ಮೂಡಿಗೆರೆ

ಬಡವನದಿಣ್ಣೆ ಸುತ್ತಮುತ್ತ ಕಾಡಾನೆ ದಾಳಿ

‘ಕಾಡಾನೆ ದಾಳಿಯು ರೈತರಿಗೆ ಬಿಸಿತುಪ್ಪವಾಗಿದ್ದು, ಕಟಾವಿನ ಸಂದರ್ಭದಲ್ಲಿ ದಾಳಿ ನಡೆಸಿ ಬೆಳೆಹಾನಿ ಮಾಡುತ್ತಿರುವುದು ಅಪಾರ ನಷ್ಟವಾಗುತ್ತಿದೆ.

ಮೂಡಿಗೆರೆ: ತಾಲ್ಲೂಕಿನ ಬಡವನದಿಣ್ಣೆ ಸುತ್ತಮುತ್ತಲ ಪ್ರದೇಶದಲ್ಲಿ ಮಂಗಳವಾರ ಕಾಡಾನೆಗಳು ಕಾಣಿಸಿಕೊಂಡಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.ಮಂಗಳವಾರ ಮುಂಜಾನೆ ಗ್ರಾಮಕ್ಕೆ ಕೆಂಜಿಗೆ ಭಾಗದಿಂದ ಬಂದಿರಬಹುದು ಎಂದು ಶಂಕಿಸಿರುವ ಎರಡು ಕಾಡಾನೆಗಳು, ಗ್ರಾಮದ ಲಕ್ಷ್ಮಣ ಗೌಡ ಎಂಬುವವರ ಕಾಫಿ ತೋಟದಲ್ಲಿ ತಿರುಗಾಡಿ ಫಸಲುಭರಿತ ಗಿಡಗಳನ್ನು ತುಳಿದು ಹಾನಿಗೊಳಿಸಿವೆ. ಗ್ರಾಮದ ಪರಮೇಶ್‌, ಮಹೇಶ್‌ ಸೇರಿದಂತೆ ಎಂಟಕ್ಕೂ ಅಧಿಕ ರೈತರ ಭತ್ತದ ಗದ್ದೆಗಳಲ್ಲಿ ತಿರುಗಾಡಿ, ಕಟಾವಿಗೆ ಸಿದ್ಧವಾಗಿದ್ದ ಭತ್ತದ ಪೈರನ್ನು ತಿಂದು, ತುಳಿದು ಹಾನಿಗೊಳಿಸಿವೆ.

ಬೆಳಕು ಹರಿಯುತ್ತಿದ್ದಂತೆ ಕೆಂಜಿಗೆ ಅರಣ್ಯದತ್ತ ತೆರಳಲು ಮುಂದಾಗಿರುವ ಕಾಡಾನೆಗಳು, ಅರಣ್ಯ ಪ್ರವೇಶಿಸಲಾಗದೇ, ಗ್ರಾಮದ ಬಳಿಯಿರುವ ಸರ್ಕಾರಿ ಶಾಲೆಯ ಹಿಂಭಾಗದಲ್ಲಿಯೇ ವಾಸ್ತವ್ಯ ಹೂಡಿದ್ದು, ಇಡೀ ದಿನ ಶಾಲಾ ಹಿಂಭಾಗದ ಅರಣ್ಯದಲ್ಲಿಯೇ ಬೀಡುಬಿಟ್ಟಿದ್ದವು. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಬಹುತೇಕ ಕಾಫಿ ತೋಟಗಳಲ್ಲಿ ರಜೆ ಘೋಷಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೂ ರಜೆ ನೀಡಲಾಗಿತ್ತು.

ಕಾಡಾನೆ ಬಂದಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮೂಡಿಗೆರೆ ಅರಣ್ಯ ಇಲಾಖೆ ಸಿಬ್ಬಂದಿ, ಹಗಲಿನಲ್ಲಿ ಕಾಡಾನೆಗಳನ್ನು ಅರಣ್ಯದತ್ತ ಓಡಿಸಿದರೆ ಅನಾಹುತ ಸಂಭವಿಸಬಹುದು ಎಂಬ ಹಿನ್ನೆಲೆಯಲ್ಲಿ, ಸಂಜೆಯವರೆಗೂ ಕಾಡಾನೆಗಳು ಕದಲದಂತೆ ಕಾದು, ರಾತ್ರಿ ಪಟಾಕಿ ಸಿಡಿಸಿ, ಕಾಡನೆಗಳನ್ನು ಅರಣ್ಯದತ್ತ ಓಡಿಸಿದರು.

‘ಕಾಡಾನೆ ದಾಳಿಯು ರೈತರಿಗೆ ಬಿಸಿತುಪ್ಪವಾಗಿದ್ದು, ಕಟಾವಿನ ಸಂದರ್ಭದಲ್ಲಿ ದಾಳಿ ನಡೆಸಿ ಬೆಳೆಹಾನಿ ಮಾಡುತ್ತಿರುವುದು ಅಪಾರ ನಷ್ಟವಾಗುತ್ತಿದೆ. ರೈತರು ಸಾಲ ಮಾಡಿ ಕೃಷಿ ಮಾಡಿದ್ದು, ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕಾಡಾನೆ ದಾಳಿಯಿಂದ ಭತ್ತದ ಬೆಳೆಯನ್ನು ಕೈಬಿಡುತ್ತಿದ್ದು, ಮನೆ ಪೂರ್ತಿಗೆ ಭತ್ತ ಬೆಳೆದರೂ ಕಾಡಾನೆಗಳು ನಾಶಗೊಳಿಸುತ್ತಿವೆ. ಕಾಡಾನೆಗಳನ್ನು ಸ್ಥಳಾಂತರ ಮಾಡುವುದೊಂದೇ ಪರಿಹಾರವಾಗಿದ್ದು, ಅರಣ್ಯ ಇಲಾಖೆಯು ಕೂಡಲೇ ಕಾಡಾನೆಗಳನ್ನು ಸ್ಥಳಾಂತರಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಮೂಡಿಗೆರೆ
‘ಮತದಾರರು ವಿರೋಧಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ’

ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಬಂದು ಶುಕ್ರವಾರ ನಾಮಪತ್ರ ಸಲ್ಲಿಸಿದರು.

21 Apr, 2018
ಭಾರಿ ಗಾಳಿ ಮಳೆ: ತೋಟಗಳಿಗೆ ಹಾನಿ

ಕಳಸ
ಭಾರಿ ಗಾಳಿ ಮಳೆ: ತೋಟಗಳಿಗೆ ಹಾನಿ

21 Apr, 2018

ಚಿಕ್ಕಮಗಳೂರು
‘ಮತದಾನ ಮಾಡಲು ನಿರ್ಲಕ್ಷ ಬೇಡ’

ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕು ಎಂದು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು.

21 Apr, 2018

ಚಿಕ್ಕಮಗಳೂರು
7 ಮಂದಿಯಿಂದ 9 ನಾಮಪತ್ರ ಸಲ್ಲಿಕೆ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಬಿಜೆಪಿಯ ಸಿ.ಟಿ.ರವಿ ಅವರು ಮೂರು, ಪಕ್ಷೇತರ ಆರು ಸೇರಿದಂತೆ ಒಟ್ಟು ಒಂಬತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ.

21 Apr, 2018

ಮೂಡಿಗೆರೆ
ಮೂಡಿಗೆರೆ: ಮೋಟಮ್ಮ ನಾಮಪತ್ರ ಸಲ್ಲಿಕೆ

ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಕಾಂಗ್ರೆಸ್‌ ಪಕ್ಷದಿಂದ ಗುರುವಾರ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 12ಕ್ಕೆ ತಾಲ್ಲೂಕು ಕಚೇರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್‌. ಪ್ರಭಾಕರ್‌,...

20 Apr, 2018