ಉಡುಪಿ

ಕ್ರೀಡೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಿಸುತ್ತದೆ: ಕೆ.ರಂಜನ್

ವಿದ್ಯಾರ್ಥಿ ಜೀವನದ ನಂತರ ಕ್ರೀಡೆಯಿಂದ ದೂರ ಉಳಿಯುವ ಮನೋಭಾವ ಇತ್ತೀಚೆಗೆ ಹೆಚ್ಚಾಗುತ್ತಿದೆ.

ಉಡುಪಿ: ಕ್ರೀಡೆ ಪರಸ್ಪರ ಸಮಾನತೆ,  ಗೌರವ, ಸ್ನೇಹಭಾವ, ಸ್ಪರ್ಧಾ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತದೆ ಎಂದು ಉಡುಪಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಕೆ.ರಂಜನ್ ಹೇಳಿದರು. ವಳಕಾಡಿನ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದ ನಂತರ ಕ್ರೀಡೆಯಿಂದ ದೂರ ಉಳಿಯುವ ಮನೋಭಾವ ಇತ್ತೀಚೆಗೆ ಹೆಚ್ಚಾಗುತ್ತಿದೆ. ವೃತ್ತಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಆರೋಗ್ಯಕ್ಕೆ ಅಗತ್ಯವಿರುವ ಕ್ರೀಡೆ, ಯೋಗ, ವ್ಯಾಯಾಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ನಗರಸಭಾ ಸದಸ್ಯೆ ಗೀತಾರವಿ ಶೇಟ್, ಲಯನ್ಸ್ ಕ್ಲಬ್‌ ದಿವಾಕರ ಶೆಟ್ಟಿ, ಲಯನೆಸ್ ಶೋಭಾ ಶೆಟ್ಟಿ,ಇಂದ್ರಾಳಿ ಲಯನೆಸ್ ಕ್ಲಬ್ ಶ್ವೇತಾ ಜಯಕರ ಶೆಟ್ಟಿ ಇದ್ದರು. ಪ್ರಾಂಶುಪಾಲೆ ಬಿ. ನಿರ್ಮಲ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುಭಾಶ್ಚಂದ್ರ ಹೆಗ್ಡೆ ವಂದಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಉಡುಪಿ
ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ

‘ರೈತರನ್ನು ಸಾಲದಿಂದ ಹೊರತರುವ ಉದ್ದೇಶದಿಂದ ಮನೆ ಮನೆಯಿಂದ ಮುಷ್ಟಿಧಾನ್ಯ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ’ ಎಂದು ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಕೆ.ಉದಯ ಕುಮಾರ್‌ ಶೆಟ್ಟಿ...

23 Mar, 2018

ಉಡುಪಿ
ಲಾಬಿ ನಿಲ್ಲಿಸಲು ಮನವಿ

ಜಿಪಿಎಸ್ ವ್ಯವಸ್ಥೆ ರದ್ದು ಪಡಿಸುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಟಿಪ್ಪರ್ ಮಾಲೀಕರು ಮತ್ತು ಚಾಲಕರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ...

23 Mar, 2018

ಉಡುಪಿ
ಪಂಪಿಂಗ್ ಸ್ಟೇಷನ್‌ಗೆ ವಿದ್ಯುತ್‌ ವ್ಯತ್ಯಯ ಆಗದಿರಲಿ: ಪ್ರಮೋದ್

ಬಜೆ ಜಲಾಶಯದಿಂದ ನಿರಂತರವಾಗಿ ನೀರು ಪಂಪ್ ಮಾಡಲು ದಿನದ 24 ಗಂಟೆಯೂ ವಿದ್ಯುತ್ ಪೂರೈಕೆ ಮಾಡಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ವ್ಯತ್ಯಯ ಆಗದಂತೆ ಕ್ರಮ...

22 Mar, 2018
ನುಡಿದಂತೆ ನಡೆಯದ ಪ್ರಧಾನಿ ಮೋದಿ

ಉಡುಪಿ
ನುಡಿದಂತೆ ನಡೆಯದ ಪ್ರಧಾನಿ ಮೋದಿ

21 Mar, 2018

ಉಡುಪಿ
ಬಿಜೆಪಿ ಕುಟಿಲ ನೀತಿ ಕರಾವಳಿಗರಿಗೆ ತಿಳಿಯಲಿ

ಜಾತಿ, ಧರ್ಮದ ಮಧ್ಯೆ ವಿಷ ಬೀಜ ಬಿತ್ತುವ ಬಿಜೆಪಿ ಕುಟಿಲ ರಾಜಕಾರಣವನ್ನು ರಾಜಕೀಯ ಪ್ರಜ್ಞೆ ಇರುವ ಕರಾವಳಿ ಭಾಗದ ಜನರು ಅರ್ಥ ಮಾಡಿಕೊಳ್ಳಬೇಕು ಎಂದು...

21 Mar, 2018