ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ನ್ಯಾಯ ಸಿಗುವ ವಿಶ್ವಾಸ

Last Updated 20 ಡಿಸೆಂಬರ್ 2017, 8:23 IST
ಅಕ್ಷರ ಗಾತ್ರ

ಧಾರವಾಡ: ತೀವ್ರ ಮಾನಸಿಕ ಒತ್ತಡಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ತಮ್ಮನ್ನು ಅಪಹರಿಸಲಾಗಿದೆ ಎಂದು ಯಾವಾಗ ಸುಳ್ಳು ಸುದ್ದಿ ಹಬ್ಬಿಸಲಾಯಿತೋ ಆಗಲೇ ಕಾಂಗ್ರೆಸ್‌ ಸೇರುವ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿರುವ ಯೋಗೀಶಗೌಡ ಗೌಡರ ಪತ್ನಿ ಮಲ್ಲಮ್ಮ, ಆ ಪಕ್ಷದಿಂದ ತಮಗೆ ಖಂಡಿತ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪತಿಯ ಕೊಲೆ ಪ್ರಕರಣದಲ್ಲಿ ನ್ಯಾಯ ಹುಡುಕುತ್ತಿದ್ದ ತಮ್ಮನ್ನು ಕೆಲವರು ದುರಾಸೆಗೆ ಬಳಸಿಕೊಂಡಾಗಲೂ ಸುಮ್ಮನಿದ್ದುದಾಗಿ ಹೇಳಿದ ಅವರು, ಅಪಹರಣ ವಿಷಯ ಹಬ್ಬಿದಾಗ ಈ ನಿಲುವಿಗೆ ಬರಬೇಕಾಯಿತು ಎಂದರು. ಈ ಬಗ್ಗೆ ದೂರವಾಣಿಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಂಗಳವಾರ ಮಾತನಾಡಿದ ಮಲ್ಲಮ್ಮ, ತಾವಿನ್ನೂ ಅಧಿಕೃತವಾಗಿ ಕಾಂಗ್ರೆಸ್‌ ಸೇರಿಲ್ಲ ಎಂದು ಸ್ಪಷ್ಟಪಡಿಸಿದರು.

‘ಕುರುಬ ಸಮಾಜದ ಮುಖಂಡರೊಂದಿಗೆ ಚರ್ಚಿಸಿದ್ದು, ಅವರು ಕಾಂಗ್ರೆಸ್‌ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಈವರೆಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವನ್ನು ಭೇಟಿಯಾಗಿಲ್ಲ. ಸಿದ್ದರಾಮಯ್ಯ ಅವರನ್ನು ಕಂಡ ನಂತರವಷ್ಟೇ ನಾನು ಹೆಬ್ಬಳ್ಳಿ ಕ್ಷೇತ್ರಕ್ಕೆ ಮರಳುತ್ತೇನೆ’ ಎಂದರು.

‘ನನ್ನ ಪತಿ ರಾಜಕೀಯದ ಮೂಲಕ ಹೆಬ್ಬಳ್ಳಿ ಕ್ಷೇತ್ರದ ಜನರ ಸೇವೆ ಮಾಡಬೇಕು ಎಂದುಕೊಂಡಿದ್ದರು. ಅವರ ಕನಸನ್ನು ನನಸು ಮಾಡಲೆಂದು ನಾನು ರಾಜಕೀಯ ಪ್ರವೇಶಿಸಿದ್ದೇನೆ. ಆದರೆ, ಇಂಥದೇ ಕ್ಷೇತ್ರ ಎಂಬ ಯಾವ ನಿರ್ಧಾರಕ್ಕೂ ಬಂದಿಲ್ಲ’ ಎಂದರು.

ಬಿಜೆಪಿಯಿಂದ ಕಾಂಗ್ರೆಸ್‌ನತ್ತ: ಪತಿಯ ಹತ್ಯೆಯಾದ ನಂತರ, ಎದುರಾದ ಚುನಾವಣೆಗೆ ನಿಲ್ಲುವಂತೆ ಟಿಕೆಟ್‌ ನೀಡಿದ್ದು ಬಿಜೆಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT