ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡು ನುಡಿ ಸಂಸ್ಕೃತಿ ಉಳಿಸುವುದು ಎಲ್ಲರ ಹೊಣೆ

Last Updated 18 ಡಿಸೆಂಬರ್ 2017, 5:15 IST
ಅಕ್ಷರ ಗಾತ್ರ

ತುಮಕೂರು: 'ಕನ್ನಡ ನಾಡು ನುಡಿ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವುದು ಎಲ್ಲರ ಹೊಣೆ. ಈ ಕಾರ್ಯ ಮನೆ ಮನೆಯಿಂದ ಆಗಬೇಕು' ಎಂದು ಶಾಸಕ ಡಾ.ರಫೀಕ್ ಅಹಮ್ಮದ್ ಹೇಳಿದರು.

ಭಾನುವಾರ ನಗರದ ಸರಸ್ವತಿಪುರಂ 2ನೇ ಹಂತದ ನಾಗರಿಕ ಹಿತರಕ್ಷಣಾ ಸಮಿತಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಯೋಗ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

'ಕನ್ನಡ ನಾಡಿನಲ್ಲಿ ವಾಸಿಸುವ ಮಾತೃಭಾಷೆಗೆ ಆದ್ಯತೆ ನೀಡಬೇಕು. ಕನ್ನಡ ಭಾಷೆ ಪ್ರೀತಿಸಿ ಬೆಳೆಸಬೇಕು. ನಮ್ಮ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯ ತನ್ನದೇ ಆದ ಸತ್ವ ಹೊಂದಿದೆ' ಎಂದು ಹೇಳಿದರು.

'ಬಡಾವಣೆಯ ನಾಗರಿಕರೇ ಸ್ವಂತ ಹಣದಲ್ಲಿ ವಾಯುವಿಹಾರ ಯೋಗ ಮಂದಿರ ನಿರ್ಮಾಣ ಮಾಡಿರುವುದು ಉತ್ತಮ ಕಾರ್ಯವಾಗಿದೆ. ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗುವುದು' ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯೆ ಜಯಲಕ್ಷ್ಮಿ ವೆಂಕಟೇಶ್‌ಗೌಡ ಮಾತನಾಡಿ, ‘ಈ ಬಡಾವಣೆಯು ದೊಡ್ಡ ಬಡಾವಣೆಯಾಗಿದೆ. ಶಾಸಕರು, ಸಂಸದರ ಅನುದಾನ ಹಾಗೂ ಮಹಾನಗರ ಪಾಲಿಕೆ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ನಾಗರಿಕರ ಸಲಹೆ, ಸೂಚನೆಗಳ ಅನುಸಾರವಾಗಿ ಬಡಾವಣೆ ಅಭಿವೃದ್ಧಿ ಮಾಡಲಾಗುತ್ತಿದೆ' ಎಂದು ತಿಳಿಸಿದರು.

ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಧ್ಯಕ್ಷ ಸಿ.ಎನ್.ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವ ಅಧ್ಯಕ್ಷ ಆರ್.ವೆಂಕಟ್‌ರಾಜ್, ಜೆಡಿಎಸ್ ಮುಖಂಡ ವೆಂಕಟೇಶ್‌ಗೌಡ, ವಕೀಲರಾದ ಹಾಲನೂರು ಅನಂತಕುಮಾರ್, ಸಮಿತಿ ಉಪಾಧ್ಯಕ್ಷ ಜಿ.ವಿ.ಗಂಗರಾಜು, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಕೋಶಾಧ್ಯಕ್ಷ ಬಿ.ಕೆ.ಮೋಹನ್‌ಕುಮಾರ್, ಕಾರ್ಯದರ್ಶಿ ಜಿ.ದೇವರಾಜ್, ನಾರಾಯಣಸ್ವಾಮಿ, ಬೆಟ್ಟಸ್ವಾಮಿಗೌಡ, ಎಸ್.ಆರ್.ಜಯಕುಮಾರ್, ಲಕ್ಷ್ಮಿನರಸಿಂಹಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT