ಗೋಣಿಕೊಪ್ಪಲು

ಪೊನ್ನಂಪೇಟೆ ತಾಲ್ಲೂಕು ರಚನೆ ಹೋರಾಟ: 51ನೇ ದಿನಕ್ಕೆ

ಪೊನ್ನಂಪೇಟೆ ತಾಲ್ಲೂಕು ರಚನೆಗೆ ಒತ್ತಾಯಿಸಿ 51 ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಗುರುವಾರ ನಲ್ಲೂರಿನ ಸರಸ್ವತಿ ಯುವಕ ಸಂಘ, ಗಣಪತಿ ಸ್ತ್ರೀಶಕ್ತಿ ಸಂಘ, ಶ್ರೀನಿಧಿ ಲೇಡೀಸ್ ಅಸೋಸಿಯೇಷನ್‌ನ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ರಚನೆಗೆ ಒತ್ತಾಯಿಸಿ 51 ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಗುರುವಾರ ನಲ್ಲೂರಿನ ಸರಸ್ವತಿ ಯುವಕ ಸಂಘ, ಗಣಪತಿ ಸ್ತ್ರೀಶಕ್ತಿ ಸಂಘ, ಶ್ರೀನಿಧಿ ಲೇಡೀಸ್ ಅಸೋಸಿಯೇಷನ್‌ನ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಮ್ಮ ಸಂಘಗಳ ಬ್ಯಾನರ್ ಹಿಡಿದು ಅಲ್ಲಿನ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ‘ಪೊನ್ನಂಪೇಟೆ ತಾಲ್ಲೂಕು ರಚನೆಯಾಗಲೇ ಬೇಕು’ ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.

ಗಾಂಧಿ ಮಂಟಪದವರೆಗೆ ಪ್ರತಿಭಟನೆ ನಡೆಸಿ ಧರಣಿಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ರಚನೆ ಸಮಿತಿ ಕಾರ್ಯಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ಹೋರಾಟದ ಕೂಗು ಸರ್ಕಾರಕ್ಕೆ ತಲುಪಿದೆ. ಸರ್ಕಾರ ಸಕಾರತ್ಮಕವಾಗಿ ಸ್ಪಂದಿಸುವ ಸಾಧ್ಯತೆ ಇದೆ. ಈಗಾಗಲೆ ಪೊನ್ನಂಪೇಟೆ ಸುತ್ತಮುತ್ತಲಿನ 150ಕ್ಕೂ ಹೆಚ್ಚಿನ ಸಂಘಟನೆಗಳು ಬೆಂಬಲ ಸೂಚಿಸಿ, ಹೋರಾಟದಲ್ಲಿ ಪಾಲ್ಗೊಂಡಿವೆ. ಆದರೂ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಾಗಿದೆ ಎಂದು ನುಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ಕುಶಾಲಪ್ಪ ಮಾತನಾಡಿ, ಜನತೆ ಹೊಸದಾಗಿ ತಾಲ್ಲೂಕಿಗೆ ಒತ್ತಾಯಿಸುತ್ತಿಲ್ಲ, 1956ಕಿಂತ ಹಿಂದೆ ಇದ್ದ ಕಿಗ್ಗಟ್ಟುನಾಡು ತಾಲ್ಲೂಕನ್ನು ಮರಳಿ ಕೊಡಿ ಎಂದಷ್ಟೆ ಕೇಳುತ್ತಿದ್ದಾರೆ. ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಕೈಕೇರಿಯ ಜಮ್ಮಡ ಮೊಹನ್ ಮಾತನಾಡಿದರು.

ನಲ್ಲೂರು ಗ್ರಾಮದ ಹರೀಶ್, ಗಿರೀಶ್, ಅಶೋಕ್, ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡೀರ ಪೊನ್ನಪ್ಪ, ಚೆಪ್ಪುಡೀರ ಸೋಮಯ್ಯ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕೆ.ಎಂ.ಗಣಪತಿ, ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ.ಪೂಣಚ್ಚ, ಹಿರಿಯ ವಕೀಲ ಮತ್ರಂಡ ಅಪ್ಪಚ್ಚು, ಕೋಳೆರ ದಯಾಚಂಗಪ್ಪ ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ನಿಯಮ ಉಲ್ಲಂಘಿಸಿ ಶಾಲಾ ದಾಖಲಾತಿಗೆ ಆಹ್ವಾನ

ಕುಶಾಲನಗರ
ನಿಯಮ ಉಲ್ಲಂಘಿಸಿ ಶಾಲಾ ದಾಖಲಾತಿಗೆ ಆಹ್ವಾನ

20 Jan, 2018
ಅರಿವು ಮೂಡಿಸಿದ ‘ಸೌರಶಕ್ತಿ’ ಕಾರ್ಯಾಗಾರ

ಕುಶಾಲನಗರ
ಅರಿವು ಮೂಡಿಸಿದ ‘ಸೌರಶಕ್ತಿ’ ಕಾರ್ಯಾಗಾರ

20 Jan, 2018

ಮಡಿಕೇರಿ
ನೀಲಗಿರಿ ಮರದಿಂದ ಅಂತರ್ಜಲ ಕುಸಿತ

ಕಾಡಿನಿಂದ ನಾಡಿಗೆ ಬಂದಿರುವ ವನ್ಯಮೃಗಗಳು ಹಾಗೂ ಕಾಡಾನೆಗಳು ರೈತರ ತೋಟದಲ್ಲಿ ಕಾಯಂ ಠಿಕಾಣಿ ಹೂಡಿವೆ. ಇದರಿಂದ ರೈತರ ಸಾಕಷ್ಟು ತೋಟಗಳು ಹಾನಿಗೆ ಒಳಗಾಗಿವೆ

20 Jan, 2018
ಹನಿ ನೀರಾವರಿ ಪದ್ಧತಿಯಿಂದ ಸಮೃದ್ಧ ಕೃಷಿ

ಶನಿವಾರಸಂತೆ
ಹನಿ ನೀರಾವರಿ ಪದ್ಧತಿಯಿಂದ ಸಮೃದ್ಧ ಕೃಷಿ

19 Jan, 2018
ನಗರದಲ್ಲಿ ಬಿಎಸ್‌ಪಿ ಜಾಗೃತಿ ರ‍್ಯಾಲಿ

ಮಡಿಕೇರಿ
ನಗರದಲ್ಲಿ ಬಿಎಸ್‌ಪಿ ಜಾಗೃತಿ ರ‍್ಯಾಲಿ

19 Jan, 2018