ರಾಯಚೂರು

ಬೀದಿ ಬೆಳಗಲಿವೆ ಶಕ್ತಿಯುತ ದೀಪಗಳು

ರಾತ್ರಿ ವೇಳೆ ಜನರು ಮತ್ತು ವಾಹನಗಳು ಸಂಚರಿಸುವುದಕ್ಕೆ ಅನುಕೂಲ ಮಾಡಿಕೊಡಲು ಎಂಟು ಕಡೆಗಳಲ್ಲಿ ಹೈಮಾಸ್ಟ್ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾರ್ಯ ನಗರಸಭೆ ಕೈಗೊಂಡಿದೆ.

ರಾಯಚೂರಿನ ಬಸವೇಶ್ವರ ವೃತ್ತದಲ್ಲಿ ಈಗಾಗಲೇ ಅಳವಡಿಸಲಾದ ಹೈಮಾಸ್ಟ್‌ ವಿದ್ಯುತ್‌ ದೀಪಗಳ ಕಂಬದ ಒಂದು ನೋಟ

ರಾಯಚೂರು: ನಗರದಲ್ಲಿ ರಾತ್ರಿ ವೇಳೆ ಜನರು ಮತ್ತು ವಾಹನಗಳು ಸಂಚರಿಸುವುದಕ್ಕೆ ಅನುಕೂಲ ಮಾಡಿಕೊಡಲು ಎಂಟು ಕಡೆಗಳಲ್ಲಿ ಹೈಮಾಸ್ಟ್ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾರ್ಯ ನಗರಸಭೆ ಕೈಗೊಂಡಿದೆ.

ಜನದಟ್ಟಣೆ ಇರುವ ಬಾಬು ಜಗಜೀವನರಾಂ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಬಸ ವೇಶ್ವರ ವೃತ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣ, ಗಂಜ್ ಆವರಣದಲ್ಲಿ ಈ ಶಕ್ತಿಯುತ ವಿದ್ಯುತ್ ದೀಪಗಳು ಬೆಳಗಲಿವೆ. 18 ಮೀಟರ್ ಎತ್ತರದ ಲೋಹದ ವಿದ್ಯುತ್ ಕಂಬ ಅಳವಡಿಸಲಾಗುತ್ತದೆ. ಒಂದು ಕಂಬದಲ್ಲಿ ವೃತ್ತಾಕಾರವಾಗಿ ಎಲ್ಲ ದಿಕ್ಕುಗಳಿಗೂ ಶಕ್ತಿಯುತ ಎಲ್‌ಇಡಿ ದೀಪಗಳು ಅಳವಡಿಸಲಾಗಿದ್ದು, ಸಾಕಷ್ಟು ವಿಶಾಲವಾಗಿ ಬೆಳಕು ಪಸರಿಸುತ್ತದೆ.

ನಗರಸಭೆಯಿಂದ ಈ ಯೋಜನೆ ಯನ್ನು ಅನುಷ್ಠಾನ ಗೊಳಿಸಲಾಗುತ್ತಿದ್ದು, 14ನೇ ಹಣಕಾಸು ಆಯೋಗದಲ್ಲಿ ವಿದ್ಯುತ್ ಕೆಲಸಕ್ಕೆ ಮೀಸಲಾದ ಅನುದಾನವನ್ನು ಈ ಯೋಜನೆಗೆ ಬಳಕೆ ಮಾಡಲಾಗಿದೆ. ಸಾಕಷ್ಟು ಬಿಡಿಭಾಗಗಳನ್ನು ಹೊಂದಿ ರುವ ಈ ವಿದ್ಯುತ್ ಕಂಬದ ಖರೀದಿ ಮತ್ತು ಅಳವಡಿಕೆ ಸೇರಿ ಒಂದು ಹೈಮಾಸ್ಟ್ ವಿದ್ಯುತ್ ದೀಪದ ಕಂಬಕ್ಕೆ ಸುಮಾರು ₹ 8 ಲಕ್ಷ ವೆಚ್ಚ ಮಾಡಲಾಗುತ್ತಿದೆ.

ನಗರದಲ್ಲಿ ಈ ಮೊದಲು ಕೂಡ ಎತ್ತರದ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಆದರೆ ಮೊದಲಿದ್ದ ಹೈಮಾಸ್ಟ್ ವಿದ್ಯುತ್ ಕಂಬಗಳಿಗಿಂತ ಹೊಸದಾಗಿ ಅಳವಡಿಸುತ್ತಿರುವ ವಿದ್ಯುತ್ ಕಂಬಗಳು ತಾಂತ್ರಿಕವಾಗಿ ಹೆಚ್ಚಿನ ಅನುಕೂಲ ಹೊಂದಿವೆ.

ನಗರದಲ್ಲಿ ಸದ್ಯಕ್ಕೆ 20 ವೃತ್ತಗಳಲ್ಲಿ ಸೋಡಿಯಂ ವ್ಯಾಪರ್ಡ್ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಏನಾದರೂ ದುರಸ್ತಿಗಳಿದ್ದರೆ ದೀಪಗಳ ಎತ್ತರಕ್ಕೆ ಹೋಗಬೇಕಾಗುತ್ತದೆ. ಆದರೆ ಈಗ ಅಳವಡಿಸುವ ಹೈಮಾಸ್ಟ್ ವಿದ್ಯುತ್ ಕಂಬಗಳಲ್ಲಿ ಗೀಯರ್ ಬಾಕ್ಸ್, ಮೋಟರ್ ಅಳವಡಿಸಲಾಗಿದೆ.

ಕಂಬದ ಮೇಲೆ ವಿದ್ಯುತ್‌ ದೀಪಗಳಿರುವ ಲ್ಯಾಂಟರ್ನ್ ಕ್ಯಾರೇಜ್ ನೇತಾಡುವಂತೆ ಹಾಕಲಾಗುತ್ತದೆ. ದುರಸ್ತಿಯಿದ್ದಾಗ ವಿದ್ಯುತ್ ದೀಪಗ ಳನ್ನು ಮೋಟರ್ ನೆರವಿನಿಂದ ಕೆಳಗೆ ತಂದುಕೊಳ್ಳಬಹುದು. ಅಗ ತ್ಯಕ್ಕೆ ಅನುಗುಣವಾಗಿ ದೀಪ ಗಳ ಅಳವಡಿಸುವ ಎತ್ತರವನ್ನು ಹೊಂದಿಸಿಕೊಳ್ಳಬಹುದು.

‘ನಗರದಲ್ಲಿ ಬೀದಿ ವಿದ್ಯುತ್ ಕಂಬಗಳಿದ್ದರೂ ಸಾಕಷ್ಟು ಬೆಳಕು ಸಿಗುವುದಿಲ್ಲ. ವ್ಯಾಪಾರ, ವಹಿವಾಟು ಮುಗಿಸಿ, ವ್ಯಾಪಾರಿಗಳು ಅಂಗಡಿಗಳ ವಿದ್ಯುತ್ ದೀಪ ಸ್ಥಗಿತಗೊಳಿಸಿದರೆ ರಸ್ತೆ ಮಾರ್ಗಗಳಲ್ಲಿ ಕತ್ತಲು ಅವರಿ ಸುತ್ತದೆ. ವೃತ್ತಗಳು ಕತ್ತಲೆಯಲ್ಲಿ ಮುಳುಗುತ್ತವೆ. ಪಾದಚಾರಿಗಳು ವೃತ್ತಗಳ ಮೂಲಕ ಹಾಯ್ದು ಹೋಗುವುದಕ್ಕೆ ಕಷ್ಟ ಆಗುತ್ತದೆ’ ಎಂದು ಎಲ್‌ಬಿಎಸ್ ನಗರ ನಿವಾಸಿ ಸತೀಶ್ ಹೇಳಿದರು.

* * 

ಸೋಡಿಯಂ ವ್ಯಾಪರ್ಡ್ ದೀಪಗಳ ಕಂಬಕ್ಕಿಂತಲೂ ಸುಧಾರಿತ, ದುರಸ್ತಿ ಸುಲಭ ಸಾಧ್ಯವಾಗುವ ಹೈಮಾಸ್ಟ್ ದೀಪಗಳ ಕಂಬಗಳನ್ನು ಹಾಕಲಾಗುತ್ತಿದೆ.
ಶಫಿಯೂದ್ದೀನ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ನಗರಸಭೆ

Comments
ಈ ವಿಭಾಗದಿಂದ ಇನ್ನಷ್ಟು
‘ಸಾಹಿತ್ಯದಲ್ಲಿ ಹೊಸ ಪರಂಪರೆ ಸೃಷ್ಟಿ’

ಮಾನ್ವಿ
‘ಸಾಹಿತ್ಯದಲ್ಲಿ ಹೊಸ ಪರಂಪರೆ ಸೃಷ್ಟಿ’

21 Jan, 2018
ಸಮ್ಮೇಳನದಿಂದ ಸಮಾಜ ಕಟ್ಟುವ ಕೆಲಸ

ರಾಯಚೂರು
ಸಮ್ಮೇಳನದಿಂದ ಸಮಾಜ ಕಟ್ಟುವ ಕೆಲಸ

20 Jan, 2018

ಮಸ್ಕಿ
ತೊಗರಿ ಖರೀದಿ ಕೇಂದ್ರ ಆರಂಭ

ತೊಗರಿ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದ್ದು ಸಹಕಾರಿ ಪತ್ತಿನ ಸಹಕಾರಿ ಬ್ಯಾಂಕ್ ಮೂಲಕ ಸರ್ಕಾರ ಖರೀದಿಗೆ ಮುಂದಾಗಿದೆ

20 Jan, 2018
ಅಕ್ಷರ ಜಾತ್ರೆಗೆ ಪೋತ್ನಾಳ ಸಜ್ಜು

ಮಾನ್ವಿ
ಅಕ್ಷರ ಜಾತ್ರೆಗೆ ಪೋತ್ನಾಳ ಸಜ್ಜು

19 Jan, 2018
ಅಂಗನವಾಡಿ,ಆಶಾ ಕಾರ್ಯಕರ್ತೆಯರ ಪ್ರತಿಭಟನಾ ರ‍್ಯಾಲಿ

ರಾಯಚೂರು
ಅಂಗನವಾಡಿ,ಆಶಾ ಕಾರ್ಯಕರ್ತೆಯರ ಪ್ರತಿಭಟನಾ ರ‍್ಯಾಲಿ

18 Jan, 2018