ನ್ಯಾಮತಿ

ಗ್ರಾಮ ಪಂಚಾಯ್ತಿ ಅಧ್ಯಕ್ಷೆಯನ್ನು ಹುಡುಕಿಕೊಂಡು ಹೋದ ಸದಸ್ಯರು

ಸುನೀತಾ ಒಂದು ವರ್ಷದಿಂದ ಕಚೇರಿಗೆ ಸರಿಯಾಗಿ ಬರುತ್ತಿಲ್ಲ. ಮೂರು ತಿಂಗಳಿನಿಂದ ಸಾಮಾನ್ಯ ಸಭೆಯನ್ನೂ ಕರೆಯದೆ, ಗ್ರಾಮಾಡಳಿತ ಕುಂಠಿತವಾಗಿದೆ. ಸಾರ್ವಜನಿಕರ ದಾಖಲೆ, ಸಿಬ್ಬಂದಿಯ ವೇತನ ಹಾಗೂ ಮೂಲ ಸೌಲಭ್ಯಗಳಿಗಾಗಿ ಖರೀದಿ ಮಾಡಿದ ವಸ್ತುಗಳ ಹಣ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ.

ನ್ಯಾಮತಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುನೀತಾ ಅವರನ್ನು ಹುಡುಕಿಕೊಂಡು ಹೋಗುವ ಮೂಲಕ ಸದಸ್ಯರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು

ನ್ಯಾಮತಿ: ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಎನ್. ಸುನಿತಾ ಹನುಮಂತರಾವ್ ಗ್ರಾಮ ಪಂಚಾಯ್ತಿ ಕಚೇರಿಗೆ ಬಾರದೆ ಇರುವುದನ್ನು ಖಂಡಿಸಿ ಸದಸ್ಯರು ಅವರ ಮನೆಗೆ ಹುಡುಕಿಕೊಂಡು ಹೋಗಿ, ಪ್ರತಿಭಟನೆ ನಡೆಸಿದರು.

ಸುನೀತಾ ಒಂದು ವರ್ಷದಿಂದ ಕಚೇರಿಗೆ ಸರಿಯಾಗಿ ಬರುತ್ತಿಲ್ಲ. ಮೂರು ತಿಂಗಳಿನಿಂದ ಸಾಮಾನ್ಯ ಸಭೆಯನ್ನೂ ಕರೆಯದೆ, ಗ್ರಾಮಾಡಳಿತ ಕುಂಠಿತವಾಗಿದೆ. ಸಾರ್ವಜನಿಕರ ದಾಖಲೆ, ಸಿಬ್ಬಂದಿಯ ವೇತನ ಹಾಗೂ ಮೂಲ ಸೌಲಭ್ಯಗಳಿಗಾಗಿ ಖರೀದಿ ಮಾಡಿದ ವಸ್ತುಗಳ ಹಣ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಹಣ ಪಾವತಿಸಲು ಅಧ್ಯಕ್ಷರ ಸಹಿ ಅಗತ್ಯ. ಆದರೆ, ಅಧ್ಯಕ್ಷರ ಗೈರುಹಾಜರಿಯಿಂದ ಬಹಳ ತೊಂದರೆಯಾಗುತ್ತಿದೆ ಎನ್ನುವುದು ಸದಸ್ಯರ ದೂರು.

‘ಅಧ್ಯಕ್ಷರು ಬಂದು ಆಡಳಿತ ನಡೆಸಲಿ. ಇಲ್ಲವಾದರೆ ರಾಜೀನಾಮೆ ನೀಡುವ ಮೂಲಕ ಗ್ರಾಮಾಡಳಿತ ಸುಧಾರಣೆಗೆ ಸಹಕರಿಸುವಂತೆ ಮನವಿ ಮಾಡಿ ಎಂದು ಕರೆತರಲು ಮನೆಗೆ ಹೋಗಿದ್ದೆವು. ಆದರೆ, ಅಧ್ಯಕ್ಷರು ಮನೆಯಲ್ಲಿ ಇರಲಿಲ್ಲ. ದೂರವಾಣಿಗೂ ಸಿಗಲಿಲ್ಲ’ ಎಂದು ಸದಸ್ಯರಾದ
ಪಿ.ಚಂದ್ರಶೇಖರ, ಎ.ಪ್ರಸಾದ, ಗಿರೀಶ, ಕೆ.ಆರ್. ಗಂಗಾಧರ, ಎ.ಕೆ. ಸುರೇಶ, ಎನ್‌. ಸುನೀತಾ , ಗೀತಾ, ವರಲಕ್ಷ್ಮಿ, ರೂಪಾ, ಯಶೋದಮ್ಮ, ಬಿ. ಜಯರಾಂ, ರೂಪಾ ಆರೋಪಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ

ದಾವಣಗೆರೆ
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ

19 Mar, 2018
‘ಕುಡಿಯುವ ನೀರಿಗೆ ಸರ್ಕಾರದ ಬಳಿ ಹಣವಿಲ್ಲವೇ’

ದಾವಣಗೆರೆ
‘ಕುಡಿಯುವ ನೀರಿಗೆ ಸರ್ಕಾರದ ಬಳಿ ಹಣವಿಲ್ಲವೇ’

17 Mar, 2018
ಹಣ ಚಲಾವಣೆ ಬಗ್ಗೆ ವಿಶೇಷ ನಿಗಾ ಇಡಿ

ದಾವಣಗೆರೆ
ಹಣ ಚಲಾವಣೆ ಬಗ್ಗೆ ವಿಶೇಷ ನಿಗಾ ಇಡಿ

17 Mar, 2018

ಜಗಳೂರು
ಸರ್ಕಾರದಿಂದ ಬರ ನಿವಾರಣೆಗೆ ಕ್ರಮ

ಬರಪೀಡಿತ ತಾಲ್ಲೂಕಿನ ಜೀವನಾಡಿಯಾಗಿರುವ ಕೆರೆಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕ್ರಮ ಅತ್ಯಂತ ಮಹತ್ವದ್ದಾಗಿದೆ' ಎಂದು ಶಾಸಕ ಎಚ್‌.ಪಿ. ರಾಜೇಶ್ ಹೇಳಿದರು. ...

17 Mar, 2018

ಹರಪನಹಳ್ಳಿ
ರಾಜ್ಯದಲ್ಲೂ ತ್ರಿಪುರಾ ಫಲಿತಾಂಶ ಬರಲಿದೆ: ವಿನೋದ್‌ ಗೋಯಕರ್‌

‘ತ್ರಿಪುರಾ ವಿಧಾನಸಭಾ ಫಲಿತಾಂಶವೇ ರಾಜ್ಯದ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು, ಇಲ್ಲಿಯೂ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ’ ಎಂದು ಬಿಜೆಪಿ ರಾಷ್ಟ್ರೀಯ...

17 Mar, 2018