ಭಾಲ್ಕಿ

ಸಕಾಲಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಲು ಸಚಿವರಿಗೆ ಮನವಿ

ಪ್ರತಿನಿತ್ಯ ಬೆಳಿಗ್ಗೆ, ಸಂಜೆ ಬಸ್‌ಗಳು ಸರಿಯಾದ ಸಮಯಕ್ಕೆ ಬಾರದೆ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಕೆಲ ಬಸ್‌ ಚಾಲಕರು ತಮ್ಮಿಷ್ಟದಂತೆ ಮಾರ್ಗ ಬದಲಾವಣೆ ಮಾಡಿ ಬಸ್‌ ಓಡಿಸುತ್ತಿರುವುದರಿಂದ ಸಾರ್ವಜನಿಕರಿಗೂ ಅನನುಕೂಲ ಆಗುತ್ತಿದೆ...

ಭಾಲ್ಕಿ: ಪಟ್ಟಣದಲ್ಲಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಪದಾಧಿಕಾರಿಗಳು ತಾಲ್ಲೂಕಿನ ಖಟಕ ಚಿಂಚೋಳಿ, ಎಣಕೂರ, ಸಿಕಿಂದ್ರಾಬಾದ್‌ ವಾಡಿ, ಕೊರುರ ಸೇರಿದಂತೆ 14 ಗ್ರಾಮಗಳಿಗೆ ಸಕಾಲಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಎಬಿವಿಪಿ ಕಲಬುರಗಿ ವಿಭಾಗೀಯ ಸಂಚಾಲಕ ರೇವಣಸಿದ್ದ ಜಾಡರ್‌, ಪ್ರತಿನಿತ್ಯ ಬೆಳಿಗ್ಗೆ, ಸಂಜೆ ಬಸ್‌ಗಳು ಸರಿಯಾದ ಸಮಯಕ್ಕೆ ಬಾರದೆ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಕೆಲ ಬಸ್‌ ಚಾಲಕರು ತಮ್ಮಿಷ್ಟದಂತೆ ಮಾರ್ಗ ಬದಲಾವಣೆ ಮಾಡಿ ಬಸ್‌ ಓಡಿಸುತ್ತಿರುವುದರಿಂದ ಸಾರ್ವಜನಿಕರಿಗೂ ಅನನುಕೂಲ ಆಗುತ್ತಿದೆ. ಈ ಸಂಬಂಧ ಅನೇಕ ಸಲ ಪ್ರತಿಭಟನೆ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರು ತಕ್ಷಣ ಸಮಸ್ಯೆ ಪರಿಹರಿಸಬೇಕು ಎಂದು ವಿಭಾಗೀಯ ನಿಯಂತ್ರಣ ಅಧಿಕಾರಿ ಚಂದ್ರಕಾಂತ ಫುಲೆ ಅವರಿಗೆ ಸೂಚಿಸಿದರು.

ಕೆಎಸ್‌ಆರ್‌ಟಿಸಿ ನಿರ್ದೇಶಕ ವಿಲಾಸ ಮೋರೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ, ಎಬಿವಿಪಿ ಜಿಲ್ಲಾ ಸಂಚಾಲಕ ಈಶ್ವರ ರುಮ್ಮಾ, ವಿಶಾಲ ಘಾಳೆ, ಪ್ರದೀಪ್‌ ಗುಪ್ತಾ, ಸಿದ್ದಾರ್ಥ ಪ್ಯಾಗೆ, ಸಂಗಮೇಶ ಮಂಗನೆ, ಸಾಗರ ಕಲಾ, ಕಿರಣ ಕಾಂಬಳೆ, ಶಿವಾನಂದ, ಸಚಿನ್‌ ರಾಠೋಡ, ಪ್ರಶಾಂತ ದೆವಕತೆ, ಅಜಯ, ಅಂಬ್ರೇಶ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
770 ಖ್ಯಾತನಾಮರ ಸೇರಿಸಲು ನಿರ್ಣಯ

ಬೀದರ್‌
770 ಖ್ಯಾತನಾಮರ ಸೇರಿಸಲು ನಿರ್ಣಯ

20 Jan, 2018
ಹಣ ಸಂಗ್ರಹಿಸಲು ನಾಲ್ವರು ಸಚಿವರ ನಿಯೋಜನೆ

ಬೀದರ್‌
ಹಣ ಸಂಗ್ರಹಿಸಲು ನಾಲ್ವರು ಸಚಿವರ ನಿಯೋಜನೆ

19 Jan, 2018

ಹುಮನಾಬಾದ್
ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

‘ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಬಳಕೆ ಮಾಡಿಕೊಂಡು ಉತ್ತಮ ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತರಬೇಕು. ಶಿಕ್ಷಣದ ಜೊತೆ ಶಿಸ್ತು ಮತ್ತು ಸಂಸ್ಕಾರವೂ ಅಷ್ಟೇ ಮುಖ್ಯ'. ...

18 Jan, 2018
ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ

ಬೀದರ್‌
ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ

18 Jan, 2018
ರಸ್ತೆ ಡಾಂಬರೀಕರಣಗೊಳಿಸಿ

ಬಸವಕಲ್ಯಾಣ
ರಸ್ತೆ ಡಾಂಬರೀಕರಣಗೊಳಿಸಿ

18 Jan, 2018