ಚಿತ್ರದುರ್ಗ

ಭದ್ರಾ ಮೇಲ್ದಂಡೆ ಮಾರ್ಗ ಬದಲಾವಣೆಗೆ ಅವಕಾಶವಿಲ್ಲ

ಇದೆಲ್ಲ ಗುರುತ್ವಾಕರ್ಷಣ (ನೈಸರ್ಗಿಕವಾಗಿ) ನೀರು ಹರಿಯುತ್ತದೆ. ಸಂಗೇನಹಳ್ಳಿ ಕೆರೆಯಿಂದ ಮೊಳಕಾಲ್ಮುರು ತಾಲೂಕಿನ ರಂಗಯ್ಯನದುರ್ಗ ಜಲಾಶಯಕ್ಕೆ ಹರಿದು ಹೋಗುತ್ತದೆ.

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನಯಡಿ ಕಾತ್ರಾಳು ಕೆರೆ ಮೂಲಕ ಸಂಗೇನಹಳ್ಳಿಗೆ ನೀರು ಹಾಯಿಸುವ ಉದ್ದೇಶಿತ ಮಾರ್ಗ ಬದಲಾವಣೆಗೆ ಅವಕಾಶ ಕೊಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ ಸ್ಪಷ್ಟಪಡಿಸಿದರು.

ಜಿಲ್ಲಾ ನೀರಾವರಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕಾತ್ರಾಳು ಅಚ್ಚುಕಟ್ಟು ಪ್ರದೇಶದ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ನಂತರ ಸಚಿವರ ಮನೆಗೆ ತೆರಳಿ ಮನವಿ ಸಲ್ಲಿಸಿದ ವೇಳೆ, ಸಚಿವ ಆಂಜನೇಯ ಈ ರೀತಿ ಭರವಸೆ ನೀಡಿದರು.

ಇದಕ್ಕೂ ಮುನ್ನ ಸಚಿವರಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ಈ ಮೊದಲು ಗುರುತಿಸಲಾಗಿದ್ದ ಮಾರ್ಗದ ಬಗ್ಗೆ ಮಾಹಿತಿ ನೀಡಿದರು. ‘ಕಾತ್ರಾಳ್ ಕೆರೆ ಸಂಗೇನಹಳ್ಳಿ ಕೆರೆಗೆ ನೀರು ಹರಿಸಿ ಅಲ್ಲಿಂದ ಜಗಳೂರು ಪ್ರದೇಶಕ್ಕೆ ನೀರವಾರಿ ಯೋಜನೆ ರೂಪಿಸಲಾಗಿತ್ತು.

ಇದೆಲ್ಲ ಗುರುತ್ವಾಕರ್ಷಣ (ನೈಸರ್ಗಿಕವಾಗಿ) ನೀರು ಹರಿಯುತ್ತದೆ. ಸಂಗೇನಹಳ್ಳಿ ಕೆರೆಯಿಂದ ಮೊಳಕಾಲ್ಮುರು ತಾಲೂಕಿನ ರಂಗಯ್ಯನದುರ್ಗ ಜಲಾಶಯಕ್ಕೆ ಹರಿದು ಹೋಗುತ್ತದೆ. ಐಮಂಗಲ ಮೂಲಕ ಹಾದು ಬರುವ ಚಿತ್ರದುರ್ಗ ವಿಭಾಗದ ಕಾಲುವೆಯಿಂದ ನೀರು ತೆಗೆದುಕೊಂಡು ಕಾತ್ರಾಳು ಕೆರೆ ತುಂಬಿಸುವ ಉದ್ದೇಶಕ್ಕೆ ಇದೀಗ ಜಗಳೂರು ಭಾಗದ ರೈತರಿಂದ ಅಪಸ್ವರದ ಮಾತುಗಳು ಕೇಳಿ ಬಂದಿವೆ ಎಂದು ಮಾಹಿತಿ ನೀಡಿದರು.

ಈ ಸಂಬಂಧ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಗ ಬದಲಾವಣೆ ಕುರಿತಂತೆ ಪರಿಶೀಲನಾ ಸಮಿತಿ ರಚಿಸಿದ್ದಾರೆ. ಡಿ.ಎನ್.ದೇಸಾಯಿ ನೇತತ್ವದಲ್ಲಿ ಈ ಸಮಿತಿ ಈಗಾಗಲೇ ವಾಸ್ತಾವಂಶ ಪರಿಶೀಲನೆಗೆ ಮುಂದಾಗಿದೆ ಎಂದು ತಿಳಿಸಿದರು.

ಸಚಿವ ಆಂಜನೇಯ ಮಾತನಾಡಿ, ‘ಈ ಎಲ್ಲಾ ವಿಚಾರಗಳನ್ನು ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸುತ್ತೇನೆ. ಮಾರ್ಗ ಬದಲಾವಣೆ ಮಾಡಬಾರದು ಎಂದು ಸಲಹೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ.ನುಲೇನೂರು ಎಂ.ಶಂಕರಪ್ಪ, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಹಿರಿಯೂರು ತಾಲೂಕು ಘಟಕದ ಅಧ್ಯಕ್ಷ ಹೊರಕೇರಪ್ಪ, ಹಂಪಯ್ಯನಮಾಳಿಗೆ ಧನಂಜಯ, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಖಜಾಂಚಿ ಕೆ.ಆರ್.ದಯಾನಂದ್, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಕಾತ್ರಾಳು ಅಚ್ಚುಕಟ್ಟು ಪ್ರದೇಶದ ರೈತರು ಈ ವೇಳೆ ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
24ರಿಂದ ಅಮ್ಮಾಜಿ ಕರಿಯಮ್ಮದೇವಿ ಪ್ರತಿಷ್ಠಾಪನೆ

ಚಿತ್ರದುರ್ಗ
24ರಿಂದ ಅಮ್ಮಾಜಿ ಕರಿಯಮ್ಮದೇವಿ ಪ್ರತಿಷ್ಠಾಪನೆ

19 Jan, 2018

ಚಿಕ್ಕಜಾಜೂರು
ಚಿಕ್ಕಜಾಜೂರು: ದೊಡ್ಡ ಮಾರಿಕಾಂಬ ದೇವಿ ಜಾತ್ರೆ

ಜಾತ್ರೆ ಅಂಗವಾಗಿ ಪ್ರತಿಷ್ಠಾಪಿಸಿರುವ ದೊಡ್ಡ ಮಾರಿಕಾಂಬ ದೇವಿಯ ಗಾವನ್ನು ವೀಕ್ಷಿಸಲು ಗ್ರಾಮಸ್ಥರು ಹಾಗೂ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಭಕ್ತರೊಂದಿಗೆ ಗುರುವಾರ ಸಂಜೆ ಬಂದು...

19 Jan, 2018

ಚಿತ್ರದುರ್ಗ
ಚುನಾವಣಾ ಯಶಸ್ಸಿಗೆ ವಿದ್ಯಾರ್ಥಿಗಳೂ ಕೈಜೋಡಿಸಿ

2020ರ ವೇಳೆಗೆ ಒಟ್ಟಾರೆ ದೇಶದಲ್ಲಿನ ಜನಸಂಖ್ಯೆಯಲ್ಲಿ ಯುವಕ– ಯುವತಿಯರ ಸಂಖ್ಯೆ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲೂ ಯುವ ಜನಾಂಗ ಮೇಲುಗೈ ಸಾಧಿಸಲಿದೆ. ಈ ಹಿನ್ನೆಲೆಯಲ್ಲಿ ಉತ್ತಮರನ್ನು...

19 Jan, 2018
‘ಸಾಂಸ್ಕೃತಿಕ ಜೀವಂತಿಕೆಯಿಂದ ಧರ್ಮದ ಉತ್ಥಾನ’

ಹೊಳಲ್ಕೆರೆ
‘ಸಾಂಸ್ಕೃತಿಕ ಜೀವಂತಿಕೆಯಿಂದ ಧರ್ಮದ ಉತ್ಥಾನ’

18 Jan, 2018
ಮತ ಚಲಾಯಿಸಿ; ಪ್ರಜಾಪ್ರಭುತ್ವ ಬಲಗೊಳಿಸಿ

ಚಿತ್ರದುರ್ಗ
ಮತ ಚಲಾಯಿಸಿ; ಪ್ರಜಾಪ್ರಭುತ್ವ ಬಲಗೊಳಿಸಿ

18 Jan, 2018