ಕುಷ್ಟಗಿ

‘ಮುಂದಿನ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ’

‘ಅಮರೇಗೌಡ ಬಯ್ಯಾಪುರ ಈ ಕ್ಷೇತ್ರದ ಶಾಸಕರಾಗುವುದು ಮತ್ತು ಸಿದ್ದರಾಮಯ್ಯ ಮುಂದಿನ ಅವಧಿಗೂ ಮುಖ್ಯಮಂತ್ರಿಯಾಗುವುದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ’

ಕುಷ್ಟಗಿ: ‘ಅಮರೇಗೌಡ ಬಯ್ಯಾಪುರ ಈ ಕ್ಷೇತ್ರದ ಶಾಸಕರಾಗುವುದು ಮತ್ತು ಸಿದ್ದರಾಮಯ್ಯ ಮುಂದಿನ ಅವಧಿಗೂ ಮುಖ್ಯಮಂತ್ರಿಯಾಗುವುದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಾಜಿ ಶಾಸಕ ಹಸನ್‌ಸಾಬ್‌ ದೋಟಿಹಾಳ ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರ ಆರೋಪದಡಿ ಜೈಲಿಗೆ ಹೋಗಿ ಬಂದಿರುವ ಬಿ.ಎಸ್‌.ಯಡಿಯೂರಪ್ಪ ಅಂಥವರು ಮುಖ್ಯಮಂತ್ರಿಯಾಗುವುದು ಸಾಧ್ಯವೇ ಇಲ್ಲ’ ಎಂದರು.

‘ಎಲ್ಲ ವರ್ಗಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳಿಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿರುವುದು ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಷ್ಟೇ ಅಲ್ಲ, ಈ ನಾಡಿಗೆ ಹೆಮ್ಮೆಯ ವಿಷಯ. ಹಾಗಾಗಿ ಬರುವ ಚುನಾವಣೆಯಲ್ಲಿ ಮತ ಕೇಳುವುದಕ್ಕೆ ಜನರ ಬಳಿ ಹೋಗಲು ಯಾವುದೇ ಹಿಂಜರಿಕೆ ಇಲ್ಲ’ ಎಂದರು.

ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಮಾತನಾಡಿ, ‘ಈ ತಾಲ್ಲೂಕಿಗೆ ಶಾಲೆ, ಕಾಲೇಜು, ವಸತಿ ನಿಲಯಗಳನ್ನು ಮಂಜೂರು ಮಾಡುವುದು ಸೇರಿದಂತೆ ಅನೇಕ ರೀತಿಯ ಅಭಿವೃದ್ಧಿ ಕಾರ್ಯಕ್ಕೆ ಮತ್ತು ಜನರ ಬೇಡಿಕೆಗೆ ಕಾಂಗ್ರೆಸ್‌ ಸ್ಪಂದಿಸಿದೆ’ ಎಂದರು. ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಫಕೀರಪ್ಪ ಚಳಗೇರಿ ಮಾತನಾಡಿದರು.

Comments
ಈ ವಿಭಾಗದಿಂದ ಇನ್ನಷ್ಟು

ಕೊಪ್ಪಳ
ಅಸಮಾನತೆ ಇರುವವರೆಗೆ ಬಸವ ಸಂದೇಶ ಜೀವಂತ

'ಅಸಮಾನತೆ, ಶೋಷಣೆ ಇರುವವರೆಗೂ ಬಸವಣ್ಣನ ವಿಚಾರಧಾರೆಗಳು ಜೀವಂತವಾಗಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

20 Mar, 2018
ಕುಡಿವ ನೀರಿಗೆ ತಪ್ಪದ ಅಲೆದಾಟ

ತಾವರಗೇರಾ
ಕುಡಿವ ನೀರಿಗೆ ತಪ್ಪದ ಅಲೆದಾಟ

20 Mar, 2018
ಬರಕ್ಕೆ ಸೆಡ್ಡು ಹೊಡೆದು ರೇಷ್ಮೆ ಕೃಷಿ

ತಾವರಗೇರಾ
ಬರಕ್ಕೆ ಸೆಡ್ಡು ಹೊಡೆದು ರೇಷ್ಮೆ ಕೃಷಿ

19 Mar, 2018
ರಾಜ್ಯದಲ್ಲಿ ಕಾಂಗ್ರೆಸ್‌ ತಲೆ ಎತ್ತದಂತೆ ಮಾಡಿ: ಬಂಡಾರು ದತ್ತಾತ್ರೇಯ ಹೇಳಿಕೆ

ಕುಷ್ಟಗಿ
ರಾಜ್ಯದಲ್ಲಿ ಕಾಂಗ್ರೆಸ್‌ ತಲೆ ಎತ್ತದಂತೆ ಮಾಡಿ: ಬಂಡಾರು ದತ್ತಾತ್ರೇಯ ಹೇಳಿಕೆ

17 Mar, 2018
ವಿವಿಧ ಮಹನೀಯರ ಜಯಂತಿ ಆಚರಣೆಗೆ ನಿರ್ಧಾರ

ಕೊಪ್ಪಳ
ವಿವಿಧ ಮಹನೀಯರ ಜಯಂತಿ ಆಚರಣೆಗೆ ನಿರ್ಧಾರ

17 Mar, 2018