ಮೈಸೂರು

12 ಕ್ಷೇತ್ರದಲ್ಲಿ ಕ್ರೈಸ್ತರಿಗೆ ಟಿಕೆಟ್‌ ನೀಡಲು ಶಾಸಕ ಡಿಸೋಜ ಆಗ್ರಹ

ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಅಧಿಕಾರ ದೊರೆತಿಲ್ಲ. ಆದರೆ ನಾವೇ ಗೆದ್ದಿದ್ದೇವೆ ಎನ್ನಬಹುದು. ಅಲ್ಲಿ 23 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ.

ಮೈಸೂರು: ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಕ್ರೈಸ್ತರ ಪ್ರಮಾಣ ಶೇ 4ರಷ್ಟಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 12 ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಲ್ಲಿ ಮಂಗಳವಾರ ಆಗ್ರಹಿಸಿದರು.

ಕ್ರೈಸ್ತರು ಮತ್ತು ಮಸ್ಲಿಮರು ಸೇರಿ ರಾಜ್ಯದಲ್ಲಿ ಒಟ್ಟು ಶೇ 17ರಷ್ಟು ಅಲ್ಪಸಂಖ್ಯಾತರು ಇದ್ದಾರೆ. ಈ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು ಎಂದು ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್‌ ಕಾರ್ಯಕರ್ತರಿಗೆ ಹುರುಪು: ‘ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಅಧಿಕಾರ ದೊರೆತಿಲ್ಲ. ಆದರೆ ನಾವೇ ಗೆದ್ದಿದ್ದೇವೆ ಎನ್ನಬಹುದು. ಅಲ್ಲಿ 23 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಅದೇ ರಾಜ್ಯದ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಆದರೂ ನಮಗೆ 80 ಸೀಟುಗಳು ಲಭಿಸಿವೆ. ಇದು ಸಣ್ಣ ವಿಷಯವಲ್ಲ’ ಎಂದರು.

‘ಗುಜರಾತ್‌ ಚುನಾವಣೆಗೂ ರಾಜ್ಯದ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಅಲ್ಲಿ ನಮಗೆ ನಾಯಕತ್ವದ ಕೊರತೆಯಿತ್ತು. ಇಲ್ಲಿ ಸಿದ್ದರಾಮಯ್ಯ ಅವರ ಸಮರ್ಥ ನಾಯಕತ್ವ ಇದೆ. ಜನರಿಗೆ ಕೊಟ್ಟ ಎಲ್ಲ ಆಶ್ವಾಸನೆಗಳನ್ನು ಸರ್ಕಾರ ಈಡೇರಿಸಿದೆ. ಬಿಜೆಪಿಯಲ್ಲಿ ಸಮರ್ಥ ನಾಯಕರು ಇಲ್ಲ. ಇರುವ ನಾಯಕರು ಜೈಲಿಗೆ ಹೋಗಿ ಬಂದವರು’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು

ಮೈಸೂರು
ವೈದಿಕಶಾಹಿ ದಾಳಿ ತಡೆದಿದ್ದು ಜಾನಪದ

ಅಪಾಯಕಾರಿಯಾಗುವ ಹಂತ ತಲುಪಿದ್ದ ಬ್ರಾಹ್ಮಣ್ಯ ಹಾಗೂ ವೈದಿಕಶಾಹಿ ದಾಳಿಯನ್ನು ವ್ಯವಸ್ಥಿತವಾಗಿ ಉಪಾಯದಿಂದ ನಿಯಂತ್ರಿಸಿದ್ದು ದೇಸಿ ಮಹಾಕಾವ್ಯ ಚಳವಳಿ ಎಂದು ಸಾಹಿತಿ ಡಾ.ಮೊಗಳ್ಳಿ ಗಣೇಶ್‌ ಅಭಿಪ್ರಾಯಪಟ್ಟರು. ...

22 Mar, 2018

ಮೈಸೂರು
ಒಣತ್ಯಾಜ್ಯ ಪಡೆಯಲು ಐಟಿಸಿ ನಿರ್ಧಾರ

ನಗರದಲ್ಲಿ ಮನೆ- ಮನೆಗಳಿಂದ ಸಂಗ್ರಹಿಸುವ, ಪುನರ್ ಬಳಕೆ ಮಾಡಬಹುದಾದ ಒಣ ತ್ಯಾಜ್ಯವನ್ನು ಪಡೆಯಲು ಐಟಿಸಿ ಕಂಪನಿ ಮುಂದೆ ಬಂದಿದೆ. ಈ ಸಂಬಂಧ ಬುಧವಾರ ಮೈಸೂರು...

22 Mar, 2018
ಸೌರಶಕ್ತಿಯಿಂದ ನೀರಿನ ಹೊಂಡಗಳ ಪುನಶ್ಚೇತನ

ಮೈಸೂರು
ಸೌರಶಕ್ತಿಯಿಂದ ನೀರಿನ ಹೊಂಡಗಳ ಪುನಶ್ಚೇತನ

22 Mar, 2018
ವಜಾಗೊಳಿಸಿದ್ದ ಸಿಬ್ಬಂದಿ ಮರುನೇಮಕ

ಮೈಸೂರು
ವಜಾಗೊಳಿಸಿದ್ದ ಸಿಬ್ಬಂದಿ ಮರುನೇಮಕ

21 Mar, 2018

ಮೈಸೂರು
ನಾನೂ ಕೆ.ಆರ್‌.ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ: ಮಾಳವಿಕಾ

‘ನಾನು ಕೂಡಾ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ನನ್ನ ಸ್ಪರ್ಧೆಯ ಬಗ್ಗೆ ರಾಜ್ಯದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ಚಲನಚಿತ್ರ ನಟಿ ಮಾಳವಿಕಾ...

21 Mar, 2018