ಹತ್ತು ದಿನ ನಡೆದ ದನಗಳ ಜಾತ್ರೋತ್ಸವಕ್ಕೆ ತೆರೆ; ಉತ್ಸವಕ್ಕೆ ನಗರಸಭೆ ಮೈದಾನ ಮೀಸಲು

ಐವರು ರೈತರಿಗೆ 5 ಗ್ರಾಂ ಚಿನ್ನ

14ನೇ ಹಣಕಾಸು ಯೋಜನೆಯಡಿ ಮೈದಾನದ ಸುತ್ತ ₹ 1 ಕೋಟಿ ಅನುದಾನದಲ್ಲಿ ಕಾಂಪೌಂಡ್ ನಿರ್ಮಿಸಿ, ಪ್ರವೇಶ ದ್ವಾರಕ್ಕೆ ದನಗಳ ಜಾತ್ರೆ ನಡೆಯುವ ಸ್ಥಳ ಎಂದು ನಾಮಕರಣ ಮಾಡಲಾಗುವುದು. ಜಾತ್ರೆ ನಡೆಯುವುದರಿಂದ ಮಕ್ಕಳಿಗೂ ದನಗಳ ಬಗ್ಗೆ ಮಾಹಿತಿ ಸಿಗುತ್ತದೆ.

ಹಾಸನ ಸಂತೆಪೇಟೆ ಮೈದಾನದಲ್ಲಿ ನಡೆದ ದನಗಳ ಜಾತ್ರೆಯಲ್ಲಿ ಉತ್ತಮ ಗುಣಮಟ್ಟದ ದನಗಳನ್ನು ಸಾಕಿದ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು

ಹಾಸನ: ಸಂತೆಪೇಟೆ ನಗರಸಭೆ ಮೈದಾನವನ್ನು ದನಗಳ ಜಾತ್ರೆ ನಡೆಸಲು ಶಾಶ್ವತವಾಗಿ ಮೀಸಲಿಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಎಚ್‌.ಎಸ್‌. ಅನಿಲ್‌ ಕುಮಾರ್‌ ಹೇಳಿದರು.

ಸಂತೆಪೇಟೆ ನಗರಸಭೆ ಮೈದಾನದಲ್ಲಿ ಆಯೋಜಿಸಿದ್ದ ದನಗಳ ಜಾತ್ರೆಯಲ್ಲಿ ಉತ್ತಮ ಎತ್ತು ಸಾಕಿದ ರೈತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮುಂದಿನ ನಗರಸಭೆ ಸಾಮಾನ್ಯ ಸಭೆಯಲ್ಲಿ ಜಾಗ ಮೀಸಲಿಡುವ ಬಗ್ಗೆ ಸದಸ್ಯರ ಒಪ್ಪಿಗೆ ಪಡೆಯಲಾಗುವುದು. 14ನೇ ಹಣಕಾಸು ಯೋಜನೆಯಡಿ ಮೈದಾನದ ಸುತ್ತ ₹ 1 ಕೋಟಿ ಅನುದಾನದಲ್ಲಿ ಕಾಂಪೌಂಡ್ ನಿರ್ಮಿಸಿ, ಪ್ರವೇಶ ದ್ವಾರಕ್ಕೆ ದನಗಳ ಜಾತ್ರೆ ನಡೆಯುವ ಸ್ಥಳ ಎಂದು ನಾಮಕರಣ ಮಾಡಲಾಗುವುದು. ಜಾತ್ರೆ ನಡೆಯುವುದರಿಂದ ಮಕ್ಕಳಿಗೂ ದನಗಳ ಬಗ್ಗೆ ಮಾಹಿತಿ ಸಿಗುತ್ತದೆ. ಅನೇಕ ಮಕ್ಕಳಿಗೆ ಹಾಲು ಎಲ್ಲಿಂದ ಬರುತ್ತದೆ ಎಂಬ ಮಾಹಿತಿಯೇ ಇಲ್ಲ. ಕೆಎಂಎಫ್‌ ಹಾಲು ನೀಡುತ್ತದೆ ಎಂದು ಉತ್ತರಿಸುತ್ತಾರೆ ಎಂದರು.

ರೈತರ ಸಭೆ ಕರೆದು, ಪ್ರತಿ ಮಂಗಳವಾರ ದನಗಳ ಸಂತೆ ನಡೆಸಲು ಯಾವ ಸೌಲಭ್ಯ ನೀಡಬೇಕು ಎಂಬ ಸಲಹೆ ಪಡೆದು, ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಎಂದು ಭರವಸೆ ನೀಡಿದರು.

ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ಕಳೆದ ವರ್ಷಕ್ಕಿಂತ ಈ ಬಾರಿ ಜಾತ್ರೆ ಯಶಸ್ವಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೋರಿ ಮತ್ತು ಎತ್ತುಗಳ ಜತೆ ಉತ್ತಮ ಹಾಲು ನೀಡುವ ಹಸುಗಳ ಜಾತ್ರೆಯನ್ನು ಮಾಡುವಂತಾಗಬೇಕು ಎಂದು ಸಲಹೆ ನೀಡಿದರು.

ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮಾತನಾಡಿ, ಹಾಸನದ ಹಳ್ಳಿಕಾರ್ ತಳಿಯ ದನಗಳಿಗೆ ರಾಜ್ಯದಲ್ಲಿ ಉತ್ತಮ ಬೇಡಿಕೆ ಇದೆ. ಇದು ದಕ್ಷಿಣ ಕರ್ನಾಟಕ ಭಾಗದಲ್ಲಿ ಮಾತ್ರ ಇದ್ದು, ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ನಗರಸಭೆ ಸಹಾಯಕ ಎಂಜಿನಿಯರ್ ಪುರುಷೋತ್ತಮ್, ಸದಸ್ಯರಾದ ಗೋಪಾಲ್, ಪ್ರಸನ್ನಕುಮಾರ್, ಮಹೇಶ್, ಶ್ರೇಯಸ್, ಪ್ರಕಾಶ್ ಇದ್ದರು.

ಅಧಿಕಾರಿಗಳಿಗೆ ಜೈಲಿಗೆ ಹೋಗುವ ಭಯ
‘ಗೊರುರು ರಸ್ತೆ ಸಮೀಪ ರಾಶಿಯಾಗಿ ಬಿದ್ದಿದ್ದ ಕಸವನ್ನು ವಿಲೇವಾರಿ ಮಾಡಿ, ದನಗಳ ಜಾತ್ರೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ನಗರಸಭೆ ಸದಸ್ಯರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದು, ಹಲವು ಅಧಿಕಾರಿಗಳು ಜೈಲಿಗೆ ಹೋಗುವ ಭಯದಲ್ಲಿದ್ದಾರೆ. ಒಳ್ಳೆಯ ಕೆಲಸಗಳಿಗೆ ಆಡ್ಡಿಪಡಿ ಸುವುದೇ ಕೆಲವರ ಕೆಲಸ’ ಎಂದು ಎಚ್‌.ಎಸ್‌. ಪ್ರಕಾಶ್ ಮತ್ತು ಎಚ್.ಎಸ್‌. ಅನಿಲ್‌ ಕುಮಾರ್ ಅವರು ಪರೋಕ್ಷವಾಗಿ ಸದಸ್ಯ ಸುರೇಶ್‌ ಕುಮಾರ್‌ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಐವರಿಗೆ ಮೊದಲ ಬಹುಮಾನ
ಉತ್ತಮ ಗುಣಮಟ್ಟದ ದನಗಳನ್ನು (2,4,6 ಹಲ್ಲುಗಳ ಹೋರಿಗಳ ವಿಭಾಗದಲ್ಲಿ) ಸಾಕಿದ ಐವರಿಗೆ ಪ್ರಥಮ ಬಹುಮಾನವಾಗಿ ತಲಾ 5 ಗ್ರಾಂ ಚಿನ್ನವನ್ನು ಬಹುಮಾನವಾಗಿ ನೀಡಲಾಯಿತು.

ತಿರುಮನಹಳ್ಳಿಯ ಚಿಕ್ಕೇಗೌಡ, ದಾಸರಕೊಪ್ಪಲಿನ ಶ್ರೀಧರ್, ಅರೆಹಳ್ಳಿ ಪ್ರಭು, ದಾಸರಕೊಪ್ಪಲು ದಿನೇಶ್, ಆಲದಹಳ್ಳಿಯ ಮಂಜಣ್ಣ ಹಾಗೂ ಅನಿಲ್‌ ಅವರಿಗೆ ಬಹುಮಾನ ನೀಡಲಾಯಿತು.

ದ್ವಿತೀಯ ಬಹುಮಾನವಾಗಿ ಬಿ.ಕಾಟಿಹಳ್ಳಿಯ ವಿಶ್ವಾಸ್, ತಿರುಮನಹಳ್ಳಿ ಚಿಕ್ಕೇಗೌಡ, ಆಲದಹಳ್ಳಿ ಮಂಜಣ್ಣ, ಸುಂದರ್ ರಾಜು ಗೆಂಡೇಗೌಡನಕೊಪ್ಪಲು, ಶಿವನಂಜೇಗೌಡ ಅವರಿಗೆ ನೀಡಲಾಯಿತು.

ಪಶು ವೈದ್ಯಕೀಯ ಕಾಲೇಜಿನ ಇಬ್ಬರು ಪ್ರಾಧ್ಯಾಪಕರು ಹಾಗೂ ಬೇರೆ ಬೇರೆ ತಾಲ್ಲೂಕುಗಳ ಪಶು ವೈದ್ಯರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಆನೆ ಉಪಟಳ ತಡೆಗಟ್ಟದಿದ್ದರೆ ಕ್ರಿಮಿನಲ್‌ ಪ್ರಕರಣ

ಹಾಸನ
ಆನೆ ಉಪಟಳ ತಡೆಗಟ್ಟದಿದ್ದರೆ ಕ್ರಿಮಿನಲ್‌ ಪ್ರಕರಣ

19 Jan, 2018

ಶ್ರವಣಬೆಳಗೊಳ
ಕಲ್ಯಾಣಿಯಲ್ಲಿ ಮೊಳಗಿದ ಗೊಮ್ಮಟ ಸ್ತುತಿ

ಗೊಮ್ಮಟನ ಮಹಾಮಸ್ತಕಾಭಿಷೇಕ ಅಂಗವಾಗಿ ಸುಮಾರು 3 ಸಾವಿರ ಜೈನ ಬಾಂಧವರು ಗುರುವಾರ ಬಾಹುಬಲಿ ಗೀತೆಯನ್ನು ಸಾಮೂಹಿಕವಾಗಿ ಹಾಡಿದರು.

19 Jan, 2018

ಹಿರೀಸಾವೆ
ಕ್ರೀಡಾಕೂಟಕ್ಕೆ ಸ್ಪರ್ಧಿಗಳ ಕೊರತೆ

ಹಲವು ವರ್ಷಗಳ ಹಿಂದೆ ನಡೆಸುತ್ತಿದ್ದ ತೆಂಗಿನ ಕಾಯಿ ಸುಲಿಯುವುದು, ಕಲ್ಲು ಗುಂಡು ಎತ್ತುವುದು, 50 ಕೆ.ಜಿ ತೂಕದ ಮೂಟೆ ಹೊತ್ತು 75 ಮೀಟರ್ ಓಡುವುದು,...

19 Jan, 2018
ರಂಗನಾಥಸ್ವಾಮಿ ರಥೋತ್ಸವ

ಅರಸೀಕೆರೆ
ರಂಗನಾಥಸ್ವಾಮಿ ರಥೋತ್ಸವ

18 Jan, 2018

ಹಾಸನ
ಅನುಮತಿ ಪ್ರಕ್ರಿಯೆ ಚುರುಕುಗೊಳಿಸಿ: ಡಿ.ಸಿ

ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ‘ಜಿಲ್ಲೆಯ ಮಲೆನಾಡು ಪ್ರದೇಶಕ್ಕೆ ಅರಣ್ಯ ಇಲಾಖೆಯ ಪ್ರತ್ಯೇಕ ವನ್ಯಜೀವಿ ಉಪ ವಿಭಾಗ ಪ್ರಾರಂಭವಾಗಬೇಕು. ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಆನೆ...

18 Jan, 2018