ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾ’ ರಾಜಕೀಯ...

Last Updated 21 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿಯವರು ಕೂಡ ನಾಡಿನ ಜನರನ್ನು ಸ್ವಾರ್ಥದ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಮಹದಾಯಿ ವಿಚಾರದಲ್ಲಿ ಮನಗಾಣಬಹುದು.

ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಆಸಕ್ತಿ ವಹಿಸಿರುವುದು ಸ್ವಾಗತಾರ್ಹ. ಆದರೆ ಒಂದೂವರೆ ವರ್ಷದ ಹಿಂದೆ ರಾಜ್ಯದಿಂದ ಸರ್ವಪಕ್ಷಗಳ ನಿಯೋಗ ಹೋಗಿ ಮನವಿ ಮಾಡಿದಾಗ ಈ ವಿಚಾರದಲ್ಲಿ ಆಸಕ್ತಿ ತೋರದ ಪ್ರಧಾನಿ, ಈಗ ಸಮಸ್ಯೆ ಬಗೆಹರಿಸಲು ಮುಂದಾಗಿರುವುದರ ಹಿಂದೆ ರಾಜಕೀಯ ಇದೆ ಎಂದೇ ಹೇಳಬೇಕಾಗುತ್ತದೆ.

ಕುಡಿಯುವ ನೀರಿನಲ್ಲೂ ರಾಜಕೀಯ ತೋರುತ್ತಿರುವ ಬಿಜೆಪಿಯ ನಿಲುವು ಎಷ್ಟು ಸರಿ ಎಂಬುದನ್ನು ರಾಜ್ಯದ ಜನಗಳೇ ಯೋಚಿಸಬೇಕು. ಇಂತಹ ವ್ಯವಸ್ಥೆಯ ಅರಿವಿದ್ದೇ ತೇಜಸ್ವಿಯವರು, ‘ನೆಲ, ಜಲ ಹಾಗೂ ಭಾಷೆಯ ಉಳಿವಿಗಾಗಿ ಒಂದು ಪ್ರಾದೇಶಿಕ ಪಕ್ಷ ಅವಶ್ಯಕ’ ಎಂದಿದ್ದು.

ಮಹದಾಯಿಗೆ ಸಿಗಬಹುದಾದ ಜಯ ಎಂಬುದು ಕನ್ನಡಿಗರ ಹೋರಾಟಕ್ಕೋ ಅಥವಾ ಇದು ರಾಜಕೀಯ ಸಂಚಿನಿಂದ ಸಿಗಬಹುದಾದ ಫಲವೋ?

ಪ್ರವೀಣ್, ಹನಗವಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT