ಮಂಗಳೂರು

ಪ್ರಧಾನಿ ವಾಸ್ತವ್ಯಕ್ಕೆ ಭರದ ಸಿದ್ಧತೆ

ಪ್ರಧಾನಿ ನರೇಂದ್ರ ಮೋದಿಯವರ ವಾಸ್ತವ್ಯಕ್ಕಾಗಿ ನಗರದ ಸರ್ಕೀಟ್‌ ಹೌಸ್‌ನಲ್ಲಿ ಭರದ ಸಿದ್ಧತೆ ನಡೆದಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆಯವರೆಗಿನ ಅವಧಿಯಲ್ಲಿನ ತುರ್ತು ಬಳಕೆಗಾಗಿ ಪ್ರಧಾನಿಯವರ ತಾತ್ಕಾಲಿಕ ಕಚೇರಿ ತೆರೆಯಲಾಗುತ್ತಿದೆ.

ಸರ್ಕೀಟ್‌ ಹೌಸ್‌ ಎದುರು ಭಾನುವಾರ ಕರ್ತವ್ಯಕ್ಕೆ ಸಜ್ಜಾಗಿದ್ದ ಪೊಲೀಸ್ ಸಿಬ್ಬಂದಿ.

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ವಾಸ್ತವ್ಯಕ್ಕಾಗಿ ನಗರದ ಸರ್ಕೀಟ್‌ ಹೌಸ್‌ನಲ್ಲಿ ಭರದ ಸಿದ್ಧತೆ ನಡೆದಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆಯವರೆಗಿನ ಅವಧಿಯಲ್ಲಿನ ತುರ್ತು ಬಳಕೆಗಾಗಿ ಪ್ರಧಾನಿಯವರ ತಾತ್ಕಾಲಿಕ ಕಚೇರಿ ತೆರೆಯಲಾಗುತ್ತಿದೆ.

ಸಂಪೂರ್ಣ ಅತಿಥಿಗೃಹ ವಿಶೇಷ ಭದ್ರತಾ ದಳದ (ಎಸ್‌ಪಿಜಿ) ವಶದಲ್ಲಿದೆ. ನಗರದ ಪೊಲೀಸರೂ ಭದ್ರತೆ ಒದಗಿಸುತ್ತಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳ ತಂಡ, ಪೊಲೀಸರು ಮತ್ತು ಪ್ರಧಾನಿಯವರ ಸಚಿವಾಲಯದ ಹೊರತಾಗಿ ಅತಿಥಿಗೃಹಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಸರ್ಕೀಟ್‌  ಹೌಸ್‌ ಆವರಣ ಮತ್ತು ಹೊರ ಭಾಗದಲ್ಲಿ ನಿಯಮಿತವಾಗಿ ತಪಾಸಣೆ ನಡೆಸಲಾಗುತ್ತಿದೆ.

ಒಖಿ ಚಂಡಮಾರುತದಿಂದ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ಮಂಗಳವಾರ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ, ಸೋಮವಾರ ರಾತ್ರಿಯೇ ಮಂಗಳೂರು ತಲುಪುವರು. ರಾತ್ರಿ ಸರ್ಕೀಟ್‌ ಹೌಸ್‌ನಲ್ಲಿ ತಂಗಲಿದ್ದು, ಮಂಗಳವಾರ ಬೆಳಿಗ್ಗೆಯೇ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಲಕ್ಷದ್ವೀಪಕ್ಕೆ ತೆರಳುವರು.

‘ಸೋಮವಾರ ರಾತ್ರಿಯ ಅವಧಿಯಲ್ಲಿ ತುರ್ತು ಬಳಕೆಗಾಗಿ ಸರ್ಕೀಟ್‌ ಹೌಸ್‌ನಲ್ಲಿ ಪ್ರಧಾನಿ ಸಚಿವಾಲಯದ ತಾತ್ಕಾಲಿಕ ಕಚೇರಿಯನ್ನು ತೆರೆಯಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಧಾನಿ, ಅವರ ಭದ್ರತಾ ತಂಡದ ಹಿರಿಯ ಅಧಿಕಾರಿಗಳು ಸರ್ಕೀಟ್‌ ಹೌಸ್‌ನಲ್ಲಿ ತಂಗುವರು. ಮಲ್ಲಿಕಟ್ಟೆಯಲ್ಲಿರುವ ಸರ್ಕಾರಿ ನಿರೀಕ್ಷಣಾ ಮಂದಿರದಲ್ಲಿ ಎಸ್‌ಪಿಜಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಬೆಂಕಿಯಲ್ಲಿ ಸಿಲುಕಿದ್ದ 10 ವಿದ್ಯಾರ್ಥಿಗಳ ರಕ್ಷಣೆ!

ಮಂಗಳೂರು
ಬೆಂಕಿಯಲ್ಲಿ ಸಿಲುಕಿದ್ದ 10 ವಿದ್ಯಾರ್ಥಿಗಳ ರಕ್ಷಣೆ!

21 Jan, 2018

ಮಂಗಳೂರು
ಯೇನೆಪೋಯ ಸ್ಪೆಷಾಲಿಟಿ ಆಸ್ಪತ್ರೆಗೆ ಎನ್‌ಎಬಿಎಚ್‌ ಗೌರವ

ರೋಗಿಯ ಆರೈಕೆ, ಔಷಧಿ ನಿರ್ವಹಣೆ, ರೋಗಿಯ ಸುರಕ್ಷತೆ, ವೈದ್ಯಕೀಯ ಫಲಿತಾಂಶಗಳು, ವೈದ್ಯಕೀಯ ದಾಖಲೆಗಳು, ಸೋಂಕು ನಿಯಂತ್ರಣ ಮತ್ತು ಸಿಬ್ಬಂದಿ ನಡವಳಿಕೆ ಸಹಿತ ಹಲವು ವಿಚಾರಗಳಲ್ಲಿ...

21 Jan, 2018
ಮೋದಿ ಸರ್ಕಾರದಿಂದ ಸಂವಿಧಾನಕ್ಕೆ ಗೌರವ; ಸಂವಿಧಾನ ಬದಲಾವಣೆ ಸಾಧ್ಯವಿಲ್ಲ: ಅಠವಳೆ

'ಅನಂತಕುಮಾರ್ ಹೆಗಡೆ ಹೇಳಿಕೆಗೆ ವಿರೋಧವಿದೆ'
ಮೋದಿ ಸರ್ಕಾರದಿಂದ ಸಂವಿಧಾನಕ್ಕೆ ಗೌರವ; ಸಂವಿಧಾನ ಬದಲಾವಣೆ ಸಾಧ್ಯವಿಲ್ಲ: ಅಠವಳೆ

20 Jan, 2018
ಶಿರಾಡಿ ರಸ್ತೆ ಸಂಚಾರ ಇಂದಿನಿಂದ ಬಂದ್‌

ಮಂಗಳೂರು
ಶಿರಾಡಿ ರಸ್ತೆ ಸಂಚಾರ ಇಂದಿನಿಂದ ಬಂದ್‌

20 Jan, 2018

ದಕ್ಷಿಣ ಕನ್ನಡ
ಸಂತ ಸೆಬೆಸ್ಟಿಯನ್ ಚರ್ಚ್‌ಗೆ ಶತಮಾನೋತ್ಸವ ಸಂಭ್ರಮ

ಮಂಗಳೂರಿನ ತೊಕ್ಕೊಟ್ಟಿನ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್‌ಗೆ ಈಗ ಶತಮಾನೋತ್ಸವದ ಸಂಭ್ರಮ. ಉಳ್ಳಾಲ ಪರಿಸರದ ವಿವಿಧ ಧರ್ಮ ಜಾತಿ ಮತಗಳ ಜನರು ಒಟ್ಟಾಗಿ ಸೇರಿ...

20 Jan, 2018