ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಸಬಲೀಕರಣಕ್ಕೆ ಸಲಹೆ

Last Updated 16 ಡಿಸೆಂಬರ್ 2017, 7:01 IST
ಅಕ್ಷರ ಗಾತ್ರ

ಹಳಿಯಾಳ: ಸ್ವ ಸಹಾಯ ಸಂಘಗಳ ಮುಖಾಂತರ ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಿ, ಸ್ವಾವಲಂಬಿ ಬದುಕನ್ನು ನಿರೂಪಿಸುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಹಕಾರಿ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಶುಕ್ರವಾರ ದುರ್ಗಾದೇವಿ ರಂಗ ಮಂದಿರದಲ್ಲಿಗ್ರಾಮಾಭಿವೃದ್ದಿ ಯೋಜನೆ ಹಳಿಯಾಳ ಸಾಂಬ್ರಾಣಿ ಪ್ರಗತಿ ಸ್ವ ಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಸಾಮೂ
ಹಿಕ ಸತ್ಯನಾರಾಯಣ ಪೂಜೆ, ಸಾಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಆರೋಗ್ಯ, ಶಿಕ್ಷಣ, ಆರ್ಥಿಕ ಸ್ವಾವಲಂಬನೆಗೆ ಹೆಚ್ಚಿನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಹಳಿಯಾಳದಲ್ಲಿ 2022 ಸ್ವ ಸಹಾಯ ಗುಂಪನ್ನು ರಚಿಸಿ 19,056 ಸದಸ್ಯರನ್ನು ಹೊಂದಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಶಾಸನ ವಿತರಣೆ ಕಾರ್ಯಕ್ರಮ, ಜೀವನ ಮಧುರ, ಸಂಪೂರ್ಣ ಸುರಕ್ಷಾ, ಮಹಿಳಾ ಜ್ಞಾನ ವಿಕಾಸ, ಸಮುದಾಯ ಅಭಿವೃದ್ಧಿ, ಕೃಷಿ ಅಭಿವೃದ್ಧಿ, ಜನಜಾಗೃತಿ ಕಾರ್ಯಕ್ರಮ ಮತ್ತಿತರರ ಕಾರ್ಯಕ್ರಮ ನಡೆಯುತ್ತಿವೆ. ಅವುಗಳ ಸದುಪಯೋಗ ಪಡೆಯಬೇಕು. ಸ್ವ ಸಹಾಯ ಸಂಘದಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸಬೇಕು’ ಎಂದು ಅವರು ಹೇಳಿದರು.

ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ  ಮಾತನಾಡಿದರು. ಧರ್ಮಸ್ಥಳ ಗ್ರಾಮೋದಯ ಸಂಘದ ನಿರ್ದೇಶಕ ವಿವೇಕ ಪಾಯಸ್, ಲಕ್ಷ್ಮಣ ಎಂ. ಜನಜಾಗೃತಿ ವೇದಿಕೆಯ ಅಧ್ಯಕ್ಷ ಗಾಂವಕರ, ಯೋಜನಾಧಿಕಾರಿ ಹರೀಶ ಪಾವಸ್ಕರ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ರೇಣಕೆ, ಸಾಮೂಹಿಕ ಸತ್ಯ ನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸಂತೋಷ ಘಟಕಾಂಬಳೆ, ನಾರಾಯಣ ಮುಕ್ತಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT