್ಲಿ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.

‘ಈ ಹಿಂದೆ ಯೋಜನೆ ರೂಪಿಸುವಾಗ 12 ಗ್ರಾಮಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ, ಯೋಜನೆಗೆ ಚಾಲನೆ ದೊರಕುವಾಗ ಈ ಗ್ರಾಮಗಳನ್ನು ಕೈಬಿಟ್ಟಿರುವುದು ರಾಜಕೀಯ ಕುತಂತ್ರವಾಗಿದೆ. ಶಹಾಪುರದ ಹಾಲಿ ಮತ್ತು ಮಾಜಿ ಶಾಸಕರ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಈ 12 ಗ್ರಾಮಗಳು ನೀರಾವರಿಯಿಂದ ವಂಚಿತವಾಗಿವೆ. ಚುನಾವಣೆ ಸಂದರ್ಭದಲ್ಲಿ ಇಬ್ಬರೂ ನಾಯಕರು ಇದನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ರೈತರ ಮೇಲೆ ನಿಜವಾದ ಪ್ರೀತಿ ಯಿದ್ದರೆ ಈ ಮೊದಲೇ ಈ ಗ್ರಾಮಗಳನ್ನು ಕೈಬಿಡುತ್ತಿರುವಾಗಲೇ ಹೋರಾಡಬೇಕಾಗಿತ್ತು’ ಎಂದು ಟೀಕಿಸಿದರು.

‘ಶೀಘ್ರದಲ್ಲಿ ಯೋಜನೆಯಡಿ ಸುರಪುರ ತಾಲ್ಲೂಕಿನ 12 ಗ್ರಾಮಗಳನ್ನು ಸೇರಿಸದಿದ್ದರೆ ಸಾವಿರಾರು ರೈತರ ಜೊತೆಗೆ ನೀರಾವರಿ ಸಚಿವರ ಮನೆಯ ಮುಂದೆ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು. ಕೆಂಭಾವಿ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಅಕ್ಬರ್ ನಾಲತವಾಡ್, ಸಾಯಬಣ್ಣ ದೊಡ್ಡಮನಿ, ಶರಣಗೌಡ ಮಾಲಹಳ್ಳಿ, ಹಣಮಂತ್ರಾಯ ಮಾಣಸುಣಗಿ, ಭಾಗೇಶ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಕಾಂಗ್ರೆಸ್ ಮುಕ್ತ ಭಾರತ ಸನ್ನಿಹಿತ

ಯಾದಗಿರಿ
ಕಾಂಗ್ರೆಸ್ ಮುಕ್ತ ಭಾರತ ಸನ್ನಿಹಿತ

17 Mar, 2018

ಅಫಜಲಪುರ
ಸ್ತ್ರೀಶಕ್ತಿ ಸಂಘಗಳಿಂದ ಅಭಿವೃದ್ಧಿ ಸಾಧ್ಯ: ಶಾಸಕ

 ‘ಸ್ತ್ರೀಶಕ್ತಿ ಸಂಘಗಳು ರಚನೆಯಾಗಿದ್ದರಿಂದ ಮಹಿಳೆಯರಿಗೆ ಸಾಮಾಜಿಕ ಹಾಗೂ ಆರ್ಥಿಕವಾಗಿ ಸಹ ಕಾರಿಯಾಗಿದೆ. ಅವರ ಸರ್ವಾಂಗೀಣ ಅಭಿವೃದ್ಧಿಗೆ ಸಂಘಗಳು ಕಾರಣವಾಗಿವೆ’ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ತಿಳಿಸಿದರು. ...

17 Mar, 2018

ಆಳಂದ
‘ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ’

‘ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಹೆಚ್ಚು ಆತಂಕ, ಒತ್ತಡಕ್ಕೆ ಒಳಗಾಗಬಾರದು. ಮಾರ್ಚ್‌ 23ರಿಂದ ಆರಂಭಗೊಳ್ಳುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಮರ್ಪಕ ಸಿದ್ಧತೆ ಮಾಡಿಕೊಂಡು ಆತ್ಮವಿಶ್ವಾಸದಿಂದ ಎದುರಿಸಬೇಕು’ ಎಂದು...

17 Mar, 2018

ವಾಡಿ
ವಿದ್ಯಾರ್ಥಿಗಳ ಜೀವನ ಅಮೂಲ್ಯ: ಶಾಂತಕುಮಾರ

‘ವಿದ್ಯಾರ್ಥಿಗಳ ಜೀವನ ಅಮೂಲ್ಯವಾದುದು. ಅದನ್ನು ಸದ್ಬಳಕೆ ಮಾಡಿಕೊಂಡಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ನಾಲವಾರ ವಲಯ ಗೌರವ ಕಾರ್ಯದರ್ಶಿ...

17 Mar, 2018

ಶಹಾಬಾದ
‘ಸರ್ವಜ್ಞ ತ್ರಿಕಾಲ ಜ್ಞಾನಿ’

‘ತ್ರಿಕಾಲ ಜ್ಞಾನಿಯಾಗಿ ವಾಸ್ತವ ಅರಿತು, ತ್ರಿಪದಿಗಳ ಮೂಲಕ ಕಂಡ ಸತ್ಯವನ್ನು ನೇರ ಮತ್ತು ನಿಷ್ಠುರವಾಗಿ ಹೇಳಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಮೂಲಕ ವರಕವಿ ಸರ್ವಜ್ಞ...

17 Mar, 2018