ವಾರೆಗಣ್ಣು

‘ಮಾಮಿ’ ರೋಗ ಭಯಾನಕ!

ಡೆಂಗೆ, ಚಿಕುನ್‌ಗುನ್ಯಾ, ಮಲೇರಿಯಾ ಎಲ್ಲೆಡೆ ಸಾಮಾನ್ಯವಾಗಿ ಕಾಡುತ್ತಿವೆ; ಆದರೆ, ಇದ್ಯಾವುದು ಹೊಸ ಕಾಯಿಲೆ ಎಂದು ಸಭಿಕರು ತಲೆ ಕೆರೆದುಕೊಳ್ಳುತ್ತಿರುವಾಗಲೇ,  ‘ವೈದ್ಯರು’, ಮಾಮಿ ಎಂದರೆ, ‘ಮಾಧ್ಯಮದಲ್ಲಿ ಮಿಂಚುವ’ ಕಾಯಿಲೆ ಎಂದು ಇದರ ವಿಸ್ತೃತ ರೂಪ ವಿವರಿಸಿದರು.

ಇದೊಂದು ವಿಚಿತ್ರ ಮತ್ತು ಭಯಾನಕ ರೋಗ. ಇದರ ಹೆಸರು ‘ಮಾಮಿ ರೋಗ’. ಈಗ ಇದು ಎಲ್ಲೆಡೆ, ಎಲ್ಲಾ ರಂಗಗಳಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಚಳವಳಿ, ಹೋರಾಟಗಾರರು ಮುಕ್ತವಾಗಿಲ್ಲ. ಈ ಕಾಯಿಲೆಯಿಂದ ಎಲ್ಲರೂ ದೂರವಿರಬೇಕು!

ನಗರದಲ್ಲಿ ಭಾನುವಾರ ಲೋಕಚರಿತ ಆಯೋಜಿಸಿದ್ದ ಸಮುದಾಯ ಕೂಟದ ಮಾತುಕತೆ–ಓದು ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀನಿವಾಸ ವೈದ್ಯ ಅವರು ಇಂತಹ ಕಳಕಳಿಯ ಸಲಹೆ ನೀಡಿದರು.

ಡೆಂಗೆ, ಚಿಕುನ್‌ಗುನ್ಯಾ, ಮಲೇರಿಯಾ ಎಲ್ಲೆಡೆ ಸಾಮಾನ್ಯವಾಗಿ ಕಾಡುತ್ತಿವೆ; ಆದರೆ, ಇದ್ಯಾವುದು ಹೊಸ ಕಾಯಿಲೆ ಎಂದು ಸಭಿಕರು ತಲೆ ಕೆರೆದುಕೊಳ್ಳುತ್ತಿರುವಾಗಲೇ, ‘ವೈದ್ಯರು’, ಮಾಮಿ ಎಂದರೆ, ‘ಮಾಧ್ಯಮದಲ್ಲಿ ಮಿಂಚುವ’ ಕಾಯಿಲೆ ಎಂದು ಇದರ ವಿಸ್ತೃತ ರೂಪ ವಿವರಿಸಿದರು.

ಹೋರಾಟ, ಚಳವಳಿಗಳೂ ಕೂಡ ಹದಿನೈದು–ಇಪ್ಪತ್ತು ಪತ್ರಿಕೆಗಳಲ್ಲಿ ಸುದ್ದಿ ಮತ್ತು ಚಿತ್ರಗಳು ಪ್ರಕಟವಾಗುವುದಕ್ಕೆ ಸೀಮಿತವಾಗುತ್ತಿವೆ. ಮರು ದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿ ತುಣುಕು ಕತ್ತರಿಸಿಟ್ಟುಕೊಳ್ಳಲು ಎದುರು ನೋಡುವವರೂ ಇದ್ದಾರೆ. ‘ಮಾಮಿ ರೋಗ’ದಿಂದ ದೂರವಿರದಿದ್ದರೆ ಯಾವ ಚಳವಳಿ, ಹೋರಾಟಗಳೂ ಸಾರ್ಥಕವಾಗುವುದಿಲ್ಲ. ಮಾಮಿ ರೋಗ ತೊಲಗಲಿ ಎನ್ನುವ ಅವರ ಮಾತಿನಲ್ಲಿ ‘ಪ್ರಚಾರ ಪ್ರಿಯರ’ ಕಾಯಿಲೆಗೆ ರಾಮಬಾಣವಿತ್ತು!

Comments
ಈ ವಿಭಾಗದಿಂದ ಇನ್ನಷ್ಟು

ವಾರೆಗಣ್ಣು
ಗೌರವದಿಂದ ಬೀಳ್ಕೊಡೋಣ...

ಮುಧೋಳದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬೆಳಗಾವಿ ವಿಭಾಗದ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶ ನಡೆದಿತ್ತು.

15 Apr, 2018

ವಾರೆಗಣ್ಣು
ಇದೊಂದು ಸಲ ನಮ್ಮನ್ನು ನೋಡಿ!

‘ಎಲ್ಲರನ್ನೂ ನೋಡಿದ್ದೀರಲ್ಲ. ಇದೊಂದ್‌ ಸಲ ನಮಗೂ ಅಧಿಕಾರ ಕೊಟ್ಟು ನೋಡಿ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅರ್ಧ ತಮಾಷೆ, ಅರ್ಧ...

15 Apr, 2018

ವಾರೆಗಣ್ಣು
ಕಳೆ ಎಂದರೆ ಸಾಕು, ಕಾಂಗ್ರೆಸ್‌ ಬೇಡ!

‘ಈ ಬಾರಿ ನೀವ್‌ ಏನಾದ್ರೂ ತಿಳ್ಕೋಳಿ. ನಮ್‌ ಮನಗೂಳಿಗೆ ನಾವು ಹಾರ ಹಾಕೋದು ಖಚಿತ’.

8 Apr, 2018
ದಾಂಪತ್ಯಕ್ಕೆ ದೀಪಿಕೆಯಾದ ಹೇಬಿಯಸ್‌ ಕಾರ್ಪಸ್‌

ಕಟಕಟೆ
ದಾಂಪತ್ಯಕ್ಕೆ ದೀಪಿಕೆಯಾದ ಹೇಬಿಯಸ್‌ ಕಾರ್ಪಸ್‌

1 Apr, 2018
ಪ್ರಾಯಶ್ಚಿತ್ತದ ಮೊದಲ ಹೆಜ್ಜೆ ಇಟ್ಟ ವೈಲಿ

ವ್ಯಕ್ತಿ
ಪ್ರಾಯಶ್ಚಿತ್ತದ ಮೊದಲ ಹೆಜ್ಜೆ ಇಟ್ಟ ವೈಲಿ

1 Apr, 2018