ಮಾಗಡಿ

ಶಿಕ್ಷಕರ ಕುಂಚದಲ್ಲಿ ಅರಳಿದ ಚಿತ್ರಕಲೆ

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.

ಮಾಗಡಿ: ಪಟ್ಟಣದ ಬಾಲಾಜಿ ನ್ಯಾಷನಲ್‌ ಪಬ್ಲಿಕ್‌ ಶಾಲೆ ಆವರಣದಲ್ಲಿನ ಡಾ.ಎ.ಪಿ.ಜೆ ಸಭಾಂಗಣದಲ್ಲಿ ಕಳೆದ ಎರಡು ದಿನಗಳಿಂದ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ನಡೆಯುತ್ತಿರುವ 10ನೇ ಸಮ್ಮೇಳನದಲ್ಲಿ ನಾಡಿನ ನಾನಾ ಮೂಲೆಗಳಿಂದ ಬಂದಿರುವ ಚಿತ್ರಕಲಾ ಶಿಕ್ಷಕರ ವಿವಿಧ ನಮೂನೆ ಬಣ್ಣದ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಎಲ್ಲರ ಗಮನ ಸೆಳೆದಿವೆ.

ಸಮಾರೋಪ: ಡಿಸೆಂಬರ್‌ 22ರಂದು ಬೆಳಿಗ್ಗೆ 5 ಗಂಟೆಯಿಂದ ಶಿಬಿರಾರ್ಥಿಗಳಿಗೆ ಯೋಗಾಸನ ಏರ್ಪಡಿಸಲಾಗಿದೆ. ಸಾಮೂಹಿಕ ಭಾವಚಿತ್ರ ಪ್ರಾತ್ಯಕ್ಷಿಕೆ ಇದ್ದು, ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಸಮಾರಂಭ ನಡೆಯಲಿದೆ. ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಕಕಮರಿ ಸದ್ಗುರು ರಾಯಲಿಂಗೇಶ್ವರ ಮಠದ ಅಭಿನವ ಗುರುಲಿಂಗ ಜಂಗಮಸ್ವಾಮಿ, ಸಮ್ಮೇಳನದ ಅಧ್ಯಕ್ಷ ಡಾ.ಸಿ.ಚಂದ್ರಶೇಖರ್‌ ಭಾಗವಹಿಸಲಿದ್ದಾರೆ.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಬಿ.ಜೆ.ಪಿ ಮುಖಂಡ ಆರ್‌.ಅಶೋಕ್‌, ಚಿತ್ರಮಿತ್ರ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ, ರಂಗಧಾಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ‍ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಸಂಘಧ ಅಧ್ಯಕ್ಷ ಬಿ.ಜಿ.ಜವರೇಗೌಡ ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಕಾಯಕಲ್ಪದ ನಿರೀಕ್ಷೆಯಲ್ಲಿ ಖಾಸ ಬಾವಿ

ದೇವದುರ್ಗ
ಕಾಯಕಲ್ಪದ ನಿರೀಕ್ಷೆಯಲ್ಲಿ ಖಾಸ ಬಾವಿ

21 Apr, 2018
ಅತ್ಯಾಚಾರ, ದೌರ್ಜನ್ಯ ನಿಯಂತ್ರಿಸಲು ಒತ್ತಾಯ

ಲಿಂಗಸುಗೂರು
ಅತ್ಯಾಚಾರ, ದೌರ್ಜನ್ಯ ನಿಯಂತ್ರಿಸಲು ಒತ್ತಾಯ

21 Apr, 2018

ರಾಯಚೂರು
ಬೇನಾಮಿ ಆಸ್ತಿ ತನಿಖೆಗೆ ಒತ್ತಾಯ

ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡು ಬೆನಾಮಿ ಹೆಸರಿನಲ್ಲಿ ಮಾಡಿಕೊಂಡಿರುವ ಆಸ್ತಿ ಹಾಗೂ ಹಣದ ಬಗ್ಗೆ ಕೇಂದ್ರ...

21 Apr, 2018

ಲಿಂಗಸುಗೂರು
ಪಡಿತರ: ನಿತ್ಯ ಪರದಾಟ

ಸರ್ಕಾರಿ ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಲಾಗುವ ಅನ್ನಭಾಗ್ಯ ಯೋಜನೆಯ ಉಚಿತ ಅಕ್ಕಿ, ಮತ್ತು ಇತರೆ ಪಡಿತರ ಆಹಾರ ಧಾನ್ಯ ಪಡೆಯಲು ಪ್ರತಿ ತಿಂಗಳು ನಿತ್ಯ...

20 Apr, 2018
ಮತಗಟ್ಟೆ ಸ್ಥಾಪನೆಗೆ ಹಿಂದೇಟು: ಚುನಾವಣೆ ಬಹಿಷ್ಕಾರ

ದೇವದುರ್ಗ
ಮತಗಟ್ಟೆ ಸ್ಥಾಪನೆಗೆ ಹಿಂದೇಟು: ಚುನಾವಣೆ ಬಹಿಷ್ಕಾರ

20 Apr, 2018