ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ ಪ್ರಪಂಚ - ವೈವಿಧ್ಯ, ವೈಶಿಷ್ಟ್ಯ

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

1. ಸುಂದರ ಚಿತ್ತಾರದ ಆಕರ್ಷಕ ಚರ್ಮ ಪಡೆದಿರುವ ಕೆಲ ಪ್ರಸಿದ್ಧ ‘ಬೆಕ್ಕು’ಗಳನ್ನು ಈ ಕೆಳಗೆ ಹೆಸರಿಸಿದೆ. ಇವುಗಳಲ್ಲಿ ಚಿತ್ರ-1ರಲ್ಲಿರುವ ಬೆಕ್ಕು ಯಾವುದು? ಯಾವುದು ಅತ್ಯಂತ ಚಿಕ್ಕ ಗಾತ್ರದ್ದು? ಯಾವುದು ಏಷ್ಯಾದಲ್ಲಿಲ್ಲ?

ಅ. ಚೀತಾ → ಬ. ಚಿರತೆ (ಲೆಪರ್ಡ್)
ಕ. ಹಿಮ ಚಿರತೆ ಡ. ಕ್ಲೌಡೆಡ್ ಲೆಪರ್ಡ್

2. ಹೇರಳ ಹಕ್ಕಿಗಳಂತೆಯೇ ಕೆಲವಾರು ಪಾತರಗಿತ್ತಿ ಪ್ರಭೇದಗಳೂ ಕೂಡ ವಲಸೆ ಪಯಣವನ್ನು ನಡೆಸುತ್ತವೆ. ಅಂತಹ ಚಿಟ್ಟೆಗಳಲ್ಲೆಲ್ಲ ಅತ್ಯಂತ ವಿಖ್ಯಾತವಾದ ಪಾತರಗಿತ್ತಿ ಪ್ರಭೇದ ಚಿತ್ರ-2ರಲ್ಲಿದೆ. ಯಾವುದು ಈ ಚಿಟ್ಟೆ - ಗುರುತಿಸಬಲ್ಲಿರಾ?

ಅ. ಪೈಂಟೆಡ್ ಲೇಡಿ→ ಬ. ರೆಡ್ ಅಡ್ಮಿರಲ್
ಕ. ಮೋನಾರ್ಕ್→ ಡ. ಕ್ಲೌಡೆಡ್ ಸ್ಕಿಪ್ಪರ್

3. ಧರೆಯ ಉತ್ತರ ಧ್ರುವವನ್ನು ಪರಿವರಿಸಿದ ಶೀತಲ ಲೋಕ ಆರ್ಕ್ಟಿಕ್‌ನ ಒಂದು ಪ್ರಸಿದ್ಧ ಪ್ರಾಣಿ ‘ಮಸ್ಕ್ ಆಕ್ಸ್’ ಚಿತ್ರ-3ರಲ್ಲಿದೆ. ಈ ಕೆಳಗಿನ ಯಾವ ಯಾವ ಪ್ರದೇಶಗಳಲ್ಲಿ ಮಸ್ಕ್ ಆಕ್ಸ್ ಹಿಂಡುಗಳನ್ನು ನೇರ ನೋಡಬಹುದು?

ಅ. ಮಂಗೋಲಿಯಾ→ ಬ. ಗ್ರೀನ್ ಲ್ಯಾಂಡ್
ಕ. ನ್ಯೂಜಿಲೆಂಡ್‌→ ಡ. ಕೆನಡ
ಇ. ಅಲಾಸ್ಕ→ ಈ. ಟಾಸ್ಮೇನಿಯಾ

4. ಭಾರೀ ಶರೀರದ, ದೊಡ್ಡ ಕೊಕ್ಕಿನ, ಪರಿಚಿತ ಮೀನುಗಾರ ಪಕ್ಷಿಯೊಂದು ಚಿತ್ರ-4ರಲ್ಲಿದೆ. ಈ ಹಕ್ಕಿ ಯಾವುದು, ಗುರುತಿಸಬಲ್ಲಿರಾ?

ಅ. ಪೆಂಗ್ವಿನ್→ ಬ. ಪೆಲಿಕನ್
ಕ. ಆಲ್ಬಟ್ರಾಸ್ ಡ. ಹಂಸ
ಇ. ಬಿಳಿ ಕೊಕ್ಕರೆ

5. ಮೂರು ವಿಧ ಸುಪ್ರಸಿದ್ಧ ಪೂರ್ವಮಾನವ ಪ್ರಭೇದಗಳ ಚಿತ್ರಗಳು ಇಲ್ಲಿವೆ (ಚಿತ್ರ 5, 6 ಮತ್ತು 7). ಈ ಕೆಳಗೆ ಹೆಸರಿಸಲಾಗಿರುವ ಕೆಲವು ಪೂರ್ವಮಾನವರಲ್ಲಿ ಚಿತ್ರಗಳಲ್ಲಿರುವ ಪ್ರಭೇದಗಳನ್ನು ಪತ್ತೆ ಹಚ್ಚುವುದು ನಿಮಗೆ ಸಾಧ್ಯವೆ?

ಅ. ಆರ್ಡಿಪಿಥೀಕಸ್ ರಾಮಿಡಸ್
ಬ. ಅಸ್ಟ್ರಲೋಪಿಥೀಕಸ್ ಅಫರೆನ್ಸಿಸ್
ಕ. ಹೋಮೋ ಇರೆಕ್ಟಸ್
ಡ. ಹೋಮೋ ಫ್ಲಾರೆಸಿಯೆನ್ಸಿಸ್
ಇ. ಹೋಮೋ ನಿಯಾಂಡರ್ ಥಾಲೆನ್ಸಿಸ್
ಈ. ಹೋಮೋ ನಾಲೆಡಿ

6. ತನ್ನ ವಿಚಿತ್ರ ರೂಪದಿಂದಲೇ ಪ್ರಸಿದ್ಧವಾಗಿರುವ ವಿಸ್ಮಯದ ಪ್ರಾಣಿ ‘ಆಕ್ಸಲೋಟ್ಲ್‘ ಚಿತ್ರ-8ರಲ್ಲಿದೆ. ಇದು ಯಾವ ಪ್ರಾಣಿವರ್ಗಕ್ಕೆ ಸೇರಿದ ಜೀವಿ ಗೊತ್ತೇ?

ಅ. ಮತ್ಸ್ಯ ವರ್ಗ ಬ. ಉಭಯವಾಸಿ ವರ್ಗ
ಕ. ಸರೀಸೃಪ ವರ್ಗ ಡ. ಮೃದ್ವಂಗಿ ವರ್ಗ

7. ದಕ್ಷಿಣ ಅಮೆರಿಕದ ‘ಅಮೆಜೋನಿಯಾ ವೃಷ್ಟಿವನ’ ವಾಸಿಯಾಗಿರುವ ಮಂಗ ವಿಧವೊಂದು ಚಿತ್ರ-9ರಲ್ಲಿದೆ. ಇಲ್ಲಿ ಹೆಸರಿಸಿರುವ ಪ್ರಸಿದ್ಧ ಮಂಗಗಳ ಪಟ್ಟಿಯಲ್ಲಿ ಅಮೆಜೋನಿಯದ ಮಂಗಗಳು ಯಾವುವು- ಪತ್ತೆ ಮಾಡಿ:

ಅ. ಮ್ಯಾಂಡ್ರಿಲ್→ ಬ. ಹೌಲರ್
ಕ. ಕೊಲೋಬಸ್→ ಡ. ಲಂಗೂರ್
ಇ. ಅಳಿಲು ಮಂಗ→ ಈ. ರೀಸಸ್ ಮಂಗ
ಉ. ಬಬೂನ್→ ಟ. ಗೂಬೆ ಮಂಗ

8. ವಿಸ್ಮಯಕರ ರೂಪದ ದ್ವಿವಿಧ ಮಂಗಗಳು ಚಿತ್ರ-10 ಮತ್ತು ಚಿತ್ರ-11ರಲ್ಲಿವೆ. ಕ್ರಮವಾಗಿ ಮಾರುವೇಷಕ್ಕೂ, ವಿಶಿಷ್ಟ ಆಕಾರಕ್ಕೂ ಪ್ರಸಿದ್ಧವಾಗಿ, ರೂಪಾನ್ವಯ ಹೆಸರುಗಳನ್ನೇ ಪಡೆದಿರುವ ಈ ಮತ್ಸ್ಯಗಳನ್ನು ಗುರುತಿಸಬಲ್ಲಿರಾ?

ಅ. ಏಂಜಲರ್→ಬ. ಸೀ ಡ್ರ್ಯಾಗನ್
ಕ. ಸಾಲ್ಮನ್→ →ಡ. ಸೀಲಕಾಂತ್
ಇ. ಪೆಟ್ಟಿಗೆ ಮೀನು→ಈ. ಜೀಬ್ರಾ ಮೀನು
ಉ. ಬೆಕ್ಕು ಮೀನು

9. ಚಿತ್ರ-12ರಲ್ಲಿರುವ ಇರುವೆ ಗುಂಪನ್ನು ಗಮನಿಸಿ. ನಿಮ್ಮ ಮನೆ ಸುತ್ತಲ ವೃಕ್ಷಗಳಲ್ಲೂ ಕಾಣಬಹುದಾದ ಈ ಉಗ್ರ ಇರುವೆ ವಿಧ ಈ ಪಟ್ಟಿಯಲ್ಲಿ ಯಾವುದು?

ಅ. ದಂಡಿರುವೆ→ ಬ. ಜೇನು ಕುಡಿಕೆ
ಕ. ಬೆಂಕಿ ಇರುವೆ→ ಡ. ನೇಕಾರ ಇರುವೆ
ಇ. ಬಡಗಿ ಇರುವೆ→ ಈ. ರೈತ ಇರುವೆ

10. ಒಂಟೆಗಳಲ್ಲಿ ಎರಡು ವಿಧಗಳಿವ: ‘ಡ್ರಾಮೆಡರಿ ಒಂಟೆ ಮತ್ತು ಬ್ಯಾಕ್ಟ್ರಿಯನ್ ಒಂಟೆ‘. ಎರಡು ಡುಬ್ಬಗಳ ಈ ಎರಡನೆಯ ಬಗೆಯ ಒಂಟೆ ಚಿತ್ರ-13ರಲ್ಲಿದೆ. ಒಂಟೆಗಳ ‘ಕ್ಯಾಮಿಲಿಡೇ’ ಕುಟುಂಬಕ್ಕೇ ಸೇರಿದ ಪ್ರಾಣಿಗಳ ಈ ಪಟ್ಟಿಯಲ್ಲಿ ಯಾವುದು ಗುಂಪಿಗೆ ಸೇರಿಲ್ಲ ?

ಅ. ವಿಕ್ಯೂನಾ→ ಬ. ಒಕಾಪಿ ಕ. ಲಾಮಾ→ ಡ. ಅಲ್ಪಾಕ

11. ಹೊಂದಿಸಿ ಕೊಡಿ:

1. ಆಕ್ಟೋಪಸ್→ಅ. ಉಭಯವಾಸಿ
2. ಜಾಗ್ವಾರ್   →ಬ. ಮೀನು
3. ಜೇಡ          →ಕ. ಹಕ್ಕಿ
4. ಸೈಡ್ ವೈಂಡರ್ →ಡ. ಕೀಟ
5. ಪಫಿನ್       →ಇ. ಮೃದ್ವಂಗಿ
6. ಪಫರ್     →ಈ. ಸಂಧಿಪದಿ
7. ನ್ಯೂಟ್     →ಉ. ಸ್ತನಿ
8. ಪಾತರಗಿತ್ತಿ   →ಟ. ಸರೀಸೃಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT