ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿಆಲೂರಿನಲ್ಲಿ ಅನುರಣಿಸಿದ ಕನ್ನಡ...

Last Updated 17 ಡಿಸೆಂಬರ್ 2017, 9:06 IST
ಅಕ್ಷರ ಗಾತ್ರ

ಅಕ್ಕಿಆಲೂರು: ಪಟ್ಟಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ರಂಗು ತುಂಬಿತ್ತು. ಬೆಳಿಗ್ಗೆಯಿಂದಲೇ ಕಲಾವಿದರು, ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು, ಸಾವಿರಾರು ಕನ್ನಡಾಭಿಮಾನಿಗಳು ಅಕ್ಷರ ಜಾತ್ರೆಯಲ್ಲಿ ಪಾಲ್ಗೊಳ್ಳಲು ಕಾತರರಾಗಿದ್ದರು.

ಕುಮಾರ ನಗರದ ಸಂಕಷ್ಟಹರ ವರಸಿದ್ಧಿ ವಿನಾಯಕ ದೇವಸ್ಥಾನದ ಬಳಿಕ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಚಾಲನೆ ನೀಡಲಾಯಿತು. ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಹಾಗೂ ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾನಗಲ್‌ ತಹಶೀಲ್ದಾರ್ ವಿ.ಆರ್.ಕೊಟ್ರಳ್ಳಿ ಚಾಲನೆ ನೀಡಿದರು.

ಸಾರೋಟದಲ್ಲಿದ್ದ ಸಮ್ಮೇಳನಾಧ್ಯಕ್ಷ ಸತೀಶ ಕುಲಕರ್ಣಿ ಮತ್ತು ಅವರ ಪತ್ನಿ ಕಾಂಚನಾ ಅವರಿಗೆ ಕನ್ನಡಾಭಿಮಾನಿಗಳು ಹಸ್ತಲಾಘವ ಮಾಡಿ ಅಭಿನಂದಿಸಿದರು. ಸಾಹಿತ್ಯ, ಸಾಂಸ್ಕೃತಿಕ ಸಂದರ್ಭಗಳು ಮನಮುಟ್ಟಿ, ಭಾವತಟ್ಟಿ, ಹೃದಯವನ್ನು ಅರಳಿಸುತ್ತವೆ ಎಂಬ ಮಾತಿಗೆ ಈ ಕ್ಷಣಗಳು ಅನ್ವರ್ಥದಂತೆ ಭಾಸವಾದವು.

ಸಾಹಿತ್ಯ–ಸಂಸ್ಕೃತಿ ಅನಾವರಣ: ಜಿಲ್ಲೆಯ ಸಾಹಿತ್ಯ, ಸಂಸ್ಕೃತಿಯ ಪ್ರತಿಬಿಂಬದಂತಿದ್ದ ವೈವಿಧ್ಯಮಯ ಕಲಾತಂಡಗಳು, ಸ್ತಬ್ಧಚಿತ್ರಗಳು, ಕನ್ನಡಾಭಿಮಾನದ ಘೋಷಣೆಗಳು ಮೆರವಣಿಯುದ್ದಕ್ಕೂ ಅನುರುಣಿಸಿದವು.

ಶಾಲಾ–ಕಾಲೇಜುಗಳ ವಿದ್ಯಾರ್ಥಿ ಗಳಂತೂ ಕನ್ನಡವನ್ನು ಮೈದುಂಬಿಸಿಕೊಂಡತೆ ಸಂಭ್ರಮಿಸಿದರು. ‘ನಡೆ ಮುಂದೆ ನಡೆ ಮುಂದೆ, ನುಗ್ಗಿ ನಡೆ ಮುಂದೆ’, ‘ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ’, ‘ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಇಂಥ ಹತ್ತಾರು ನುಡಿಗಟ್ಟುಗಳು ವಿದ್ಯಾರ್ಥಿಗಳಿಂದ ಮೊಳಗಿದವು.

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ, ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್ ಅಡಿಗ, ಸಾಹಿತಿಗಳಾದ ವಿಜಯಕಾಂತ ಪಾಟೀಲ, ಉದಯ ನಾಸಿಕ, ಪಿ.ಡಿ.ಶಿರೂರ, ಪ್ರಕಾಶಗೌಡ ಪಾಟೀಲ, ಚಂದ್ರಪ್ಪ ಜಾಲಗಾರ, ಶಿವಯೋಗಿ ಹಿರೇಮಠ, ಚಂದ್ರಶೇಖರ ಮಾಳಗಿ, ಎಸ್.ಆರ್.ಹಿರೇಮಠ, ಷಣ್ಮುಖಪ್ಪ ಮುಚ್ಚಂಡಿ, ಬಸವರಾಜ್ ಕೋರಿ, ನಾಗರಾಜ್ ಪಾವಲಿ, ಕೃಷ್ಣ ಈಳಿಗೇರ, ಉದಯಕುಮಾರ ವಿರಪಣ್ಣನವರ ಇನ್ನೂ ಹಲವರು ಪಾಲ್ಗೊಂಡಿದ್ದರು.

ಗಮನ ಸೆಳೆದ ರೂಪಕಗಳು...

ಅಕ್ಕಿಆಲೂರು: ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ,ಸಮ್ಮೇಳನದ ಸಮ್ಮೇಳ ನಾಧ್ಯಕ್ಷರ ಮೆರವಣಿ ಯಲ್ಲಿ ಕಂಡ ಸ್ತಬ್ಧ ಚಿತ್ರಗಳು, ರೂಪಕಗಳು ಕನ್ನಡದ ಮನಸ್ಸುಗಳನ್ನು ಗೆಲ್ಲುವಲ್ಲಿ ಯಶ ಕಂಡವು.

ಲಂಬಾಣಿ ನೃತ್ಯ, ಕೋಲಾಟದೊಂದಿಗೆ ಸಂತ ಶಿಶುನಾಳ ಶರೀಫ, ಅಕ್ಕಮಹಾದೇವಿ, ಹಾನಗಲ್ ಕುಮಾರ ಶಿವಯೋಗಿಗಳು, ಭಕ್ತ ಕನಕದಾಸ, ಕೃಷ್ಣ ದೇವರಾಯ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ವೀರ ಮದಕರಿ ನಾಯಕ, ಸರ್.ಎಂ.ವಿಶ್ವೇಶ್ವರಯ್ಯ, ಪಂ.ಪುಟ್ಟರಾಜ ಕವಿ ಗವಾಯಿ, ಕಿತ್ತೂರು ಚನ್ನಮ್ಮ, ಜಗಜ್ಯೋತಿ ಬಸವೇಶ್ವರ ಸೇರಿದಂತೆ ಮತ್ತಿತರ ಸ್ತಬ್ಧ ಚಿತ್ರಗಳು, ರೂಪಕಗಳು ಮೆರವಣಿಗೆ ಕಳೆ ಹೆಚ್ಚಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT