ಬೀದರ್

ಎಐಎಂಐಎಂ ಕಾರ್ಯಕರ್ತರ ಧರಣಿ

ಒಳ ಚರಂಡಿ ಕಾಮಗಾರಿ ಕಳಪೆಯಾಗಿದೆ. ಚರಂಡಿಯಲ್ಲಿನ ಹೂಳು ತೆಗೆಯುವ ಹೆಸರಲ್ಲಿ ₹ 36 ಲಕ್ಷ ಎತ್ತಿ ಹಾಕಲಾಗಿದೆ.

ಬೀದರ್: ನಗರಸಭೆ ವತಿಯಿಂದ ಓಲ್ಡ್‌ ಸಿಟಿಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅಪೂರ್ಣವಾಗಿವೆ. ಕಾಮಗಾರಿ ಪೂರ್ಣಗೊಳಿಸಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಮಜ್ಲಿಸ್ ಐತೆಹಾದುಲ್ ಮುಸ್ಲಿಮಿನ್ (ಎಐಎಂಐಎಂ) ಕಾರ್ಯಕರ್ತರು ಇಲ್ಲಿಯ ನಗರಸಭೆ ಆಯುಕ್ತರ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕ ರಹೀಂ ಖಾನ್‌, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಆಯುಕ್ತ ಮನೋಹರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಓಲ್ಡ್‌ ಸಿಟಿಯಲ್ಲಿ ಮೊದಲ ಹಂತದ ಒಳಚರಂಡಿ ನಿರ್ಮಾಣ, ನಿರಂತರ ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಕಾಮಗಾರಿಗಳು ಇನ್ನೂ ಮುಗಿದಿಲ್ಲ ಎಂದು ದೂರಿದರು.

ಮೊದಲ ಹಂತದ ಒಳಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಎರಡನೇ ಹಂತದ ಕಾಮಗಾರಿ ಆರಂಭಿಸಲಾಗಿದೆ. ರಸ್ತೆ ಮಧ್ಯೆ ಅಗೆದು ಬಿಟ್ಟಿರುವ ಕಾರಣ ಸಾರ್ವಜನಿಕರ ಸಂಚಾರಕ್ಕೂ ತೊಂದರೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಮೈಲೂರು, ಹಳ್ಳದಕೇರಿ, ಕುಂಬಾರವಾಡ ಪ್ರದೇಶದಲ್ಲಿ ನಿರಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಓಲ್ಡ್‌ ಸಿಟಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿಲ್ಲ. ನಲ್ಲಿಗೆ 15 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಮೋಟಾರ್‌ ಕೆಟ್ಟು ಹೋದರೆ ಅಧಿಕಾರಿಗಳು ತ್ವರಿತ ದುರಸ್ತಿಗೆ ಮುಂದಾಗುತ್ತಿಲ್ಲ. ಹೀಗಾಗಿ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ದೂರಿದರು.

ಒಳ ಚರಂಡಿ ಕಾಮಗಾರಿ ಕಳಪೆಯಾಗಿದೆ. ಚರಂಡಿಯಲ್ಲಿನ ಹೂಳು ತೆಗೆಯುವ ಹೆಸರಲ್ಲಿ ₹ 36 ಲಕ್ಷ ಎತ್ತಿ ಹಾಕಲಾಗಿದೆ. ನಕಲಿ ಬಿಲ್‌ ಸೃಷ್ಟಿಸಿ ಹಣ ಪಡೆದಿರುವ ಸಾಧ್ಯತೆ ಇದ್ದು, ಜಿಲ್ಲಾಧಿಕಾರಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಎಐಎಂಐಎಂ ಪಕ್ಷದ ಬೀದರ್ ಘಟಕದ ಅಧ್ಯಕ್ಷ ಸೈಯದ್ ಮನ್ಸೂರ್ ಅಹಮ್ಮದ್ ಖಾದ್ರಿ ಒತ್ತಾಯಿಸಿದರು.

ನಗರಸಭೆ ಆಯುಕ್ತ ಮನೋಹರ ಸ್ಥಳಕ್ಕೆ ಭೇಟಿ ನೀಡಿ ಒಂದು ವಾರದೊಳಗೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ನಗರಸಭೆ ಸದಸ್ಯರಾದ ಅಬ್ದುಲ್‌ ಅಜೀಜ್‌ ಮುನ್ನಾ, ಸುನೀಲ ಶಿವಾನಂದ ಒಂಟೆ, ಪ್ರಮುಖರಾದ ಹಮೀದ್‌ ಸೌದಾಗರ್‌, ವಸೀಮ್‌ ಕಿರ್ಮಾನಿ, ಜಮಿಲ್‌ ಅಹಮ್ಮದ್‌, ಸೈಯದ್‌ ಇಸ್ಮಾಯಿಲ್‌ ಖಾದ್ರಿ, ಮೊಹಮ್ಮದ್‌ ಸಮೀರ್‌, ಶಫಿವುಲ್ಲಾ ಬೇಗ್‌ ಧರಣಿಯಲ್ಲಿ ಪಾಲ್ಗೊಂಡಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಭಾಲ್ಕಿ
ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಪಟ್ಟದ್ದೇವರು

ಲಿಂ.ಚನ್ನಬಸವ ಪಟ್ಟದ್ದೇವರ 19ನೇ ಸ್ಮರಣೋತ್ಸವ, ವಚನ ಜಾತ್ರೆ ಶನಿವಾರ (ಏ.21) ನಡೆಯಲಿದ್ದು, ಪಟ್ಟಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರಮುಖ ವೃತ್ತಗಳಲ್ಲಿ ಶರಣರ ನೂರಾರು...

21 Apr, 2018

ಬೀದರ್
ಅಕ್ರಮ ಮದ್ಯ, ಗಾಂಜಾ ವಶ: 129 ಜನರ ಬಂಧನ

ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ 18ರ ವರೆಗೆ ಜಿಲ್ಲೆಯಲ್ಲಿ 995.500 ಲೀಟರ್ ಅಕ್ರಮ ಮದ್ಯ, 168.150 ಲೀಟರ್ ಬೀಯರ್, 84...

21 Apr, 2018

ಬೀದರ್‌
ಶೈಲೇಂದ್ರ, ಕಲ್ಲೂರಗೆ ಬಿಜೆಪಿ ಟಿಕೆಟ್

ರಾಜಕೀಯ ಪಕ್ಷಗಳು ಜಿಲ್ಲೆಯ ಎಲ್ಲ ಕ್ಷೇತ್ರಗಳ ಟಿಕೆಟ್‌ ಘೋಷಣೆ ಮಾಡಿವೆ. ಕಾಂಗ್ರೆಸ್ ಮೊದಲ ಹಂತದಲ್ಲೇ ಎಲ್ಲ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದರೆ, ಉತ್ತಮ ಅಭ್ಯರ್ಥಿಗಳ ನಿರೀಕ್ಷೆಯಲ್ಲಿದ್ದ...

21 Apr, 2018
ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಹುಮನಾಬಾದ್
ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

20 Apr, 2018

ಬೀದರ್‌
ಒಗ್ಗೂಡುತ್ತಿರುವ ಮರಾಠರು: ಬಿಜೆಪಿ, ಕಾಂಗ್ರೆಸ್‌ ತಳಮಳ

ಜೆಡಿಎಸ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿಶ್ಚಯಿಸಿದ ನಂತರ ಜಿಲ್ಲೆಯಲ್ಲಿ ಮರಾಠರು ಒಗ್ಗೂಡಲು ಆರಂಭಿಸಿದ್ದಾರೆ. ಇದರಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ...

20 Apr, 2018