ಭದ್ರಾವತಿ

‘ಉತ್ತಮ ಕಬ್ಬಿನಿಂದ ಗುಣಮಟ್ಟದ ಬೆಲ್ಲ’

12 ತಿಂಗಳು ಪೂರೈಸಿದ, ಉತ್ತಮ ತಳಿ, ಇಳುವರಿಯ ಕಬ್ಬನ್ನು ಉಪಯೋಗ ಮಾಡಿಕೊಂಡು ಆಲೆಮನೆಯಲ್ಲಿ ಬೆಲ್ಲ ತಯಾರಿಸಿದರೆ ಚಿನ್ನದ ಬಣ್ಣದ ಬೆಲ್ಲ ತಯಾರು ಮಾಡಲು ಸಾಧ್ಯ ಎಂದರು.

ಭದ್ರಾವತಿ: ‘ಉತ್ತಮ ಗುಣಮಟ್ಟದ ಕಬ್ಬನ್ನು ಉಪಯೋಗಿಸಿದಾಗ ಮಾತ್ರ ಅತ್ಯುತ್ತಮ ಬೆಲ್ಲ ತಯಾರಿಸಲು ಸಾಧ್ಯ’ ಎಂದು ಮಂಡ್ಯ ವಿಸಿ ಫಾರ್ಮ್ ತಜ್ಞ ಡಾ.ಸ್ವಾಮಿಗೌಡ ಹೇಳಿದರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಆಹಾರ ಸುರಕ್ಷತಾ ಗುಣಮಟ್ಟ ಇಲಾಖೆ ಸಹಯೋಗದಲ್ಲಿ ನಡೆದ ಬೆಲ್ಲ ತಯಾರಿಕಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

12 ತಿಂಗಳು ಪೂರೈಸಿದ, ಉತ್ತಮ ತಳಿ, ಇಳುವರಿಯ ಕಬ್ಬನ್ನು ಉಪಯೋಗ ಮಾಡಿಕೊಂಡು ಆಲೆಮನೆಯಲ್ಲಿ ಬೆಲ್ಲ ತಯಾರಿಸಿದರೆ ಚಿನ್ನದ ಬಣ್ಣದ ಬೆಲ್ಲ ತಯಾರು ಮಾಡಲು ಸಾಧ್ಯ ಎಂದರು.

ಬೆಲ್ಲ ಬೆಳ್ಳಗಿದ್ದರೆ ಮಾತ್ರ ಉತ್ತಮ ಎಂಬ ಮಾತುಗಳು ಕೇವಲ ಮಾರುಕಟ್ಟೆ ವಲಯದಲ್ಲಿ ಪ್ರಚಲಿತದಲ್ಲಿವೆ. ಆದರೆ, ಚಿನ್ನದ ಬಣ್ಣದ ಬೆಲ್ಲದಲ್ಲಿ ಇರುವ ಗುಣಮಟ್ಟ ದೈನಂದಿನ ಉಪಯೋಗಕ್ಕೆ ಪೂರಕ ಎಂದರು.

ಬೆಲ್ಲ ಬಿಳಿ ಬಣ್ಣಕ್ಕೆ ಬರಲು ಅನೇಕ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುವುದರಿಂದ ಅದು ಹಾನಿಕಾರಕ. ಜತೆಗೆ ಆಹಾರ ಸುರಕ್ಷತಾ ಗುಣಮಟ್ಟ ಕಾಯ್ದೆಗೂ ವಿರುದ್ಧವಾಗಿದೆ ಎಂದು ನುಡಿದರು.

ಅನೇಕ ರಾಸಾಯನಿಕ ವಸ್ತುಗಳ ಮೇಲೆ ಬೆಲ್ಲದ ಚಿತ್ರ ಹಾಕಿರುತ್ತಾರೆ ಎಂದಮಾತ್ರಕ್ಕೆ ಅವುಗಳ ಉಪಯೋಗ ತಯಾರಿಕೆಗೆ ಅಗತ್ಯ ಎಂದು ಭಾವಿಸುವುದು ಸರಿಯಲ್ಲ, ಅದರಿಂದ ಉಂಟಾಗುವ ಹಾನಿ ಬಗೆಗೂ ತಿಳಿದಿರಬೇಕು ಎಂದು ಕಿವಿಮಾತು ಹೇಳಿದರು.

ಕಬ್ಬು ಖರೀದಿ, ಅದರ ಗುಣಮಟ್ಟ, ಅದರಲ್ಲಿನ ಜ್ಯೂಸ್ ಪ್ರಮಾಣ ಎಲ್ಲವೂ ಬೆಲ್ಲ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದನ್ನು ಸರಿಯಾಗಿ ನಿಭಾಯಿಸಿದಲ್ಲಿ ಚಿನ್ನ ಬಣ್ಣದ ಬೆಲ್ಲ ಸಿದ್ಧವಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ ಎಂದರು.

ಮಂಡ್ಯದ ವಿಸಿ ಫಾರ್ಮ್ ಸಹ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿ ಯಶಸ್ವಿಯಾಗಿದೆ. ಇದಕ್ಕೆ ರೈತರ, ತಯಾರಕರ ಸಹಕಾರ ಅಗತ್ಯ. ಆಗ ಸಹಜವಾಗಿ ಗ್ರಾಹಕರ ಬೆಂಬಲ ಸಿಗಲಿದೆ ಎಂದು ನುಡಿದರು.

ಸಭೆಯಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಗುಣಮಟ್ಟ ಇಲಾಖೆ ಅಧಿಕಾರಿ ಡಾ. ಶಂಕರಪ್ಪ, ತಾಲ್ಲೂಕು ಅಧಿಕಾರಿ ಡಾ. ಗುಡದಪ್ಪ ಕಸಬಿ, ಬೆಲ್ಲ ತಯಾರಿಕಾ ತಜ್ಞ ಡಾ. ಕೇಶವಯ್ಯ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಭದ್ರಾವತಿ: ‘ರಜಾ–ಮಜಾ’ ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ

ಭದ್ರಾವತಿ
ಭದ್ರಾವತಿ: ‘ರಜಾ–ಮಜಾ’ ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ

21 Apr, 2018

ಸಾಗರ
ಪ್ರಧಾನಿ ಸಮ್ಮುಖದಲ್ಲೇ ನಡೆದಿದೆ ಅಭ್ಯರ್ಥಿಗಳ ಆಯ್ಕೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸಮ್ಮುಖದಲ್ಲೆ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ ಎಂದು ಸಾಗರ...

21 Apr, 2018

ಸೊರಬ
ಹಣ, ಹೆಂಡ, ತೋಳ್ಬಲ ಮೆಟ್ಟಿ ನಿಲ್ಲಿ

ಈ ಬಾರಿಯ ಚುನಾವಣೆಯನ್ನು ಸೊರಬ ತಾಲ್ಲೂಕಿನ ಮತದಾರರು ಪ್ರತಿಷ್ಠೆಯ ಚುನಾವಣೆಯನ್ನಾಗಿ ಪರಿಗಣಿಸದೇ ಹಣ, ಹೆಂಡ ಹಾಗೂ ತೋಳ್ಬಲವನ್ನು ಮೆಟ್ಟಿ ನಿಲ್ಲಬೇಕು ಎಂದು ಎಂದು ಬಿಜೆಪಿ...

21 Apr, 2018

ಸೊರಬ
ಕುಟುಂಬ ರಾಜಕಾರಣ ಅಂತ್ಯಗೊಳಿಸಿ

ಸೊರಬ ತಾಲ್ಲೂಕಿನ ಅಭಿವೃದ್ಧಿಗೆ 50 ವರ್ಷಗಳಿಂದ ಮಣ್ಣೆರಚಿದ ಕುಟುಂಬ ರಾಜಕಾರಣವನ್ನು ಅಂತ್ಯಗೊಳಿಸಲು ಕಾಂಗ್ರೆಸ್‌ಗೆ  ಮತ ನೀಡಬೇಕು ಎಂದು ಇಲ್ಲಿನ ವಿಧಾನ ಸಭಾ ಚುನಾವಣೆಯ ಕಾಂಗ್ರೆಸ್...

21 Apr, 2018

ಶಿವಮೊಗ್ಗ
ಈಶ್ವರಪ್ಪ ವಿರುದ್ಧ ಹರಿಹಾಯ್ದ ಪ್ರಸನ್ನಕುಮಾರ್

ಎಲ್ಲ ಜಾತಿ, ಧರ್ಮದ ಜನರನ್ನೂ ಗೌರವಿ ಸುವುದು ಕಾಂಗ್ರೆಸ್ ಸಿದ್ಧಾಂತ. ಆದರೆ, ಬಿಜೆಪಿಗೆ ಅಭಿವೃದ್ಧಿಯ ಚಿಂತೆಯಿಲ್ಲ. ಕೇವಲ ಹಿಂಧೂ ಧರ್ಮದ ಹೆ ಸರಿನಲ್ಲಿ ಮತ...

21 Apr, 2018