ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರೀತಿಯ ಉದ್ಯೋಗ

Last Updated 19 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ರೋಬೊ ಮಾನವ ಮಿದುಳಿನ ಪ್ರತಿರೂಪ. ನಾವು ಮಾಡುವ ಉದ್ಯೋಗಗಳನ್ನು ರೋಬೊಗಳು ಆಕ್ರಮಿಸುವ ಕಾಲ ಸನಿಹದಲ್ಲೇ ಇದೆ.2030ರ ಹೊತ್ತಿಗೆ ಹಲವರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಹಾಗಾದರೆ ನಮ್ಮ ಪರಿಸ್ಥಿತಿ? ಪ್ರಮುಖ ಸಾಫ್ಟ್‌ವೇರ್ ಸಂಸ್ಥೆ ‘ಕಾಗ್ನಿಜೆಂಟ್‌’ ನಡೆಸಿದ ಅಧ್ಯಯನದ ಪ್ರಕಾರ ಮನುಷ್ಯರಿಗಾಗಿ ಹೊಸ ಉದ್ಯೋಗಗಳು ಬರಲಿವೆ. ಪ್ರಸ್ತುತ ಮಾಡುತ್ತಿರುವ ಉದ್ಯೋಗಗಳಿಗಿಂತ ಇವು ತುಂಬಾ ಭಿನ್ನ. ಅವುಗಳ ಬಗ್ಗೆ ಒಂದಿಷ್ಟು...

ರೋಬೊ ಕೌನ್ಸಿಲರ್

ಕಚೇರಿ ಕೆಲಸಗಳಷ್ಟೇ ಅಲ್ಲ, ಮನೆಗೆಲಸಕ್ಕೂ ರೊಬೊಗಳೇ ಬೇಕಾಗುತ್ತವೆ. ಮಿಕ್ಸಿ, ವಾಷಿಂಗ್‌
ಮಷಿನ್‌ನಂತೆ ಮನೆಗೊಂದು ರೊಬೊ ಬರಬಹುದು. ಇಂತಹ ಪರಿಸ್ಥಿತಿ ಬಂದರೆ ‘ನಿಮ್ಮ ಸಮಸ್ಯೆ ಏನು? ನಿಮಗೆ ಎಂಥ ರೊಬೊ ಸೂಕ್ತ? ಅದರ ಸಾಮರ್ಥ್ಯ ಹೇಗಿರಬೇಕು? ನಿಮ್ಮ ಕುಟುಂಬ ಪರಿಸ್ಥಿತಿಗಳಿಗೆ ಅನುಗುಣವಾಗಿ ಏನಾದರೂ ಹೊಸ ವೈಶಿಷ್ಟ್ಯಗಳನ್ನು ಜೋಡಿಸಬೇಕೇ? ಇಂತಹ ವಿಷಯಗಳಲ್ಲಿ ಸಲಹೆ ನೀಡಲು ರೊಬೊ ಕೌನ್ಸಿಲರ್ಸ್ ಸಲಹೆ ಸೂಚನೆಗಳು ಅಗತ್ಯವಾಗಬಹುದು.

ಮ್ಯಾನ್–ಮಷಿನ್ ಮ್ಯಾನೇಜರ್

ಪ್ರಸ್ತುತ ಬಹುತೇಕ ಸಂಸ್ಥೆಗಳಲ್ಲಿ ಇರುವ ಟೀಮ್‌ ಲೀಡರ್, ಟೀಮ್‌ ಮ್ಯಾನೇಜರ್‌, ಟೀಮ್‌ ಹೆಡ್‌ ಇತ್ಯಾದಿ  ಉದ್ಯೋಗಗಳೇ 2030ರಲ್ಲಿ ‘ಮ್ಯಾನ್‌–ಮಷಿನ್‌ ಟೀಮಿಂಗ್ ಮ್ಯಾನೇಜರ್‌’ ಹೆಸರನಲ್ಲಿ ಹೊಸ ಉದ್ಯೋಗವಾಗಿ ಸೃಷ್ಟಿಯಾಗಬಹುದು. ಏಕೆಂದರೆ ಭವಿಷ್ಯದಲ್ಲಿ ರೋಬೊಗಳು ಮತ್ತು ಮಾನವರು ಸೇರಿ ಕೆಲಸ ಮಾಡಬೇಕಾಗುತ್ತದೆ. ಆಗ ಟೀಮ್‌ ಮ್ಯಾನೇಜರ್, ಯಂತ್ರ ಮತ್ತು ಮಾನವರ ಕೆಲಸವನ್ನು ಸರಿತೂಗಿಸಿಕೊಂಡು ಹೋಗಬೇಕಾಗುತ್ತದೆ.

ಆಕಾಶದಲ್ಲಿ ಹೈವೇ ಕಂಟ್ರೋಲರ್

2030ರ ಹೊತ್ತಿಗೆ ರೋಬೊಗಳ ಜತೆಗೆ ಡ್ರೋನ್‌ಗಳ ಬಳಕೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಡ್ರೋನ್‌ಗಳೂ ಹಾರುವ ರೋಬೊಗಳೇ. ರೋಬೊಗಳ ಬಳಕೆ ಹೆಚ್ಚಾದಂತೆಲ್ಲಾ ಆಗಸದಲ್ಲಿ ಡ್ರೋನ್‌ಗಳ ದಟ್ಟಣೆ ಹೆಚ್ಚಾಗಬಹುದು. ಆಗ ‘ಹೈವೇ ಕಂಟ್ರೋಲರ್‌’ ಹೆಸರಿನ ಹೊಸ ಉದ್ಯೋಗ ಬರಲೂಬಹುದು.

ಗಾರ್ಬೇಜ್‌ ಡಿಜೈನರ್ಸ್‌

ಉಪಯೋಗವಿಲ್ಲದ ವಸ್ತುಗಳನ್ನು, ಯಾವು
ದಾದರೂ ಒಂದು ರೂಪದಲ್ಲಿ ಪುನರ್ಬಳಕೆ ಮಾಡುವುದನ್ನೇ ನಾವು ರೀಸೈಕ್ಲಿಂಗ್ ಎನ್ನುತ್ತಿದ್ದೇವೆ. ಈ ಕೆಲಸ ಮಾಡಲು 2030ರ ಹೊತ್ತಿಗೆ ಹೊಸ ಉದ್ಯೋಗ ಸೃಷ್ಟಿಯಾಗಬಹುದು. ಇವರನ್ನೇ ಗಾರ್ಬೇಜ್‌ ಡಿಸೈನರ್ಸ್‌ ಎನ್ನಲಾಗುತ್ತದೆ. ಉದಾಹರಣೆಗೆ ಬಳಸಿ ಬಿಸಾಡಿದ ಟೂತ್ ಬ್ರಷ್‌ಅನ್ನು  ಫ್ಯಾನ್ಸಿ ಬ್ರೆಸ್‌ಲೆಟ್‌ ಆಗಿ ಬದಲಿಸುವುದು. ಹೀಗೆ ಪ್ರತಿ ವಸ್ತುವನ್ನು ಪುನರ್ಬಳಕೆ ಮಾಡಲು ಸಾಧ್ಯವಾಗುವಂತೆ ಮಾಡುವುದೇ ಇವರ ಕೆಲಸ.

ನೋಸ್ಟಾಲಿಜಿಸ್ಟ್‌

ಇದೊಂದು ಹೊಸ ರೀತಿಯ ಉದ್ಯೋಗ. ಭಿನ್ನ ಭಿನ್ನ ಕಾರ್ಯಗಳು ಇರುವಂತಹ ಉದ್ಯೋಗ ಇದು.  ಇಂಟಿರೀಯರ್ ಡಿಸೈನ್, ಇತಿಹಾಸ ಸಂಶೋಧನೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಮನೆಯ ಒಳಾಂಗಣ ವಿನ್ಯಾಸ, ಹೀಗೆ ಹಲವು ಕೆಲಸಗಳು ಇರುತ್ತವೆ. ಉದಾಹರಣಗೆ ಗ್ರಾಹಕರು ತಗೆ 1960ರ ದಶಕದ ವಾತಾವರಣ ಕಾಣುವಂತೆ ಮನೆಯ ವಿನ್ಯಾಸ ಮಾಡಿಕೊಡಬೇಕೆಂದು ಕೇಳಿದರೆ ಆ ಕಾಲಕ್ಕೆ ತಕ್ಕಂತೆ, ಟೆಲಿಫೋನ್, ವಸ್ತು, ಉಪಕರಣಗಳಣ್ನು ಜೋಡಿಸಿ ಅದೇ ರೀತಿ ವಿನ್ಯಾಸ ಮಾಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT