ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಕ್ಕೆ ಕತ್ತರಿ ಬೇಡ: ಮನವಿ

Last Updated 19 ಡಿಸೆಂಬರ್ 2017, 8:45 IST
ಅಕ್ಷರ ಗಾತ್ರ

ಗುಡಿಬಂಡೆ: ಪಟ್ಟಣದ ತಾಲ್ಲೂಕು ಕಚೇರಿ ಹಾಗೂ ಸರ್ಕಾರಿ ಬಾಲಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ನಿರ್ಮಾಣದ ನೆಪದಲ್ಲಿ ಮರವನ್ನು ಕಡಿಯುತ್ತಿದ್, ಕೂಡಲೇ ತಡೆಯಬೇಕು ಎಂದು ವಿವಿಧ ಸಂಘಟನೆಗಳು ತಹಶೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಿದವು. ಪರಿಸರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಕಾರು ಚಾಲಕರು ಸೋಮವಾರ ಗ್ರೇಡ್-2 ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.

ಪರಿಸರ ವೇದಿಕೆಯ ಜಿಲ್ಲಾಘಟಕದ ಅಧ್ಯಕ್ಷ ಗುಂಪುಮರದ ಆನಂದ್ ಮಾತನಾಡಿ, ‘ಈಗಾಗಲೇ ಗುಡಿಬಂಡೆ ಪಟ್ಟಣದಲ್ಲಿ ರಸ್ತೆ ಅಭಿವೃದ್ದಿ ನೆಪದಲ್ಲಿ ನೂರಾರು ಮರಗಳನ್ನು ಉರುಳಿಸಲಾಗಿದೆ. ಈಗ ತಾಲ್ಲೂಕು ಕಚೇರಿ ಹಾಗೂ ಸರ್ಕಾರಿ ಬಾಲಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ನಿರ್ಮಾಣದ ನೆಪದಲ್ಲಿ ಮರವನ್ನು ಕತ್ತರಿಸಲಾಗುತ್ತಿದೆ ಎಂದು ದೂರಿದರು.

ಅರಣ್ಯ ಇಲಾಖೆಯವರು ಡಿ.20ರಂದು ಮರ ಕಡಿಯಲು ಹರಾಜು ಪ್ರಕ್ರಿಯೆ ಮಾಡಿದ್ದು ಕೂಡಲೇ ಅದನ್ನು ನಿಲ್ಲಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವಿಕರಿಸಿದ ಗ್ರೇಡ್-2 ತಹಸೀಲ್ದಾರ್ ಸಿಗ್ಬತ್ ವುಲ್ಲಾ, ‘ಈ ಕುರಿತು ನಾವು ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಯವರಿಗೆ ವಿಷಯ ತಿಳಿಸುವುದಾಗಿ ಅವರು ತಿಳಿಸಿದರು.

ಬಿ.ಮಂಜುನಾಥ್, ಎಸ್.ಎಲ್.ಎನ್.ನವೀನ್, ಪ್ರೆಸ್ ಸುಬ್ಬರಾಯಪ್ಪ, ಜಿನ್ನರಾಜಯ್ಯ, ಬಾಲಗಂಗಾಧರ್ ತಿಲಕ್, ಎಲ್.ಎನ್.ಈಶ್ವರಪ್ಪ, ಆನಂದ್, ನವೀನ್, ಜಿ.ಎಸ್.ಭರತ್, ಶರಣ್ ರಾಜ್, ಗರುಡಾಚಾರ್ಲಹಳ್ಳಿ ಅಮರೇಶ್, ನಾಗಭೂಷಣ್ ರೆಡ್ಡಿ, ದೇವಕುಮಾರ್‌, ಕಾರು ಮಾಲೀಕರು ಹಾಗೂ ಚಾಲಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT