ಯಾದಗಿರಿ

ಹಿಂದೂಗಳ ಹತ್ಯೆ ಖಂಡಿಸಿ ಪ್ರತಿಭಟನೆ

‘ಹಿಂದೂ ಕಾರ್ಯಕರ್ತರು ಮತ್ತು ಮುಖಂಡರಿಗೆ ಜೀವಭದ್ರತೆ ಒದಗಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ.

ಹಿಂದೂಗಳ ಹತ್ಯೆ ಖಂಡಿಸಿ ಯಾದಗಿರಿಯಲ್ಲಿ ಮಂಗಳವಾರ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು

ಯಾದಗಿರಿ: ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಹಿಂದೂ ಹಿತರಕ್ಷಣಾ ವೇದಿಕೆ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ನಗರದ ಹನುಮಾನ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಸುಭಾಶ್ಚಂದ್ರ ಬೋಸ್, ಶಾಸ್ತ್ರಿವೃತ್ತ ಮಾರ್ಗವಾಗಿ ತಹಶೀಲ್ದಾರ್‌ ಕಚೇರಿಗೆ ಬಂತು. ಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ನಾಲ್ಕೂವರೆ ವರ್ಷಗಳಲ್ಲಿ ವಿವಿಧ ಹಿಂದೂ ಸಂಘಟನೆಗಳಿಗೆ ಸೇರಿದ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ನಡೆದಿರುವುದು ಆಘಾತಕಾರಿ ಸಂಗತಿಯಾಗಿದೆ. ರಾಜ್ಯದಾದ್ಯಂತ ನಡೆದಿರುವ ಎಲ್ಲ ಹಿಂದೂ ಕಾರ್ಯಕರ್ತರ ಹತ್ಯೆ ಒಂದೇ ಮಾದರಿಯಲ್ಲಿ ಇವೆ. ಹತ್ಯೆ ಹಿಂದೆ ಐಎಸ್‌ಐಎಸ್, ಇಂಡಿಯನ್ ಮಜಾಹಿದ್ದೀನ್‌ನಂತಹ ಭಯೋತ್ಪಾದಕ ಸಂಘಟನೆ, ಕೆಎಫ್‌ಡಿ, ಪಿಎಫ್‌ಐ ಮತ್ತು ಎಸ್‌ಡಿಪಿಐ ನಂತಹ ಮತೀಯ ಸಂಘಟನೆಗಳ ಸಕ್ರಿಯ ಬೆಂಬಲ ಇರುವ ಆರೋಪಗಳು ಕೇಳಿ ಬರುತ್ತಿವೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಹಿಂದೂ ಕಾರ್ಯಕರ್ತರು ಮತ್ತು ಮುಖಂಡರಿಗೆ ಜೀವಭದ್ರತೆ ಒದಗಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಹತ್ಯಾಪ್ರಕರಣಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು. ಎಸ್‌ಡಿಪಿಐ, ಕೆಎಫ್‌ಡಿ, ಪಿಎಫ್‌ಐನಂತಹ ಮತೀಯ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಶೇಖಗೌಡ ಮಾಗನೂರ, ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಸಿದ್ದಣ್ಣಗೌಡ ಕಾಡಮನೋರ್, ಡಿ.ಎಂ.ವೆಂಕಟೇಶ, ನಾಗರತ್ನಾ ಕುಪ್ಪಿ, ವೀಣಾ ಮೋದಿ, ತಿಪ್ಪಣ್ಣ ಕೋನಿಮನಿ, ಸುರೇಶ ಆಕಾಳ, ಶಿವು ದಾಸನಕೇರಿ, ಜಿಲ್ಲಾ ಸಂಚಾಲಕ ಅಂಬಯ್ಯಾ ಶಾಬಾದಿ, ಮಲ್ಲಿಕಾರ್ಜುನ ಭಂಗಿ, ರಮೇಶ ಕೋಟಿಮನಿ, ಸಾಯಿಬಣ್ಣ ಚಂಡರಕಿ, ರಾಘವೇಂದ್ರ ಗೌವಳಿ, ಬನ್ನಪ್ಪ, ಶಿವಕುಮಾರ, ಅಂಬರೇಶ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

* * 

ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಒದಗಿಸುವಲ್ಲಿ ಸರ್ಕಾರ ವಿಫಲಗೊಂಡಿದೆ. ಮತೀಯ ಸಂಘಟನೆಗಳಿಗೆ ಪರೋಕ್ಷ ಬೆಂಬಲ ನೀಡಿದೆ.
ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಬಿಜೆಪಿ ಮುಖಂಡ

Comments
ಈ ವಿಭಾಗದಿಂದ ಇನ್ನಷ್ಟು
ವೈಭವದ ಸೋಮನಾಥ ದೇವರ ಉಚ್ಛಾಯಿ

ಕಕ್ಕೇರಾ
ವೈಭವದ ಸೋಮನಾಥ ದೇವರ ಉಚ್ಛಾಯಿ

19 Jan, 2018
ನೂತನ ಪಿಂಚಣಿ ಯೋಜನೆ ರದ್ದುಪಡಿಸಿ

ಯಾದಗಿರಿ
ನೂತನ ಪಿಂಚಣಿ ಯೋಜನೆ ರದ್ದುಪಡಿಸಿ

19 Jan, 2018
ಅತ್ಯಾಚಾರ ಸಂತ್ರಸ್ಥೆಗೆ ನ್ಯಾಯ ಒದಗಿಸಿ

ಯಾದಗಿರಿ
ಅತ್ಯಾಚಾರ ಸಂತ್ರಸ್ಥೆಗೆ ನ್ಯಾಯ ಒದಗಿಸಿ

18 Jan, 2018

ಕೆಂಭಾವಿ
ಮೂಲಸೌಕರ್ಯಕ್ಕೆ ಆದ್ಯತೆ: ಶಿರವಾಳ

ಸಮೀಪದ ಮಲ್ಲಾ ಕ್ರಾಸ್‌ನಲ್ಲಿ 2017–18ನೇ ಸಾಲಿನ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ಮಲ್ಲಾದಿಂದ ಕೆಂಭಾವಿಯ 9.8 ಕಿ.ಮೀ ರಸ್ತೆಯ ₹1.25 ಕೋಟಿ...

18 Jan, 2018
ಗಂಭೀರ ಚರ್ಚೆ ಇಲ್ಲದೆ ಸಭೆ ಸಮಾಪ್ತಿ

ಯಾದಗಿರಿ
ಗಂಭೀರ ಚರ್ಚೆ ಇಲ್ಲದೆ ಸಭೆ ಸಮಾಪ್ತಿ

18 Jan, 2018