ಅವಮಾನಿಸಿಲ್ಲ

ಸಂವಿಧಾನ ಅಂಬೇಡ್ಕರರೊಬ್ಬರೇ ಮಾಡಿದ್ದಲ್ಲ. ಅವರ ನೇತೃತ್ವದಲ್ಲಿ ಅನೇಕ ತಜ್ಞರು ಸೇರಿ ಮಾಡಿ ಇಡೀ ರಾಷ್ಟ್ರವೇ ಒಪ್ಪಿದ ಸಂವಿಧಾನ. ಇದನ್ನು ಅಗೌರವಿಸಿದರೆ ಇಡೀ ರಾಷ್ಟ್ರಕ್ಕೆ ಮಾಡಿದ ಅಗೌರವ.

ಧರ್ಮಸಂಸತ್ತಿನಲ್ಲಿ ನಾನು ಮಾಡಿರುವ ಪ್ರಸ್ತಾವದ ಬಗ್ಗೆ ಸ್ಪಷ್ಟೀಕರಣ ಕೇಳಲಾಗಿದೆ. (ಸಂಗತ, ಕೆ.ಫಣಿರಾಜ್‌, ಡಿ. 14). ಈ ಕುರಿತು ಈಗಾಗಲೆ ಅನೇಕ ಬಾರಿ ಸ್ಪಷ್ಟೀಕರಣವನ್ನ ನೀಡಿದ್ದೇನೆ. ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ನನ್ನ ಸಂದರ್ಶನದಲ್ಲಿಯೂ ಅದನ್ನು ವಿಶದಗೊಳಿಸಲಾಗಿದೆ.

‘ಅಲ್ಪಸಂಖ್ಯಾತರಿಗೆ ಕೊಡುವ ಸವಲತ್ತನ್ನು ಬಹುಸಂಖ್ಯಾತರಿಗೂ ಕೊಡಬೇಕು. ಧರ್ಮದ ನೆಲೆಯಲ್ಲಿ ಸಮಾಜವನ್ನು ವಿಭಜಿಸುವುದು ಬೇಡ’ವೆಂದು ಹೇಳಿದ್ದೇನೆ.

ಅಲ್ಪಸಂಖ್ಯಾತರಿಗೆ ನೀಡಿದ ಸವಲತ್ತನ್ನು ನಿಲ್ಲಿಸಬೇಕೆಂದು ನಾನು ಹೇಳಿಲ್ಲ. ಅದನ್ನು ಬಹುಸಂಖ್ಯಾತರಿಗೂ ನೀಡಬೇಕು, ಅದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ತರಬೇಕೆಂದೂ ಹೇಳಿದ್ದೇನೆ. ಅಲ್ಪಸಂಖ್ಯಾತರೆಂದರೆ ದಲಿತರು ಮತ್ತು ಹಿಂದುಳಿದವರಲ್ಲ. ಕ್ರೈಸ್ತರು, ಮುಸಲ್ಮಾನರು ಮುಂತಾದವರು. ಅವರಿಗೆ ನೀಡಿದ ಸವಲತ್ತುಗಳು ದಲಿತರು ಹಿಂದುಳಿದವರನ್ನೊಳಗೊಂಡ ಉಳಿದ ಹಿಂದೂಗಳಿಗೂ ದೊರೆಯಲಿ ಎಂದು ನಾನು ಹೇಳಿದ್ದಾಗಿದೆ.

ಇದರಲ್ಲಿ ತಪ್ಪೇನಿದೆ? ಇದು ದಲಿತರಿಗೂ ಹಿಂದುಳಿದವರಿಗೂ ದೊರೆತರೆ ಅವರಿಗೆ ಅನುಕೂಲವಲ್ಲವೇ? ಸಂವಿಧಾನಕ್ಕೆ ತಿದ್ದುಪಡಿ ಸೂಚಿಸಿದರೆ ಸಂವಿಧಾನಕ್ಕೆ ಅಗೌರವ ನೀಡಿದಂತೆ ಆಗುವುದೇ? ಇಷ್ಟರವರೆಗೆ ಸಂವಿಧಾನಕ್ಕೆ ನೂರಾರು ತಿದ್ದುಪಡಿಗಳಾಗಿಲ್ಲವೇ? ನಾನು ತಿದ್ದುಪಡಿ ಸೂಚಿಸಿದರೆ ಅದು ಅಪರಾಧ ವಾಗುವುದೇ? ಇದು ಅಂಬೇಡ್ಕರರಿಗೆ ಮಾಡಿದ ಅಗೌರವವೆಂದು ಆರೋಪಿಸಲಾಗಿದೆ. ಸಂವಿಧಾನ ಅಂಬೇಡ್ಕರರೊಬ್ಬರೇ ಮಾಡಿದ್ದಲ್ಲ. ಅವರ ನೇತೃತ್ವದಲ್ಲಿ ಅನೇಕ ತಜ್ಞರು ಸೇರಿ ಮಾಡಿ ಇಡೀ ರಾಷ್ಟ್ರವೇ ಒಪ್ಪಿದ ಸಂವಿಧಾನ. ಇದನ್ನು ಅಗೌರವಿಸಿದರೆ ಇಡೀ ರಾಷ್ಟ್ರಕ್ಕೆ ಮಾಡಿದ ಅಗೌರವ. ಇದನ್ನು ನಾನು ಮಾಡಿಲ್ಲವೆಂದು ಹೇಳಿದರೆ ಅದಕ್ಕೆ ಅಂಬೇಡ್ಕರರ ಹೆಸರು ಹೇಳಿ ಜಾತಿಯ ಸ್ವರೂಪವನ್ನು ತರುವುದು ಸರಿಯೇ? ನಾನು ನಿಜಸಂಗತಿಯನ್ನು ತಿಳಿಸಿದ್ದೇನೆ. ಯಾರನ್ನೂ ಅವಮಾನಿಸಿಲ್ಲ. ಪೂರ್ವಗ್ರಹ ಪೀಡಿತರಾಗದೆ ನಿಷ್ಪಕ್ಷಪಾತ ಮನಸ್ಸಿನಿಂದ ಇದನ್ನು ಪರಿಶೀಲಿಸಬೇಕಾಗಿ ಅಪೇಕ್ಷಿಸುತ್ತೆವೆ.

ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ, ಉಡುಪಿ

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಮತದಾನ ಕಡ್ಡಾಯವಾಗಲಿ

ಮತದಾನ ಮಾಡಿದವರಿಗೆ ರಸೀದಿ ಕೊಡುವ ವ್ಯವಸ್ಥೆ ಜಾರಿಗೊಳಿಸಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಈ ರಸೀದಿಯನ್ನು ತೋರಿಸುವುದು ಕಡ್ಡಾಯಗೊಳಿಸಿದರೆ ಮತದಾನ ಪ್ರಮಾಣ ಹೆಚ್ಚಬಹುದು.

20 Apr, 2018

ವಾಚಕರವಾಣಿ
ಅರ್ಹತೆ ನಿಗದಿಗೊಳಿಸಿ

ಯಾವುದೇ ರಾಜಕೀಯ ಪಕ್ಷದಿಂದ ಚುನಾವಣಾ ಅಭ್ಯರ್ಥಿಯಾಗಬೇಕಾದರೆ ಇಂತಿಷ್ಟು ವರ್ಷ ಆ ಪಕ್ಷದ ಕಾರ್ಯಕರ್ತನಾಗಿರಬೇಕು ಎಂಬ ನಿಯಮ ರೂಪಿಸಿದರೆ ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡುವವರಿಗೆ ಕಡಿವಾಣ ಹಾಕಿ,...

20 Apr, 2018

ವಾಚಕರವಾಣಿ
ಮಾದರಿ ಹಳ್ಳಿಗಳು

ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡುವ ಅನೇಕರು ತಮ್ಮ ಹಳ್ಳಿಗಳಲ್ಲಿ ಮದ್ಯದಂಗಡಿ ಇಲ್ಲದಿದ್ದರೆ ಪಕ್ಕದ ಹಳ್ಳಿಗೆ ಹೋಗುತ್ತಾರೆ. ಚುನಾವಣೆಯ ಸಮಯದಲ್ಲಿ ಎಲ್ಲೆಲ್ಲೂ ಕುಡುಕರದೇ ಕಾರುಬಾರು. ಈ...

20 Apr, 2018

ವಾಚಕರವಾಣಿ
ಮೀಸಲಾತಿ ಕಲ್ಪಿಸಿ

ಕಾಂಗ್ರೆಸ್ ಮತ್ತಿತರ ಪಕ್ಷಗಳು ಸಹ ಮೇಲ್ಜಾತಿಗಳಿಗೆ ಮೀಸಲಾತಿ ವಿಸ್ತರಣೆಗೆ ಸಹಮತ ವ್ಯಕ್ತಪಡಿಸಿವೆ. ಆದುದರಿಂದ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸದೆ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳ...

20 Apr, 2018

ವಾಚಕರವಾಣಿ
ಗಳಗಳನಾಥರು!

ನೆರೆ– ಬರ ಬಂದು..ಜನ– ದನ ಸತ್ತಾಗ ಅಳಲಿಲ್ಲ..ಟಿಕೆಟ್‌ ಕೈತಪ್ಪಿತೆಂದು..ಗಳಗಳನೆ ಅಳುವರು ನೋಡಾ

20 Apr, 2018