ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಬೆಂಬಲಿತರಿಗೆ ಜಯ

Last Updated 21 ಡಿಸೆಂಬರ್ 2017, 5:50 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಜಗೂರು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಎಚ್.ಎಂ.ರಾಮಚಂದ್ರ ಜಯಗಳಿಸಿದ್ದಾರೆ.

ನಗರದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ನಡೆದ ಮತ ಎಣಿಕೆ ಕಾರ್ಯದಲ್ಲಿ ಒಟ್ಟು 447 ಮತಗಳ ಪೈಕಿ 4 ಮತಗಳು ತಿರಸ್ಕೃತಗೊಂಡಿದ್ದವು. ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್.ಎಂ.ರಾಮಚಂದ್ರ 258 ಮತಗಳು ಪಡೆದು ವಿಜೇತರಾಗಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ 185 ಮತಗಳು ಪಡೆಯುವುದರೊಂದಿಗೆ 73 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ರಾಮಚಂದ್ರರಿಗೆ ಚುನಾವಣಾಧಿಕಾರಿ ಹಾಗೂ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶ್ರೀನಾಥ್‌ಗೌಡ ಪ್ರಮಾಣ ಪತ್ರ ವಿತರಿಸಿದರು. ಸಹಾಯಕ ಚುನಾವಣಾಧಿಕಾರಿ ದಿನೇಶ್, ಮತಗಟ್ಟೆ ಅಧಿಕಾರಿ ಎಲ್‌.ವಿ.ವೆಂಕಟರೆಡ್ಡಿ, ಚುನಾವಣೆ ಶಾಖೆಯ ಸಿದ್ದೇಶ್ವರ, ಮುಖಂಡರಾದ ಹುಜಗೂರು ರಾಮಣ್ಣ ಇದ್ದರು.

ಎಚ್‌.ಜಿ.ಅನಿಲ್‌ಕುಮಾರ್‌ ಜಯ: ತಾಲ್ಲೂಕಿನ ತಳಗವಾರ ಗ್ರಾಮ ಪಂಚಾಯಿತಿಯ ಜೋಡಿಹೊಸಹಳ್ಳಿ ಕ್ಷೇತ್ರದಲ್ಲಿ ಭಾನುವಾರ ನಡೆದಿದ್ದ ಉಪಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಎಚ್‌.ಜಿ.ಅನಿಲ್‌ಕುಮಾರ್‌ ಜಯಗಳಿಸಿದ್ದಾರೆ.

ಎಚ್‌.ಜಿ.ಅನಿಲ್‌ಕುಮಾರ್‌ ಮೃತಪಟ್ಟ ಸದಸ್ಯ ಗೋಪಾಲಕೃಷ್ಣಪ್ಪ ಅವರ ಪುತ್ರ. ಅವರಿಗೆ 496 ಮತಗಳು ಹಾಗೂ ಸಮೀಪ ಪ್ರತಿಸ್ಪರ್ಧಿ
ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಎಚ್‌.ಎಂ.ನಾರಾಯಣಸ್ವಾಮಿಗೆ 375, ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಚ್‌.ಎಲ್‌.ಆನಂದ್‌ಗೆ 30 ಮತಗಳು ದೊರೆತಿವೆ. ಬುಧವಾರ ತಾಲ್ಲೂಕು ಕಚೇರಿಯಲ್ಲಿ ಮತಗಳ ಎಣಿಕೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT