ಬೀದರ್

‘ಚುನಾವಣೆಯಲ್ಲಿ ಯೋಗ್ಯರನ್ನು ಆಯ್ಕೆ ಮಾಡಿ’

ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿ ಆಗಬೇಕಾದರೆ ಅರ್ಹರನ್ನು ನಮ್ಮ ಪ್ರತಿನಿಧಿಗಳಾಗಿ ಆಯ್ಕೆ ಮಾಡುವ ಅಗತ್ಯ ಇದೆ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಬೀದರ್: ಮತದಾರರು ಚುನಾವಣೆಗಳಲ್ಲಿ ಯೋಗ್ಯ ವ್ಯಕ್ತಿಗಳನ್ನು ಮಾಡಬೇಕು ಎಂದು ಯೋಗಕ್ಷೇಮ ಧಾರವಾಡ ಸಂಘಟನೆಯ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮನವಿ ಮಾಡಿದರು.

ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿ ಆಗಬೇಕಾದರೆ ಅರ್ಹರನ್ನು ನಮ್ಮ ಪ್ರತಿನಿಧಿಗಳಾಗಿ ಆಯ್ಕೆ ಮಾಡುವ ಅಗತ್ಯ ಇದೆ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ದೇಶದ ಸಂವಿಧಾನ ಉತ್ಕೃಷ್ಟ ಆಗಿದೆ. ವಿಶ್ವದ ಅನೇಕ ರಾಷ್ಟ್ರಗಳು ಇದನ್ನು ಅನುಕರಿಸುತ್ತಿವೆ. ಸಮಾನತೆ, ಸಾಮಾಜಿಕ ನ್ಯಾಯ ಸಂವಿಧಾನದ ಮೂಲ ಆಶಯಗಳಾಗಿವೆ ಎಂದು ಹೇಳಿದರು.

ವಿಶ್ವದಲ್ಲೇ ಅತಿದೊಡ್ಡ ಯುವ ಪಡೆ ದೇಶದಲ್ಲಿ ಇದೆ. ಯುವಕರು ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಯ ಬಗೆಗೆ ಚಿಂತನೆ ಮಾಡಬೇಕು ಎಂದು ತಿಳಿಸಿದರು.

ಕಳೆದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಅರ್ಹರನ್ನು ಆಯ್ಕೆ ಮಾಡುವಂತೆ ಸಂಸ್ಥೆ ಮತದಾರರಲ್ಲಿ ಮನವಿ ಮಾಡಿತ್ತು ಎಂದು ಹೇಳಿದರು.

ಚುನಾವಣೆಗೆ ನಿಂತವರಲ್ಲಿ ಯಾರೂ ಅರ್ಹರಾಗಿರದಿದ್ದರೆ ಸಂವಿಧಾನ ನೀಡಿರುವ ನೋಟಾ ಅಧಿಕಾರವನ್ನು ಚಲಾಯಿಸಬೇಕು. ಈ ಮೂಲಕ ರಾಜಕೀಯ ಪಕ್ಷಗಳಿಗೆ ಸಂದೇಶ ರವಾನಿಸಬೇಕು ಎಂದರು.

ರಾಷ್ಟ್ರೀಯ ಪಕ್ಷಗಳು ಉಮೇದುವಾರರನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಮತದಾರರು ರಾಷ್ಟ್ರೀಯ ಪಕ್ಷಗಳ ಆಮಿಷಗಳಿಗೆ ಬಲಿಯಾಗಬಾರದು ಎಂದು ತಿಳಿಸಿದರು.

ಸಂವಿಧಾನ ಕಲ್ಪಿಸಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವ ಹೊಣೆ ಎಲ್ಲರ ಮೇಲಿದೆ. ಮತ ಚಲಾವಣೆ ಮಾಡುವಾಗ ಪ್ರತಿಯೊಬ್ಬರೂ ಈ ಬಗೆಗೆ ವಿಚಾರ ಮಾಡಬೇಕು ಎಂದು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಪದವೀಧರ ಯುವಕನ ಕೈಹಿಡಿದ ಕರಬೂಜ

ಚಿಟಗುಪ್ಪ
ಪದವೀಧರ ಯುವಕನ ಕೈಹಿಡಿದ ಕರಬೂಜ

22 Apr, 2018
ಅಜ್ಞಾನದ ನಿವೃತ್ತಿಯಿಂದ ಸುಜ್ಞಾನ ಪ್ರಾಪ್ತಿ

ಭಾಲ್ಕಿ
ಅಜ್ಞಾನದ ನಿವೃತ್ತಿಯಿಂದ ಸುಜ್ಞಾನ ಪ್ರಾಪ್ತಿ

22 Apr, 2018

ಹುಮನಾಬಾದ್
ಸ್ವಾಭಿಮಾನದ ಬದುಕಿಗಾಗಿ ಸ್ಪರ್ಧೆ

ವಿಧಾನಸಭಾ ಕ್ಷೇತ್ರದ ಭಾರಿಪ ಬಹುಜನ ಮಹಾಸಂಘದ ಅಭ್ಯರ್ಥಿ ಅಂಕುಶ ಗೋಖಲೆ ನೂರಾರು ಸಂಖ್ಯೆಯ ಅಭಿಮಾನಿಗಳೊಂದಿಗೆ ಶನಿವಾರ ತೆರೆದ ಜೀಪ್‌ನಲ್ಲಿ ಮೆರವಣಿಗೆಯಲ್ಲಿ ಬಂದು, ನಾಮಪತ್ರ ಸಲ್ಲಿಸಿದರು. ...

22 Apr, 2018
ಪ್ರಭು, ಸೂರ್ಯಕಾಂತ, ಶೈಲೇಂದ್ರ ನಾಮಪತ್ರ

ಬೀದರ್
ಪ್ರಭು, ಸೂರ್ಯಕಾಂತ, ಶೈಲೇಂದ್ರ ನಾಮಪತ್ರ

22 Apr, 2018

ಬಸವಕಲ್ಯಾಣ
ಎಎಪಿ ಅಭ್ಯರ್ಥಿ ದೀಪಕ ನಾಮಪತ್ರ ಸಲ್ಲಿಕೆ

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ದೀಪಕ ಮಾಲಗಾರ ಶನಿವಾರ ವಿಧಾನಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿದರು.

22 Apr, 2018