ಮುಧೋಳ

ಹೆದ್ದಾರಿಯಲ್ಲಿ ಸಂಚಾರ ದುಸ್ತರ

ವಿಜಯಪುರ ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಚಲಾಯಿಸುವಾಗ ಪಂಚರ್ ಆದ ಅನುಭವಾದರೆ ನೀವು ಮುಧೋಳ ನಗರ ಪ್ರವೇಶಿಸಿದ್ದೀರಿ ಎಂದೇ ಅರ್ಥ.

ಮುಧೋಳ: ವಿಜಯಪುರ ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಚಲಾಯಿಸುವಾಗ ಪಂಚರ್ ಆದ ಅನುಭವಾದರೆ ನೀವು ಮುಧೋಳ ನಗರ ಪ್ರವೇಶಿಸಿದ್ದೀರಿ ಎಂದೇ ಅರ್ಥ. ಹೀಗಾದಾಗ ವಾಹನದಿಂದ ಕೆಳಗೆ ಇಳಿದೂ ನೋಡುತಿಲ್ಲ. ಏಕೆಂದರೆ, ಹಿಂದೆ ವಾಹನಗಳ ಹಾರ್ನ್‌ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಇದು ನಗರದಲ್ಲಿ ನಿತ್ಯ ವಾಹನ ಸವಾರರು ಅನುಭವಿಸುವ ಸಂಕಷ್ಟ.

ನಗರತದಲ್ಲಿ ಸಾಗುವ ಹೆದ್ದಾರಿಯ ಮೇಲಿನ ಒಂದು ಪದರ ಎಲ್ಲೆಂದರಲ್ಲಿ ಕಿತ್ತು ಹೋಗಿರುವುದರಿಂದ ಪಂಚರ್‌ ಆದ ಅನುಭವವಾಗುತ್ತದೆ. ಇದರಿಂದ ವಾಹನ ಚಾಲಕರು ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ. ದ್ವಿಚಕ್ರ ವಾಹನ ಚಾಲಕರಿಗಂತೂ ಹೆಚ್ಚು ಸಂಕಷ್ಟ. ವಾಹನ ಚಾಲಕರ ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುತ್ತಲೇ ಇವೆ. ಸ್ಕಿಡ್‌ ಆಗಿ ನೆಲ್ಲಕ್ಕುರುಳುವೂ ಇದೆ. ಮಹಿಳೆಯರು ದ್ವಿಚಕ್ರ ವಾಹನದಿಂದ ಬೀಳುವ ಪ್ರಕರಣಗಳು ಹೆಚ್ಚಿವೆ.

‘ಹೆದ್ದಾರಿಯ ಅವ್ಯವಸ್ಥೆಯಿಂದ ನಗರದ ವಾಹನ ಸವಾರರಿಗೆ ತೊಂದರೆ ಆಗಿದೆ. ಇದನ್ನು ಸರಿಪಡಿಸಬೇಕು’ ಎಂದು ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷ ಪ್ರದೀಪ ನಿಂಬಾಳಕರ, ಮುಖಂಡರಾದ ತುಷಾರ ಭೂಪಳೆ, ಕಿರಣ ಗಣಪ್ಪಗೋಳ ಆಗ್ರಹಿಸುತ್ತಾರೆ.

‘ರಸ್ತೆಯಲ್ಲಿ ಎಡಬಿಡದೆ ಸಂಚಾರವಿರುತ್ತದೆ. ವಿದ್ಯಾರ್ಥಿಗಳು, ವೃದ್ಧರು ರಸ್ತೆ ದಾಟುವುದಕ್ಕೂ ಪರದಾಡುವ ಪರಿಸ್ಥಿತಿ ಇಲ್ಲಿದೆ. ಈ ಹೆದ್ದಾರಿಯ ಒಂದು ಬದಿ 4 ಅಡಿ ಜಾಗವನ್ನು ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆಗೆ ಅಗೆದು, ಗರಸು ತುಂಬಲಾಗಿದೆ. ವರ್ಷಗಳು ಗತಿಸಿದರೂ ಡಾಂಬರ್‌ ಹಾಕಿಲ್ಲ. ಇನ್ನೊಂದು ಬದಿಯಲ್ಲಿ 4 ಅಡಿ ಜಾಗವನ್ನು ಒಳಚರಂಡಿ ಕಾಮಗಾರಿಗಾಗಿ ಅಗೆಯಲಾಗಿದೆ. ಅದಕ್ಕೆ ಡಾಂಬರ್ ಮಾಡಿದ್ದರೂ ಅದು ಮೊದಲಿನ ರಸ್ತೆಗೆ ಹೊಂದಿಕೊಂಡಿಲ್ಲ. ಇದರಿಂದ ಸಂಚಾರಿಗಳಿಗೆ ನಿತ್ಯ ನರಕವಾಗಿದೆ’ ಎಂದು ಪ್ರದೀಪ ಹೇಳುತ್ತಾರೆ.

‘ಪಾದಚಾರಿ ಸ್ಥಳವನ್ನು ಕೆಲವು ಕಡೆ ಅಂಗಡಿಕಾರರು ಆಕ್ರಮಿಸಿಕೊಂಡಿದ್ದಾರೆ. ಕೆಲವು ಸ್ಥಳಗಳಲ್ಲಿ ಸಿಮೆಂಟ್ ಬ್ಲಾಕ್ ಕಳಚಿ ಚರಂಡಿಯಲ್ಲಿ ಬಿದ್ದಿವೆ. ಇಲ್ಲಿ ಜನರೇ ಬೀಳುವಂತಹ ಪರಿಸ್ಥಿತಿ ಇದೆ. ರಸ್ತೆಯಲ್ಲಿ ತಗ್ಗು ದಿಣ್ಣೆ ತಪ್ಪಿಸಲು ಸವಾರರು ಸರ್ಕಸ್ ಮಾಡಬೇಕು. ಇದನ್ನು ತಪ್ಪಿಸಲು ನಗರದಲ್ಲಿನ ಒಟ್ಟು ರಸ್ತೆಗೆ ಡಾಂಬರು ಹಾಕಿ, ಸಂಚಾರ ಸುಗಮಗೊಳಿಸಬೇಕು. ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಯುವ ಮೋರ್ಚಾದಿಂದ ಸತ್ಯಾಗ್ರಹ ನಡೆಸಲಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

 

Comments
ಈ ವಿಭಾಗದಿಂದ ಇನ್ನಷ್ಟು
‘ತೇರು, ಜಾತ್ರೆ ಸಹಬಾಳ್ವೆ ಸಂಕೇತ’

ಬಾಗಲಕೋಟೆ
‘ತೇರು, ಜಾತ್ರೆ ಸಹಬಾಳ್ವೆ ಸಂಕೇತ’

20 Mar, 2018
ವೀಕ್ ಕ್ಯಾಂಡಿಡೇಟ್ ವಿಧಾನಸೌಧದತ್ತ!

ಬಾಗಲಕೋಟೆ
ವೀಕ್ ಕ್ಯಾಂಡಿಡೇಟ್ ವಿಧಾನಸೌಧದತ್ತ!

20 Mar, 2018
ಹಿಂಗಾರು ಮಳೆ ಸಂಪೂರ್ಣ, ಮುಂಗಾರು ಬೆಳೆ ಸಾಧಾರಣ

ಗುಳೇದಗುಡ್ಡ
ಹಿಂಗಾರು ಮಳೆ ಸಂಪೂರ್ಣ, ಮುಂಗಾರು ಬೆಳೆ ಸಾಧಾರಣ

20 Mar, 2018
1560 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

ಇಳಕಲ್
1560 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

20 Mar, 2018
100 ಕ್ಷೇತ್ರದಲ್ಲಿ ಆರ್‌.ಎಸ್‌.ಪಿ ಸ್ಫರ್ಧೆ

ಬಾದಾಮಿ
100 ಕ್ಷೇತ್ರದಲ್ಲಿ ಆರ್‌.ಎಸ್‌.ಪಿ ಸ್ಫರ್ಧೆ

19 Mar, 2018