ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀರ್ಣೋದ್ಧಾರದಿಂದ ಕಲ್ಯಾಣಿಯಲ್ಲಿ ನೀರು

Last Updated 20 ಡಿಸೆಂಬರ್ 2017, 8:46 IST
ಅಕ್ಷರ ಗಾತ್ರ

ರಾಜೇಂದ್ರ ನಾಯಕ

ಹಂಸಭಾವಿ: ಗ್ರಾಮದಲ್ಲಿ ಪಾಳು ಬಿದ್ದ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣಿಯನ್ನು ನರೇಗಾ ಯೋಜನೆ ಅಡಿಯಲ್ಲಿ ಜೀರ್ಣೋದ್ಧಾರ ಮಾಡಿದ್ದರಿಂದ ಕಲ್ಯಾಣಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

ಗ್ರಾಮ ಪಂಚಾಯ್ತಿ ವತಿಯಿಂದ 2016–17ನೇ ಸಾಲಿನಲ್ಲಿ ನರೇಗಾ ಯೋಜನೆ ಅಡಿಯಲ್ಲಿ ₹20ಲಕ್ಷ ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಿ, ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡಲಾಗಿತ್ತು. ಹೀಗಾಗಿ, ಮಳೆಗಾಲ ಮುಗಿದರೂ ಕೂಡ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಗ್ರಾಮಸ್ಥರಲ್ಲಿ ಮೊಗದಲ್ಲಿ ಮಂದಹಾಸ ಮೂಡಿದೆ.

‘ಈ ಕಲ್ಯಾಣಿಯು ಅಂದಾಜು 15–16ನೇ ಶತಮಾನದಲ್ಲಿ ಕದಂಬರ ಕಾಲದಲ್ಲಿ ನಿರ್ಮಾಣವಾಗಿದ್ದು, ಅಂದು ರಾಣಿಯರು ಸ್ನಾನಕ್ಕಾಗಿ ಇವುಗಳನ್ನು ಬಳಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ’ ಎನ್ನುತ್ತಾರೆ ಉಪನ್ಯಾಸಕ ಡಾ.ಎಂ.ಎಂ.ಅಕ್ಕಿ ತಿಳಿಸಿದರು.

ಈ ವರೆಗೂ ಪಾಳುಬಿದ್ದಿದ್ದ ಕಲ್ಯಾಣಿಯನ್ನು ಇಲ್ಲಿನ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಜೀರ್ಣೋದ್ಧಾರ ಮಾಡಿ, ಗದಗ ಜಿಲ್ಲೆಯಿಂದ ಕಪ್ಪು ಕಲ್ಲುಗಳನ್ನು ತಂದು ಶೇ 90ರಷ್ಟು ಕಾಮಗಾರಿ ಮುಗಿಸಿದ್ದಾರೆ.ಈ ಎಲ್ಲ ಕ್ರಮಗಳಿಂದ ಸದ್ಯ ಕಲ್ಯಾಣಿಯಲ್ಲಿ  8– 10 ಅಡಿಯಷ್ಟು ನೀರು ಸಂಗ್ರಹವಾಗಿದೆ.

‘ಕಲ್ಯಾಣಿಯನ್ನು ಅದರ ಅರ್ಧದಷ್ಟು ಭಾಗವನ್ನು ಮಾತ್ರ ಹೂಳು ತೆಗೆಯಲಾಗಿದೆ. ಪೂರ್ಣ ಪ್ರಮಾಣದಲ್ಲಿ ಹೂಳು ತೆಗೆಯಲು ಹೆಚ್ಚಿನ ಅನುದಾನ ಬೇಕಾಗುತ್ತದೆ. ಸದ್ಯ ಈ ಕಲ್ಯಾಣಿಯ 30 ಅಡಿ ಚೌಕ ಹಾಗೂ 20 ಆಳ ಅಡಿಯಷ್ಟು ವಿಸ್ತೀರ್ಣವನ್ನು ಹೊಂದಿದೆ. ಕಲ್ಯಾಣಿಯಿಂದಾಗಿ ಅಂತರ್ಜಲ ಮಟ್ಟ ಹೆಚ್ಚಾಗುತ್ತಿರುವುದರಿಂದ ನಾವು ಮಾಡಿದ ಕಾಮಗಾರಿ ಫಲ ನೀಡಿದೆ. ಶ್ರಮ ಸಾರ್ಥಕವಾಗಿದೆ’ ಎಂದು ಎಂಜಿನಿಯರ್ ಸಿದ್ದನಗೌಡ ಕರಬಸಪ್ಪಳವರ ತಿಳಿಸಿದರು.

‘ಗ್ರಾಮದಲ್ಲಿ ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗಿ ರೈತರ ಜಮೀನುಗಳಿಂದ ಟ್ಯಾಂಕರ್‌ ಮೂಲಕ ನೀರು ತಂದು ಜನರಿಗೆ ನೀಡಿದ್ದೇವು. ಆದರೆ, ಈಗ ಈ ಕಲ್ಯಾಣಿ ಜೀರ್ಣೋದ್ಧಾರದಿಂದ ಕುಡಿಯಲು ಯೋಗ್ಯವಾದ ನೀರು ದೊರೆತಂತಾಗಿದೆ. ಅಷ್ಟೇ ಅಲ್ಲದೇ ಇನ್ನುಷ್ಟು ಬಾವಿಗಳನ್ನು ಹೂಳೆತ್ತಲು ಸ್ಫೂರ್ತಿ ಬಂದಂತಾಗಿದೆ’ ಎಂದು ಸ್ಥಳೀಯ ಪಿಡಿಒ ಹನುಮಂತಪ್ಪ ಜಿಗಳೇರ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಬಾವಿ, ಕಲ್ಯಾಣಿಗಳನ್ನು ಜೀರ್ಣೋದ್ಧಾರಕ್ಕೆ ನರೇಗಾ ಯೋಜನೆ ಅಡಿಯ ಅನುದಾನ ಸಾಕಾಗುತ್ತಿಲ್ಲ, ಹೀಗಾಗಿ ಇನ್ನಷ್ಟು ಅನುದಾನ ನೀಡಬೇಕು
ರಾಜಶೇಖರ ಹುಚ್ಚಗೊಂಡ್ರ
ಅಧ್ಯಕ್ಷ, ಗ್ರಾಮ ಪಂಚಾಯ್ತಿ ಹಂಸಭಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT