ಆಡಿಯೊ ಎಫೆಕ್ಟ್‌ಗೆ ಸೌಂಡ್‌ ಕಲೆಕ್ಷನ್‌

ಚಿತ್ರೀಕರಿಸಿದ ವಿಡಿಯೊವನ್ನು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂಗೆ ಅಪ್‌ಲೋಡ್‌ ಮಾಡುವ ಸಂದರ್ಭದಲ್ಲಿ ಕೇವಲ ಆಡಿಯೊ ಎಫೆಕ್ಟ್‌ಗಳನ್ನು ಸೇರಿಸಿ ಎಡಿಟ್‌ ಮಾಡಲು ಸೌಂಡ್‌ ಕಲೆಕ್ಷನ್‌ನಿಂದ ಸಾಧ್ಯವಾಗಲಿದೆ.

ಆಡಿಯೊ ಎಫೆಕ್ಟ್‌ಗೆ ಸೌಂಡ್‌ ಕಲೆಕ್ಷನ್‌

ಫೇಸ್‌ಬುಕ್‌ ಖಾತೆ ಹೊಂದಿದವರ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಿದೆ ತಾನೆ? ಪ್ರೊಫೈಲ್‌ ಫೋಟೊ ಬದಲಿಸುವುದರಲ್ಲಿ ಎಲ್ಲರೂ ಬ್ಯೂಸಿ ಆಗಿರುತ್ತಾರೆ. ನಮ್ಮ ಮೂಡ್‌ ಹೇಗಿದೆ ಎಂಬ ವಿಷಯವಾಗಿ ಚಿತ್ರಗಳನ್ನು ಬಳಸಿ ಸ್ಟೇಟಸ್‌ ಹಾಕುವ ಮೂಲಕ ಸ್ನೇಹಿತರು ಮಾಡಿದ ಕಮೆಂಟ್‌ಗೆ ಉತ್ತರಿಸುತ್ತಾ, ಲೈಕ್‌ಗಳ ಸಂಖ್ಯೆಯನ್ನು ಎಣಿಸುತ್ತಾ ಕಾತರದಿಂದ ಕಾಯುತ್ತಿರುತ್ತಾರೆ.

ಮೊದಮೊದಲು ಫೋಟೊಗಳನ್ನು ಮಾತ್ರ ಅಪ್‌ಲೋಡ್‌ ಮಾಡುತ್ತಿದ್ದವರು, ಮೊಬೈಲ್‌ನಲ್ಲಿ ಕ್ಯಾಮೆರಾ ಆಯ್ಕೆ ಬಂದ ಮೇಲೆ, ವಿಡಿಯೊ, ಲೈವ್‌ ವಿಡಿಯೊಗಳನ್ನು ಸಹ ಹರಿಬಿಡುತ್ತಿದ್ದಾರೆ. ಫೋಟೊವನ್ನು ಅಲಂಕರಿಸಿದ ರೀತಿಯಲ್ಲಿ ವಿಡಿಯೊವನ್ನು ಸಹ ಅಲಂಕರಿಸಬೇಕು ಎಂದು ಯೋಚಿಸುವವರಿಗೆ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ‘ಸೌಂಡ್‌ ಕಲೆಕ್ಷನ್‌’ ಎಂಬ ಹೊಸ ಆಯ್ಕೆ ಪರಿಚಯಿಸಲಾಗಿದೆ.

ಚಿತ್ರೀಕರಿಸಿದ ವಿಡಿಯೊವನ್ನು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂಗೆ ಅಪ್‌ಲೋಡ್‌ ಮಾಡುವ ಸಂದರ್ಭದಲ್ಲಿ ಕೇವಲ ಆಡಿಯೊ ಎಫೆಕ್ಟ್‌ಗಳನ್ನು ಸೇರಿಸಿ ಎಡಿಟ್‌ ಮಾಡಲು ಸೌಂಡ್‌ ಕಲೆಕ್ಷನ್‌ನಿಂದ ಸಾಧ್ಯವಾಗಲಿದೆ. ಉದಾಹರಣೆಗೆ, ನಿಮ್ಮ ಮಗು ತನ್ನ ಬೊಂಬೆಯೊಂದಿಗೆ ಕುಸ್ತಿ ಮಾಡುತ್ತಿದ್ದರೆ, ಅದಕ್ಕೆ ಡಿಶುಂ... ಡಿಶುಂ... ಎಂಬ ಶಬ್ದ ಸೇರಿಸಬಹುದು. ಹುಟ್ಟುಹಬ್ಬದ ಶುಭಾಶಯ ಕೋರಲು ‘ಹ್ಯಾಪಿ ಬರ್ತ್‌ಡೇ ಟು ಯೂ’ ಎಂಬ ಹಾಡನ್ನು ಸೇರಿಸಬಹುದು.

ಸೌಂಡ್‌ ಕಲೆಕ್ಷನ್‌ ಆಯ್ಕೆ ವಿಷಯವಾಗಿ ಪ್ರತಿಷ್ಠಿತ ಮ್ಯೂಸಿಕ್‌ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಫೇಸ್‌ಬುಕ್‌, ಯಾವುದೇ ರಾಯಲ್ಟಿಯ ಭಯವಿಲ್ಲದೇ ಮುಕ್ತವಾಗಿ ಸೌಂಡ್‌ ಕಲೆಕ್ಷನ್‌ನಲ್ಲಿರುವ ಸಂಗೀತವನ್ನು ಬಳಸಿಕೊಳ್ಳಲು ಅನುವು ಮಾಡಿಕೊಟ್ಟಿದೆ.

ಸಿನಿಮೀಯ ಮಾದರಿಯಲ್ಲಿ ನಮ್ಮ ವಿಡಿಯೊಗಳಿಗೂ ಆಡಿಯೊ ಎಫೆಕ್ಟ್‌ ಹಾಕಿ ಹೆಚ್ಚು ಲೈಕ್‌ ಗಿಟ್ಟಿಸಿಕೊಳ್ಳಲು, ನಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ‘ಸೌಂಡ್‌ ಕಲೆಕ್ಷನ್‌’ ಆಯ್ಕೆ ಸಹಾಯಕ್ಕೆ ಬರುತ್ತದೆ ಎನ್ನುವುದು ಫೇಸ್‌ಬುಕ್‌ ಬಳಕೆದಾರರ ಅಭಿಮತ.

ಬಂದಿದೆ ಆ್ಯಪಲ್‌ ಐ ಮ್ಯಾಕ್‌ ಪ್ರೊ

ಕಂಪ್ಯೂಟರ್‌ ತಂತ್ರಜ್ಞಾನ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಆ್ಯಪಲ್‌ ಸಂಸ್ಥೆಯು ವಿಭಿನ್ನ ಮತ್ತು ಹೆಚ್ಚು ಸಾಮರ್ಥ್ಯದ ಡಿವೈಸ್‌ಗಳನ್ನು ಪರಿಚಯಿಸುವ ಮೂಲಕ, ಗ್ಯಾಜೆಟ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ ಆಗಿದೆ.

ಕಂಪ್ಯೂಟರ್‌ ವಿಭಾಗದಲ್ಲಿ ಐ ಮ್ಯಾಕ್‌ ಮತ್ತು ಮ್ಯಾಕ್‌ಬುಕ್‌ಗಳ ಮಾದರಿಯನ್ನು ಹೊಂದಿದ್ದು, ಪ್ರತಿ ಆರು ತಿಂಗಳಿಗೆ ಅಪ್‌ಡೇಟ್ ಮಾಡಲಾಗುತ್ತದೆ. ಸಿನಿಮಾ ನಿರ್ಮಾಣ ಸಂಸ್ಥೆಗಳು, ಗ್ರಾಫಿಕ್ಸ್‌ ಕಲಾವಿದರು, ಆಡಿಯೊ ಎಡಿಟರ್ಸ್‌, ಸಿನಿಮಾ ತಂತ್ರಜ್ಞರು ಐ ಮ್ಯಾಕ್‌ ಸಿಸ್ಟಮ್‌ಗಳನ್ನೇ ಹೆಚ್ಚು ಬಳಸುತ್ತಾರೆ.

ಹೆಚ್ಚು ಸಾಮರ್ಥ್ಯದ ವಿಡಿಯೊಗಳನ್ನು ಪ್ಲೇ ಮಾಡಲು ಸಾಧ್ಯವಾಗುವಂತೆ 128 ಜಿ.ಬಿಯಷ್ಟು ರ್‍ಯಾಮ್‌ ಹೊಂದಿದ್ದು, 2.66 ಗಿಗಾ ಹರ್ಟ್ಸ್‌ ವೇಗದವರೆಗೂ ಕಾರ್ಯನಿರ್ವಹಣೆಗೆ ಶಕ್ತವಾಗಿರುತ್ತದೆ. 5ಕೆ ರೆಸೂಲ್ಯುಷನ್‌ನ ಡಿಸ್‌ಪ್ಲೇ ಹೊಂದಿದೆ. 18 ಕೋರ್‌ ಪ್ರೊಸೆಸರ್ ಇದಕ್ಕಿದ್ದು, ಏಕ ಸಮಯದಲ್ಲಿ ಬಹುಕಾರ್ಯಗಳನ್ನು ಮಾಡುವಷ್ಟು ಸಮರ್ಥವಾಗಿದೆ.

ಒಂದು ಟಿ.ಬಿ. (1024 ಜಿ.ಬಿ) ಸಾಮರ್ಥ್ಯದ ಆಂತರಿಕ ಎಸ್‌ಎಸ್‌ಡಿ ಸ್ಟೋರೇಜ್‌ ಡ್ರೈವ್‌ ಇದ್ದು, ಅವಶ್ಯಕತೆಗೆ ಅನುಗುಣವಾಗಿ 4 ಟಿ.ಬಿ.ಯವರೆಗೂ ವಿಸ್ತರಿಸಬಹುದಾಗಿದೆ. ಬೆಲೆ ₹ 3.22 ಲಕ್ಷದಷ್ಟು ಇದೆ.

ಪ್ರಯಾಣಿಕರಿಗೆ ಕರೆಗಂಟೆ

ಸಾಮಾನ್ಯವಾಗಿ ಗೊತ್ತು ಗುರಿಯಿಲ್ಲದ ಜಾಗಗಳಿಗೆ ಹೋಗುವಾಗ, ತಲುಪುವ ಹಾದಿಗಳ ಬಗ್ಗೆ ಪರಿಚಯದ ಕೊರತೆ ಇದ್ದಾಗ ನಮಗೆ ಮಾರ್ಗದರ್ಶಕನಂತೆ ದಾರಿ ತೋರಿಸುವ ತಂತ್ರಾಂಶ ಗೂಗಲ್ ಮ್ಯಾಪ್‌ ಆ್ಯಪ್‌.

ಇದು ಕೇವಲ ರಸ್ತೆಗಳನ್ನು ತೋರಿಸುವುದಿಲ್ಲ, ನಾವು ಎಲ್ಲಿ ಪ್ರಯಾಣ ಮಾಡುತ್ತಿದ್ದೇವೆ? ಮುಂದೆ ಯಾವ ಕಡೆಗೆ ಹೋಗಬೇಕಿದೆ ಎಂಬುದನ್ನು ಗೂಗಲ್‌ ವಾಯ್ಸ್‌ ಅಸಿಸ್ಟೆಂಟ್‌ನ ಮೂಲಕ ತಿಳಿಸುತ್ತಿರುತ್ತದೆ.

ಹೊಸ ಊರಿಗೆ ಹೋಗುವಾಗ, ನೀವು ಸೇರಬೇಕಾದ ಸ್ಥಳಕ್ಕೆ ಎಷ್ಟು ದೂರವಿದೆ ಎಂದು ನಮಗೆ ಮಾಹಿತಿ ರವಾನಿಸುವ ಈ ಆ್ಯಪ್‌ ಪ್ರಯಾಣದ ಮಾರ್ಗಸೂಚಕನಂತೆ ಕಾರ್ಯ ನಿರ್ವಹಿಸುತ್ತಿದೆ. ಗೂಗಲ್‌ ಮ್ಯಾಪ್‌ ಆ್ಯಪ್‌ಗೆ ಹೊಸ ಅಪ್‌ಡೇಟ್‌ ಮಾಡಲು ಗೂಗಲ್‌ ಸಂಸ್ಥೆ ಸಿದ್ಧತೆ ನಡೆಸುತ್ತಿದೆ.

ಅದೇ ಗೂಗಲ್‌ ಮ್ಯಾಪ್‌ ಆ್ಯಪ್‌ ಕರೆಗಂಟೆ. ಬಸ್‌, ರೈಲು, ಟ್ಯಾಕ್ಸಿಗಳ ಮೂಲಕ ಸಂಚರಿಸುವಾಗ, ನೀವು ತಲುಪಬೇಕಾದ ಸ್ಥಳ ಯಾವಾಗ ಬರುತ್ತದೆ ಎಂದು ಯೋಚಿಸುವ, ಮತ್ತೊಬ್ಬರಲ್ಲಿ ಕೇಳುವ ಪ್ರಮೇಯ ಇನ್ನು ಇರುವುದಿಲ್ಲ.

ನೀವು ಒಂದೊಮ್ಮೆ ನಿದ್ರೆಯಲ್ಲಿ ಜಾರಿದ್ದರೂ ಮೊಬೈಲ್‌ಗೆ ನೋಟಿಫಿಕೇಶನ್‌ ಬಂದು ಕರೆಗಂಟೆ ಬಾರಿಸುತ್ತದೆ. ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಒಮ್ಮೆ ನೀವು ತಲುಪಬೇಕಾದ ಸ್ಥಳವನ್ನು ಗೂಗಲ್‌ ಮ್ಯಾಪ್‌ ಆ್ಯಪ್‌ನಲ್ಲಿ ನಮೂದಿಸಿ. ಗಮ್ಯಸ್ಥಾನ ಹತ್ತಿರವಾದಂತೆ ಎಚ್ಚರಿಸುವಂತೆ ಆ್ಯಪ್‌ನಲ್ಲಿರುವ ಆಯ್ಕೆಯನ್ನು ಸಕ್ರಿಯಗೊಳಿಸಿದರೆ ಸಾಕು.

ಜಿಪಿಎಸ್‌ ಸಹಾಯದಿಂದ ನಿಮ್ಮ ಗಮ್ಯಸ್ಥಾನ ಹತ್ತಿರವಾಗುತ್ತಿದ್ದಂತೆ, ಮೊಬೈಲ್‌ ಸ್ಕ್ರೀನ್‌ ಲಾಕ್‌ ಆಗಿದ್ದರೂ ನೋಟಿಫಿಕೇಶನ್‌ ಬರಲು ಶುರುವಾಗುತ್ತದೆ. ಹೊಸ ಆಯ್ಕೆಯಿಂದ ಪ್ರವಾಸಪ್ರಿಯರಿಗೆ ಬಹು ಉಪಯೋಗವಾಗಲಿದ್ದು, ಸಾರ್ವಜನಿಕ ವಾಹನ ಬಳಸುವವರಿಗೆ ಹೆಚ್ಚು ಉಪಯುಕ್ತ ಆಗುವಂತೆ ನಿರ್ಮಾಣ ಮಾಡಲಾಗುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಸ್ಪರ್ಧೆಗೆ ಇಳಿಯಿತು ಮೋಜೊ

ಆಟೋ ಸಂತೆಯಲ್ಲಿ...
ಸ್ಪರ್ಧೆಗೆ ಇಳಿಯಿತು ಮೋಜೊ

15 Mar, 2018
ಹೀಗಿತ್ತು ಪರೀಕ್ಷೆಗೆ ನನ್ನ ತಯಾರಿ

ಕಾಮನಬಿಲ್ಲು
ಹೀಗಿತ್ತು ಪರೀಕ್ಷೆಗೆ ನನ್ನ ತಯಾರಿ

15 Mar, 2018
ಬೆಟ್ಟದ ಮೇಲೇರಿ; ಬಂಡೆಯಲ್ಲಿ ಜಾರಿ...

ಟ್ರೆಕ್ಕಿಂಗ್‌
ಬೆಟ್ಟದ ಮೇಲೇರಿ; ಬಂಡೆಯಲ್ಲಿ ಜಾರಿ...

15 Mar, 2018

ಬೆಳದಿಂಗಳು
ರಾಗ–ದ್ವೇಷಗಳ ಜಾಲ

ರಾಗವೆಂದರೆ ಯಾವುದಾದರೊಂದು ವಸ್ತುವಿನಲ್ಲಿ ಹೆಚ್ಚಿನ ಪ್ರೀತಿ. ದ್ವೇಷವೆಂದರೆ ಯಾವುದಾದರೊಂದು ವಸ್ತುವಿನ ವಿಷಯದಲ್ಲಿ ಹೆಚ್ಚಿನ ಅಸಹನೆ. ಈ ರಾಗದ್ವೇಷಗಳು ಜೀವವನ್ನು ಹಿಡಿದಾಗ ಜೀವವು ತನ್ನ ಒಳಗಿನ...

15 Mar, 2018
ಬೊಗಸೆಯಲ್ಲಿ ತೇಲಿಬಂದ ಮೀನು...

ಪ್ರೇಮಪತ್ರ ಸ್ಪರ್ಧೆ,
ಬೊಗಸೆಯಲ್ಲಿ ತೇಲಿಬಂದ ಮೀನು...

15 Mar, 2018