ದೇವರಹಿಪ್ಪರಗಿ

‘ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ’

ಕೃಷಿ ಕ್ಷೇತ್ರದಲ್ಲಿ ಸುಧಾರಿಸಿದ ತಂತ್ರಜ್ಞಾನವನ್ನು ಬಳಸಿ ಕೊಂಡು ಸ್ವಾವಲಂಬಿಗಳಾಗಬೇಕು

ದೇವರಹಿಪ್ಪರಗಿ: ಕೃಷಿ ಕ್ಷೇತ್ರದಲ್ಲಿ ಸುಧಾರಿಸಿದ ತಂತ್ರಜ್ಞಾನವನ್ನು ಬಳಸಿ ಕೊಂಡು ಸ್ವಾವಲಂಬಿಗಳಾಗಬೇಕುಎಂದು ಕೃಷಿ ತಾಂತ್ರಿಕ ಸಂಶೋ ಧಕಿ ಶ್ರೀವಾಣಿ ಕುಲಕರ್ಣಿ ಹೇಳಿದರು.

ಸಮೀಪದ ಹಿಟ್ನಳ್ಳಿ ಗ್ರಾಮದ ರಾಜಶೇಖರ ಮಮಾಣಿ ಇವರ ತೋಟದಲ್ಲಿ ಕೃಷಿ ಇಲಾಖೆ ಹಾಗೂ ಇಕ್ರಿಸ್ಯಾಟ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಭೂಚೇತನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳೆಗಳ ಆರಂಭ ದಿಂದ ಹಿಡಿದು ಬೆಳೆ ಕಟಾವಿನವರೆಗೆ ಬೇರೆ ಬೇರೆ ಕೃಷಿ ತಜ್ಞರ ಮಾರ್ಗದರ್ಶನ ಪಡೆಯುವುದರಿಂದ ರೈತರಿಗೆ ಅನುಕೂಲಗಳಾಗಲಿದೆ ಎಂದು ಹೇಳಿದರು.

ಇಕ್ರಿಸ್ಯಾಟ್ ವಿಜ್ಞಾನಿ ಶಿವಕುಮಾರ ಮಾತನಾಡಿ, ರೈತರು ಕೃಷಿ ಕ್ಷೇತ್ರದಲ್ಲಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿ ಸಿಕೊಳ್ಳುವುದರಿಂದ ಉತ್ತಮ ಫಸಲು ಪಡೆದು ಆರ್ಥಿಕವಾಗಿ ಸಬಲರಾಗಬಹುದು.

ರೈತರು ಬಿತ್ತುವಾಗ ಸರಿಯಾದ ತಳಿ ಆಯ್ಕೆಮಾಡಿ ಬೀಜೋಪಚಾರವನ್ನು ಮಾಡಿ ಕೀಟಗಳ ಹಾಗೂ ರೋಗಗಳ ಸಂದಿಗ್ಧ ಪರಿಸ್ಥಿತಿಗೆ ಅನುಗುಣವಾಗಿ ಸಸ್ಯಜನ್ಯ ಹಾಗೂ ರಾಸಾಯನಿಕ ಕ್ರೀಮಿನಾಶಕಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಿಂಪರಣೆ ಮಾಡಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿದರು.

ಸಹಾಯಕ ಕೃಷಿ ಅಧಿಕಾರಿ ಎ.ಆರ್.ನಾಯಿಕ, ತಾಂತ್ರಿಕ ಸಂಶೋಧಕ ತುಕಾರಾಮ ವೇಣು ನಾಯಿಕ, ರೈತ ಸಂಪರ್ಕ ಕೃಷಿ ಅಧಿಕಾರಿ ಡಿ.ಎಸ್.ಅವಜಿ ಇದ್ದರು. ರೈತ ಅನುವುಗಾರರಾದ ರಾಮು ಕಾರಭಾರಿ ಸ್ವಾಗತಿಸಿದರು.

 

Comments
ಈ ವಿಭಾಗದಿಂದ ಇನ್ನಷ್ಟು
₹ 2 ಕೋಟಿಗೂ ಹೆಚ್ಚಿನ ವಹಿವಾಟು.. ?

ವಿಜಯಪುರ
₹ 2 ಕೋಟಿಗೂ ಹೆಚ್ಚಿನ ವಹಿವಾಟು.. ?

22 Jan, 2018

ತಾಳಿಕೋಟೆ
ಯಂತ್ರಗಳ ಬಂದ ಮೇಲೆ ಸುಗ್ಗಿಯ ಸಂಭ್ರಮ ಕಣ್ಮರೆ

ರಾಶಿ ಮಾಡುವ ಯಂತ್ರಗಳು ಬಂದ ಮೇಲೆ ರೈತರ ಸುಗ್ಗಿಯ ಸಂಭ್ರಮ ಕಣ್ಮರೆಯಾಗುತ್ತಿದೆ ಎಂದು ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್.ನಾಡಗೌಡ(ಅಪ್ಪಾಜಿ) ವಿಷಾಧ ವ್ಯಕ್ತಪಡಿಸಿದರು. ...

22 Jan, 2018
ಮೈಸೂರು ಸೋಪ್‌ ಸಂತೆಗೆ ಜನಸಾಗರ!

ವಿಜಯಪುರ
ಮೈಸೂರು ಸೋಪ್‌ ಸಂತೆಗೆ ಜನಸಾಗರ!

20 Jan, 2018

ನಿಡಗುಂದಿ
ಕಲಗುರ್ಕಿಯಲ್ಲಿ ಜನಪದ ಸಂಸ್ಕೃತಿ ಉತ್ಸವ

ರಾಚಯ್ಯ ಸ್ವಾಮಿ ಹಿರೇಮಠ, ಡಾ.ವಿಶ್ವನಾಥ ಮಠ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರೀದೇವಿ ಐಹೊಳ್ಳಿ, ತಾಲ್ಲೂಕು ಪಂಚಾಯ್ತ ಸದಸ್ಯೆ ಲಕ್ಷ್ಮೀಬಾಯಿ ಕಸನಕ್ಕಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ...

20 Jan, 2018

ದೇವರಹಿಪ್ಪರಗಿ
ರಾಣಿ ಚನ್ನಮ್ಮ ಜಯಂತ್ತುತ್ಸವ, ಕಿತ್ತೂರು ವಿಜಯೋತ್ಸವ ಇಂದು

ಸಮೀಪದ ಮುಳಸಾವಳಗಿ ಗ್ರಾಮದಲ್ಲಿ ಜ. 20ರ ಶನಿವಾರ ಪಂಚಮಸಾಲಿ ಸಮಾಜದ ಆಶ್ರಯದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ, 194ನೇ ಕಿತ್ತೂರು ವಿಜಯೋತ್ಸವ ಹಾಗೂ ಸಂಗೊಳ್ಳಿ...

20 Jan, 2018