ವಾರೆಗಣ್ಣು

ಮೊಟ್ಟೆಗೂ ಎಂಟ್ರಿ ಇಲ್ಲ!

‘ಅಯ್ಯೊ ಬಿರಿಯಾನಿ ಮಾತು ಹಾಗಿರಲಿ, ಅಪ್ಪಿತಪ್ಪಿ ಮೊಟ್ಟೆಯನ್ನೂ ತರುವಂತಿಲ್ಲ. ಎಲ್ಲ ರೇವಣ್ಣ ಅವರದ್ದೇ ಕಂಟ್ರೋಲ್‌ ಸ್ವಾಮಿ’ ಎಂದು ಜೋರಾಗಿ ನಕ್ಕು ಜಾಗ ಖಾಲಿ ಮಾಡಿದರು.

ಬೆಂಗಳೂರು: ರೈತರ ಮತ್ತು ಹಳ್ಳಿಗಾಡಿನ ಜನರ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್‌ನ ಹೊಸ ಕಚೇರಿಯ ಉದ್ಘಾಟನೆಯು ಹೋಮ, ಹವನ, ಪೂಜೆಗಳೊಂದಿಗೆ ವಿಧ್ಯುಕ್ತವಾಗಿ ನಡೆದದ್ದು ಎಲ್ಲರಿಗೂ ಗೊತ್ತಿರುವಂಥದ್ದೇ. ‘ದೊಡ್ಡ ಗೌಡರು’ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಕುಮಾರಣ್ಣ ರಾಜ್ಯಕ್ಕೆ ಅಧ್ಯಕ್ಷರು. ಆದರೆ, ಪಕ್ಷದ ಕಚೇರಿ ಜೆ.ಪಿ. ಸದನಕ್ಕೆ ಮಾತ್ರ ಎಚ್‌.ಡಿ.ರೇವಣ್ಣ ಅವರೇ ಬಿಗ್‌ಬಾಸ್‌. ಅವರದ್ದೇ ಪೂರ್ಣ ಹಿಡಿತ. ಹೀಗಾಗಿ ದೂರದ ಊರುಗಳಿಂದ ಬರುವ ಕಾರ್ಯಕರ್ತರಿಗೆ ಬಿಸಿ ಬೇಳೆಬಾತ್‌, ಮೊಸರನ್ನ, ಪಲಾವ್‌ ಬಿಟ್ಟರೆ ಬೇರೇನೂ ಇಲ್ಲ. ಈಚೆಗೆ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಗೋಡಂಬಿ, ಬಿಸ್ಕತ್‌ ನೀಡಲಾಗಿತ್ತು. ‘ಏನ್‌ ಸಾರ್‌ ಗೋಡಂಬಿ, ಬಿಸ್ಕತ್‌ ಬಿಟ್ಟು ಚಿಕನ್‌ ಬಿರಿಯಾನಿ ಹಾಕಿಸಿ’ ಎಂದು ಮಾಧ್ಯಮದ
ಪ್ರತಿನಿಧಿಯೊಬ್ಬರು ಪಕ್ಷದ ನಾಯಕರೊಬ್ಬರ ಕಾಲೆಳೆದರು.

‘ಅಯ್ಯೊ ಬಿರಿಯಾನಿ ಮಾತು ಹಾಗಿರಲಿ, ಅಪ್ಪಿತಪ್ಪಿ ಮೊಟ್ಟೆಯನ್ನೂ ತರುವಂತಿಲ್ಲ. ಎಲ್ಲ ರೇವಣ್ಣ ಅವರದ್ದೇ ಕಂಟ್ರೋಲ್‌ ಸ್ವಾಮಿ’ ಎಂದು ಜೋರಾಗಿ ನಕ್ಕು ಜಾಗ ಖಾಲಿ ಮಾಡಿದರು. 

Comments
ಈ ವಿಭಾಗದಿಂದ ಇನ್ನಷ್ಟು

ವಾರೆಗಣ್ಣು
ಹಿಂಡುವ ಮುನ್ನ ಮೇವು–ಬೂಸಾ...!

ಪುರಾತನವಾದ ಸಿದ್ಧೇಶ್ವರ ದೇಗುಲದ ಪಕ್ಕದಲ್ಲಿನ ಶಿವಾನುಭವ ಮಂಟಪದ ಜಾಗದಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸಲಾಗುವುದು. ಸುತ್ತಲೂ ಮಳಿಗೆ ಕಟ್ಟಿಸಿ, ಬಾಡಿಗೆಗೆ ಕೊಡಲಾಗುವುದು.

21 Jan, 2018

ವಾರೆಗಣ್ಣು
ಗಂಡನ ಹೆಸರು ಬದಲಿಸಿದ್ದು ಯಾಕೆ?

ಅಲ್ರೀ... ನಾವ್‌ ಎಷ್ಟ್‌ ಅಂತ ನಿಮ್ಮನ್ನ ಕೇಳೋದು. ಇಲ್ಲಿಗೆ ಎರಡ್‌ ವರ್ಷ ಆತ್‌ ಅಲ್ರಿ... ಒಂದ್‌ ಸಾಲಿಗೂ ಸುಣ್ಣಬಣ್ಣ ಬಳೀಲಿಲ್ಲ. ದುರಸ್ತಿನೂ ಮಾಡಿಸ್ಲಿಲ್ಲ. ಮಂದಿ...

21 Jan, 2018
ಭಯದ ನೆರಳಲ್ಲಿ ನರಳಿದ ಸಾಕ್ಷಿ...!

ಕಟಕಟೆ
ಭಯದ ನೆರಳಲ್ಲಿ ನರಳಿದ ಸಾಕ್ಷಿ...!

21 Jan, 2018
ಇಸ್ರೊಗೊಬ್ಬ ಹೊಸ  ‘ಟಾಸ್ಕ್ ಮಾಸ್ಟರ್’

ವ್ಯಕ್ತಿ
ಇಸ್ರೊಗೊಬ್ಬ ಹೊಸ ‘ಟಾಸ್ಕ್ ಮಾಸ್ಟರ್’

21 Jan, 2018
‘ಜಾಗತಿಕ ಮಟ್ಟದ ವಿ.ವಿ.ಯಾಗಿ ರೂಪಿಸುವ ಕನಸು’

ಪ್ರೊ. ಎಸ್. ಜಾಫೆಟ್ - ವಾರದ ಸಂದರ್ಶನ
‘ಜಾಗತಿಕ ಮಟ್ಟದ ವಿ.ವಿ.ಯಾಗಿ ರೂಪಿಸುವ ಕನಸು’

21 Jan, 2018