ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕೀಯ ಬಿಟ್ಟು ರೈತರ ಹಿತ ಕಾಪಾಡಿ’

Last Updated 22 ಡಿಸೆಂಬರ್ 2017, 9:04 IST
ಅಕ್ಷರ ಗಾತ್ರ

ನರಗುಂದ: ‘ಮಹದಾಯಿ ಸಮಸ್ಯೆಯನ್ನು ಯಾವುದೇ ಪಕ್ಷ ಇತ್ಯರ್ಥಪಡಿಸಿದರೂ ಸಂತಸ. ಆದರೆ, ಇದು ಬರಿ ಹೇಳಿಕೆಗೆ ಸೀಮಿತಗೊಳ್ಳದೆ, ಯೋಜನೆ ಅನುಷ್ಠಾನಗೊಳ್ಳಬೇಕು’ ಎಂದು ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಆಗ್ರಹಿಸಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 890ನೇ ದಿನ ಗುರುವಾರ ಅವರು ಮಾತನಾಡಿದರು.

‘ಮಹದಾಯಿ ನೀರಿನ ವಿಷಯದಲ್ಲಿ ರಾಜಕೀಯ ಮೇಲಾಟ ಆಗಬಾರದು. ಜನಪ್ರತಿನಿಧಿಗಳು ರೈತರ ಹಿತಾಸಕ್ತಿ ಕಾಪಾಡಬೇಕು. ಬಿಜೆಪಿ ನಾಯಕರು ಈಗ ನೀಡುತ್ತಿರುವ ಹೇಳಿಕೆಗಳು ಚುನಾವಣೆ ತಂತ್ರವಾದರೆ, ಅದಕ್ಕೆ ರೈತರಿಂದ ತಕ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ನೆನಪಿಡಿ’ ಎಂದು ಎಚ್ಚರಿಕೆ ನೀಡಿದರು.

‘ಡಿ. 22ರಂದು ರೈತರಿಂದ ಬೆಂಗಳೂರು ಚಲೋ ನಡೆಯಲಿದೆ. ಡಿ. 23ರಂದು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸುವುದು ನಿಶ್ಚಿತ. ಇದರ ಬಗ್ಗೆ ಯಾವುದೇ ಸಂಶಯ ಬೇಡ. ರೈತರ ಹೋರಾಟ ಯಾರ ವಿರುದ್ದವೂ ಅಲ್ಲ. ಅಧಿಕಾರ ಪಡೆಯಲೂ ಅಲ್ಲ. ಮಹದಾಯಿ ನೀರು ಮಲಪ್ರಭೆಗೆ ಹರಿಯಬೇಕು ಎನ್ನುವುದಷ್ಟೇ ನಮ್ಮ ಉದ್ದೇಶ. ಈ ವಿಷಯದಲ್ಲಿ ರಾಜಕೀಯ ತರುವುದನ್ನು ರೈತರು ಸಹಿಸುವುದಿಲ್ಲ’ ಎಂದರು.

‘ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಹೊರಟು ಹೋಗಿದೆ. ಹೋರಾಟ ಸಮಿತಿ ನಿರ್ಧರಿಸಿದಂತೆ ಮಹದಾಯಿ ಹೋರಾಟ ಮುಂದುವರಿಯಲಿದೆ. ಬಿ.ಎಸ್‌.ಯಡಿಯೂರಪ್ಪ ಅವರು ಸ್ಪಷ್ಟ ನಿಲುವು ತೋರುತ್ತಿಲ್ಲ. ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ’ ಎಂದು ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್‌.ಬಿ.ಜೋಗಣ್ಣವರ ಹೇಳಿದರು. ಧರಣಿಯಲ್ಲಿ ವೆಂಕಪ್ಪ ಹುಜರತ್ತಿ, ರಮೇಶ ನಾಯ್ಕರ, ಹನಮಂತ ಪಡೆಸೂರ, ಈರಣ್ಣ ಗಡಗಿಶೆಟ್ಟರ, ಯಲ್ಲಪ್ಪ ಗುಡದರಿ, ಲಕ್ಷ್ಮಣ ಮುನೇನಕೊಪ್ಪ, ವಾಸು ಚವ್ಹಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT