ಕಾಂಗ್ರೆಸ್‌ನಿಂದ ಜಾತಿ, ಧರ್ಮ ಒಡೆಯುವ ಪ್ರಯತ್ನ: ಈಶ್ವರಪ್ಪ ಆರೋಪ

ಅಭಿವೃದ್ಧಿ ವಿಚಾರದಲ್ಲಿ ಚುನಾವಣೆ ಎದುರಿಸಲಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮ ಹಾಗೂ ಜಾತಿ ಒಡೆದು ಆಳಿದರೆ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿ ಇದ್ದರೆ ಅದರಿಂದ ಅವರು ಹೊರಬರಬೇಕು. ಧರ್ಮ, ಜಾತಿ ನಡುವೆ ಬೆಂಕಿ ಹಚ್ಚುವುದನ್ನು ನಿಲ್ಲಿಸಿ, ಸರ್ಕಾರದ ಸಾಧನೆ ಹಾಗೂ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

ಬಿಜೆ‍ಪಿ ಸೇರ್ಪಡೆಗೊಂಡ ಜೆಡಿಎಸ್‌ ಮುಖಂಡರು ಮತ್ತು ವಿವಿಧ ಪಕ್ಷಗಳ ಕಾರ್ಯಕರ್ತರನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಬುಧವಾರ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.

ಶಿವಮೊಗ್ಗ: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜಾತಿ ಹಾಗೂ ಧರ್ಮಗಳನ್ನು ಒಡೆಯುವ ಪ್ರಯತ್ನವನ್ನು ನಡೆಸಿತ್ತು. ಆದರೆ, ಮತದಾರರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಇದೇ ಪರಿಸ್ಥಿತಿ ಕಾಂಗ್ರೆಸ್‌ಗೆ ಕರ್ನಾಟಕದಲ್ಲೂ ಎದುರಾಗುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮ ಹಾಗೂ ಜಾತಿ ಒಡೆದು ಆಳಿದರೆ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿ ಇದ್ದರೆ ಅದರಿಂದ ಅವರು ಹೊರಬರಬೇಕು. ಧರ್ಮ, ಜಾತಿ ನಡುವೆ ಬೆಂಕಿ ಹಚ್ಚುವುದನ್ನು ನಿಲ್ಲಿಸಿ, ಸರ್ಕಾರದ ಸಾಧನೆ ಹಾಗೂ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

ಕೇವಲ ವೋಟು ಪಡೆಯುವ ಉದ್ದೇಶದಿಂದ ಜಾತಿ ರಾಜಕಾರಣ ಮಾಡಿದರೆ ಸಫಲವಾಗುವುದಿಲ್ಲ. ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿದರೆ ಮತದಾರರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ನೀಡಿದ್ದ 167 ಭರವಸೆಗಳಲ್ಲಿ 150ಕ್ಕೂ ಹೆಚ್ಚು ಭರವಸೆ ಈಡೇರಿಸಿರುವುದಾಗಿ ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಈಡೇರಿಸಿರುವ ಭರವಸೆ ಕುರಿತು ಪಟ್ಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಒಂದು ವರ್ಷದಿಂದ ಹಣ ಬಿಡುಗಡೆಯಾಗಿಲ್ಲ. ದಲಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವುದಾಗಿ ತಿಳಿಸಿದ್ದರು. ಅನೇಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಿಲ್ಲ. ಈ ಮೂಲಕ ಹಿಂದ ವರ್ಗಕ್ಕೆ ಸಿದ್ದರಾಮಯ್ಯ ಅವರು ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.

ಮಹದಾಯಿ ನದಿ ನೀರು ಹಂಚಿಕೆ ಬಿಕ್ಕಟ್ಟು ಅನೇಕ ವರ್ಷಗಳಿಂದ ಇದೆ. ಇದನ್ನು ಬಗೆಹರಿಸುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿರಲಿಲ್ಲ. ಬಿಜೆಪಿ ಮಹದಾಯಿ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. ಸದ್ಯದಲ್ಲೇ ಪರಿಹಾರ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರುದ್ರೇಗೌಡ, ವಿಧಾನಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್, ಎಸ್.ಎನ್. ಚನ್ನಬಸಪ್ಪ, ಅನಿತಾ ರವಿಶಂಕರ್, ಎನ್.ಜೆ. ರಾಜಶೇಖರ್, ಎಂ.ಶಂಕರ್, ಮಧುಸೂದನ್, ನಾಗರಾಜ್, ಜ್ಞಾನೇಶ್ವರ್, ರತ್ನಾಕರ ಶೆಣೈ, ನಾಗರಾಜ್ ಉಪಸ್ಥಿತರಿದ್ದರು.

ಬಿಜೆಪಿಗೆ ಸೇರ್ಪಡೆ
ಜೆಡಿಎಸ್‌ ಜಿಲ್ಲಾ ಘಟಕದ ಮುಖಂಡರು ಮತ್ತು ವಿವಿಧ ಪಕ್ಷಗಳ ಕಾರ್ಯಕರ್ತರು ಬುಧವಾರ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಪಕ್ಷದ ಧ್ವಜವನ್ನು ನೀಡಿ ಅವರನ್ನು ಮುಖಂಡರು ಸ್ವಾಗತಿಸಿದರು. ಜೆಡಿಎಸ್‌ ಜಿಲ್ಲಾ  ಘಟಕದ ಉಪಾಧ್ಯಕ್ಷರಾಗಿದ್ದ ಎಚ್.ವಿ.ಮಹೇಶ್ವರಪ್ಪ ಮತ್ತು ಅವರ ತಂಡದವರು, ಜೆಡಿಎಸ್‌ನ ಎಚ್.ಪಂಚಾಕ್ಷರಿ ಮತ್ತು ವಿವಿಧ ಪಕ್ಷಗಳ ಪ್ರಮುಖರಾದ ಎಚ್.ವಿ.ಸುರೇಶ್ ನಾಡಿಗ್, ಪ್ರಭುಲಿಂಗಪ್ಪ, ಚನ್ನಯ್ಯ, ರುದ್ರಮುನಿ, ವಾರದ್, ಈರಣ್ಣ, ಪಾಲಾಕ್ಷಪ್ಪ, ಉಮೇಶ್, ಚೆಲ್ವರಾಜ್, ಚೆನ್ನಶ್, ಶಿವಕುಮಾರ್, ಸೋಮಶೇಖರ್, ರಾಜಣ್ಣ ಅವರೂ ಬಿಜೆಪಿ ಸೇರಿದರು.

Comments
ಈ ವಿಭಾಗದಿಂದ ಇನ್ನಷ್ಟು
ಭದ್ರಾವತಿ: ವ್ಯಕ್ತಿ ಪ್ರತಿಷ್ಠೆಗೆ ಹಲವು ಸವಾಲು

ಶಿವಮೊಗ್ಗ
ಭದ್ರಾವತಿ: ವ್ಯಕ್ತಿ ಪ್ರತಿಷ್ಠೆಗೆ ಹಲವು ಸವಾಲು

20 Jan, 2018
ಸ್ವಚ್ಚ ಶಾಲೆ, ಸ್ವಚ್ಚ ಗ್ರಾಮ, ಹಸಿರು ಶಾಲೆ ಪುರಸ್ಕಾರ

ಹೊಸನಗರ
ಸ್ವಚ್ಚ ಶಾಲೆ, ಸ್ವಚ್ಚ ಗ್ರಾಮ, ಹಸಿರು ಶಾಲೆ ಪುರಸ್ಕಾರ

20 Jan, 2018

ಶಿಕಾರಿಪುರ
ವಿದೇಶಿ ಬಾನಾಡಿಗಳ ಕಲರವ

ಬಿಸಿಲು ಸಂದರ್ಭದಲ್ಲಿ ಕೆರೆಯಲ್ಲಿ ವಿಶ್ರಾಂತಿ ಪಡೆಯುವ ಹಕ್ಕಿಗಳು ಸಂಜೆ ತಮ್ಮ ಆಹಾರ ಹುಡುಕಿಕೊಂಡು ತೆರಳುತ್ತವೆ.

20 Jan, 2018
ನೂತನ ಪಿಂಚಣಿ ಯೋಜನೆ ರದ್ದುಪಡಿಸಲು ಆಗ್ರಹ

ಶಿವಮೊಗ್ಗ
ನೂತನ ಪಿಂಚಣಿ ಯೋಜನೆ ರದ್ದುಪಡಿಸಲು ಆಗ್ರಹ

19 Jan, 2018

ಕಾರ್ಗಲ್
ಮರಳು ಸಾಗಣೆ: ಚಾಲಕನ ಬಂಧನ ವಿರೋಧಿಸಿ ಪ್ರತಿಭಟನೆ

ನಿರಪರಾಧಿಗಳನ್ನು ವಿನಾಕಾರಣ ಜೈಲಿಗೆ ಕಳುಹಿಸಿರುವ ಪೋಲೀಸರ ಕ್ರಮ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತಾಗಿದೆ ಎಂದು ವರ್ತಕರಾದ ಶ್ರೀನಿವಾಸ ಎಂ.ಪೈ ಆರೋಪಿಸಿದರು.

19 Jan, 2018