ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಇಂಟರ್‌ನೆಟ್‌ ವೇಗ: ಭಾರತಕ್ಕೆ 109ನೇ ಸ್ಥಾನ

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಮಟ್ಟದಲ್ಲಿ ಮೊಬೈಲ್‌ ಇಂಟರ್‌ನೆಟ್‌ ವೇಗದಲ್ಲಿ ಭಾರತವು 109ನೇ ರ‍್ಯಾಂಕ್‌ ಗಳಿಸಿದೆ. ಭಾರತದಲ್ಲಿ ಮೊಬೈಲ್‌ ಇಂಟರ್‌ನೆಟ್‌ನ ಸರಾಸರಿ ಡೌನ್‌ಲೋಡ್‌ ವೇಗ 8.80 ಎಂಬಿಪಿಎಸ್‌ ಇದೆ.

ಸ್ಥಿರ ಬ್ರಾಡ್‌ಬಾಂಡ್‌ ವೇಗದಲ್ಲಿ ಭಾರತದ ಸ್ಥಾನಮಾನ ಸಾಕಷ್ಟು ಸುಧಾರಿಸಿದ್ದು, 76ನೇ ಸ್ಥಾನ ಗಳಿಸಿದೆ.

ಜಾಗತಿಕ ಮಟ್ಟದಲ್ಲಿ ಇಂಟರ್‌ನೆಟ್‌ ವೇಗವನ್ನು ಅಳೆಯುವ ಊಕ್ಲಾ ಸಂಸ್ಥೆಯು ಪ್ರಕಟಿಸಿರುವ ನವೆಂಬರ್‌ ತಿಂಗಳ ಸ್ಪೀಡ್‌ಟೆಸ್ಟ್‌ ಸೂಚ್ಯಂಕದಲ್ಲಿ ಭಾರತ ಈ ಸ್ಥಾನ ಗಳಿಸಿದೆ.

ಅಧ್ಯಯನ ಹೇಗೆ?
ಬಳಕೆದಾರರು ಸ್ಪೀಡ್‌ಟೆಸ್ಟ್‌ ತಂತ್ರಾಂಶ ಬಳಸಿಕೊಂಡು ಇಂಟರ್‌ನೆಟ್‌ ವೇಗವನ್ನು ಪರೀಕ್ಷಿಸಿದ್ದನ್ನು ಆಧರಿಸಿ ಊಕ್ಲಾವು ಜಗತ್ತಿನ ಎಲ್ಲ ದೇಶಗಳಲ್ಲೂ ಇಂಟರ್‌ನೆಟ್‌ನ ಕಾರ್ಯದಕ್ಷತೆಯನ್ನು ವಿಶ್ಲೇಷಣೆಗೆ ಒಳಪಡಿಸುತ್ತದೆ. ಇದುವರೆಗೆ ಬಳಕೆದಾರರು ಸ್ಪೀಡ್‌ಟೆಸ್ಟ್‌ ತಂತ್ರಾಂಶದ ಮೂಲಕ 1,700 ಕೋಟಿ ಪರೀಕ್ಷೆಗಳನ್ನು ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT