ಮೈಸೂರು

ಇಂದಿರಾ ಕ್ಯಾಂಟೀನ್ ಸ್ಥಳಾಂತರ ಖಂಡಿಸಿ ಪ್ರತಿಭಟನೆ

ಈ ಮಧ್ಯೆ ಪ್ರತಿಭಟನಾಕಾರರೊಬ್ಬರು ಕ್ರೇನ್‌ ಏರಿ ನಿಂತು ಘೋಷಣೆಗಳನ್ನು ಕೂಗಿದ್ದು ಆತಂಕ ತಂದೊಡ್ಡಿತು. ಪೊಲೀಸರು ಅವರ ಮನವೊಲಿಸಿ ಕೆಳಗಿಳಿಸುವಲ್ಲಿ ಸಫಲರಾದರು.

ಮೈಸೂರು: ಇಲ್ಲಿನ ಉದಯಗಿರಿ ಸಿಗ್ನಲ್ ಬಳಿ ನಿರ್ಮಾಣವಾಗಬೇಕಿದ್ದ ಇಂದಿರಾ ಕ್ಯಾಂಟೀನ್‌ ಸ್ಥಳಾಂತರ ಮಾಡಿದ್ದನ್ನು ಖಂಡಿಸಿ ಪಾಲಿಕೆ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಉದ್ದೇಶಿತ ಸ್ಥಳದಲ್ಲಿ 5 ವಾರ್ಡ್‌ಗಳು ಸೇರುವುದರಿಂದ ಬಹಳಷ್ಟು ಜನರಿಗೆ ಅನುಕೂಲವಾಗುತ್ತದೆ. ಜತೆಗೆ, ಈ ಭಾಗದಲ್ಲಿ ಕೂಲಿ ಕಾರ್ಮಿಕರು, ದಿನಗೂಲಿ ನೌಕರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರಿಗೆಲ್ಲ ಇಂದಿರಾ ಕ್ಯಾಂಟೀನ್‌ನಿಂದ ಪ್ರಯೋಜನವಾಗುತ್ತದೆ. ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸ್ಥಳಾಂತರ ಮಾಡಬೇಕು ಎಂದುಕೊಂಡಿರುವ ಜಾಗದಲ್ಲಿ ಮತ್ತೊಂದು ಇಂದಿರಾ ಕ್ಯಾಂಟೀನ್ ತೆರೆಯಿರಿ. ಆದರೆ, ಇಲ್ಲಿನ ಕ್ಯಾಂಟೀನ್‌ ಅನ್ನು ರದ್ದುಗೊಳಿಸಬಾರದು ಎಂದು ಅವರು ಆಗ್ರಹಿಸಿದರು. ಇದರ ಹಿಂದೆ ಭೂಮಾಫಿಯಾದ ಕೈವಾಡ ಇದೆ. ಉದ್ದೇಶಿತ ಜಾಗ ಈ ಹಿಂದೆ ವಿವಾದದಲ್ಲಿತ್ತು. ಇದರಿಂದಾಗಿಯೇ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಮಧ್ಯೆ ಪ್ರತಿಭಟನಾಕಾರರೊಬ್ಬರು ಕ್ರೇನ್‌ ಏರಿ ನಿಂತು ಘೋಷಣೆಗಳನ್ನು ಕೂಗಿದ್ದು ಆತಂಕ ತಂದೊಡ್ಡಿತು. ಪೊಲೀಸರು ಅವರ ಮನವೊಲಿಸಿ ಕೆಳಗಿಳಿಸುವಲ್ಲಿ ಸಫಲರಾದರು.

ನಂತರ, ಸ್ಥಳಕ್ಕೆ ಬಂದ ಪಾಲಿಕೆ ಅಧಿಕಾರಿಗಳು ಸ್ಥಳಾಂತರ ಮಾಡುವುದಿಲ್ಲ ಎಂದು ಭರವಸೆ ನೀಡಿದ ಬಳಿಕ ಕಾರ್ಯಕರ್ತರು ಪ್ರತಿಭಟನೆಯನ್ನು ವಾಪಸ್ ಪಡೆದರು. ಪಾಲಿಕೆ ಸದಸ್ಯರಾದ ಅಯೂಬ್‌ಖಾನ್, ಸ್ವಾಮಿ, ಇಂದಿರಾ ಮಹೇಶ್ ಸೇರಿದಂತೆ ನೂರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಸರ್ಕಾರಗಳ ವೈಫಲ್ಯ ಪ್ರಶ್ನಿಸಿ: ಸಲಹೆ

ಮೈಸೂರು
ಸರ್ಕಾರಗಳ ವೈಫಲ್ಯ ಪ್ರಶ್ನಿಸಿ: ಸಲಹೆ

23 Apr, 2018

ಮೈಸೂರು
ಕುಮಾರಸ್ವಾಮಿ ರೋಡ್‌ ಶೋ, ಪಾದಯಾತ್ರೆ

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಪ್ರಚಾರ ನಡೆಸಿದರು. ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಪರ ಮತಯಾಚಿಸಿದರು. ...

23 Apr, 2018
ಬಿರುಗಾಳಿ, ಮಳೆ; ನೆಲಕಚ್ಚಿದ 700 ಬಾಳೆಗಿಡ

ನಂಜನಗೂಡು
ಬಿರುಗಾಳಿ, ಮಳೆ; ನೆಲಕಚ್ಚಿದ 700 ಬಾಳೆಗಿಡ

23 Apr, 2018
ಜೆಡಿಎಸ್‌, ಬಿಜೆಪಿ ವಿರುದ್ಧ ಹರಿಹಾಯ್ದ ಸಿ.ಎಂ

ಎಚ್.ಡಿ.ಕೋಟೆ
ಜೆಡಿಎಸ್‌, ಬಿಜೆಪಿ ವಿರುದ್ಧ ಹರಿಹಾಯ್ದ ಸಿ.ಎಂ

23 Apr, 2018
ಜೆಡಿಎಸ್‌, ಬಿಜೆಪಿ ವಿರುದ್ಧ ಹರಿಹಾಯ್ದ ಸಿ.ಎಂ

ಎಚ್.ಡಿ.ಕೋಟೆ
ಜೆಡಿಎಸ್‌, ಬಿಜೆಪಿ ವಿರುದ್ಧ ಹರಿಹಾಯ್ದ ಸಿ.ಎಂ

23 Apr, 2018