ಗದಗ

ಪರಿಕ್ಕರ್‌ ಪತ್ರ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಪಾಟೀಲ

‘ಮಹದಾಯಿ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಅವರು ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಮೂಲಕ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ’

ಗುರುವಾರ ಗದುಗಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಎಚ್‌.ಕೆ ಪಾಟೀಲ ಮಾತನಾಡಿದರು

ಗದಗ: ‘ಮಹದಾಯಿ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಅವರು ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಮೂಲಕ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿವರ್ತನಾ ಯಾತ್ರೆಗೆ ಜನರನ್ನು ಸೇರಿಸಲು ಬಿ.ಎಸ್‌.ಯಡಿಯೂರಪ್ಪ ಅವರು ಕಳೆದ ಒಂದು ತಿಂಗಳಿಂದ ಮಹದಾಯಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಹೇಳಿಕೊಂಡು ತಿರುಗುತ್ತಿದ್ದರು. ಇದರ ಹಿಂದೆ ಯಾವುದೇ ಪ್ರಾಮಾಣಿಕ ಪ್ರಯತ್ನ ಇರಲಿಲ್ಲ. ಪರಿಕ್ಕರ್‌ ಪತ್ರ ರಾಜ್ಯದ ಜನತೆಯ ನಿರೀಕ್ಷೆಯನ್ನು ಸಂಪೂರ್ಣ ಹುಸಿ ಮಾಡಿದೆ. ಈ ಪತ್ರಕ್ಕೆ ಮೂರು ಕಾಸಿನ ಬೆಲೆಯೂ ಇಲ್ಲ. ಬಿಜೆಪಿಯವರ ರಾಜಕೀಯ ನಾಟಕದಿಂದ ಕರ್ನಾಟಕಕ್ಕೆ ಲಭಿಸಿದ್ದು ಶೂನ್ಯ’ ಎಂದು ದೂರಿದರು.

‘ಬುಧವಾರ ದೆಹಲಿಯಲ್ಲಿ ನಡೆದ ಬಿಜೆಪಿ ವರಿಷ್ಠರ ಸಭೆಯಲ್ಲಿ ಈ ಕುರಿತು ನಿರ್ಣಯ ಆಗಿದ್ದರೆ ಪರಿಕ್ಕರ್‌ ಪತ್ರದಲ್ಲಿ ಅದರ ಉಲ್ಲೇಖ ಇರಬೇಕಿತ್ತು. ಆದರೆ, ಪತ್ರದಲ್ಲಿ ಏನೂ ಇಲ್ಲ. ಕೇವಲ ರಾಜಕೀಯ ನಾಟಕವಾಡಿದ್ದಾರೆ’ ಎಂದರು.

‘ಕಳಸಾ–ಬಂಡೂರಿ ಯೋಜನೆಯನ್ನು ಹುಟ್ಟುಹಾಕಿದ್ದು ಕಾಂಗ್ರೆಸ್‌ನವರು. ಮಹದಾಯಿ ವಿಷಯದಲ್ಲಿ ನ್ಯಾಯಮಂಡಳಿ ತೀರ್ಪಿನವರೆಗೆ ಕಾಯುತ್ತೇವೆ. ರಾಜಕೀಯ ಹಿತಾಸಕ್ತಿ ಬದಿಗಿರಿಸಿ ಪ್ರಧಾನಿ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕು’ ಎಂದು ಎಚ್‌.ಕೆ.ಪಾಟೀಲ ಆಗ್ರಹಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ರೈತರಿಂದ ಗೋವಾ ಮುತ್ತಿಗೆ ಎಚ್ಚರಿಕೆ

ನರಗುಂದ
ರೈತರಿಂದ ಗೋವಾ ಮುತ್ತಿಗೆ ಎಚ್ಚರಿಕೆ

18 Jan, 2018

ಗದಗ
ಬ್ಯಾಂಕ್ ರಸ್ತೆಯಲ್ಲಿ ತೆರವು ಕಾರ್ಯಾಚರಣೆ

ಬುಧವಾರ ಬ್ಯಾಂಕ್ ರಸ್ತೆಯಲ್ಲಿ ಮಳಿಗೆಗಳ ಮುಂದೆ ಅಳವಡಿಸಲಾಗಿದ್ದ ತಗಡಿನ ಮೇಲ್ಛಾವಣಿಯನ್ನು ಪೊಲೀಸರು ಜೆಸಿಬಿ ಮೂಲಕ ತೆರವುಗೊಳಿಸಿದರು. ಹಳೆ ಬಸ್ ನಿಲ್ದಾಣ ಬಳಿಯ ಮಾಳಶೆಟ್ಟಿ ವೃತ್ತ,...

18 Jan, 2018
ಜಿಲ್ಲಾ ಕೇಂದ್ರದಲ್ಲಿ ಸರಣಿ ಪ್ರತಿಭಟನೆ

ಗದಗ
ಜಿಲ್ಲಾ ಕೇಂದ್ರದಲ್ಲಿ ಸರಣಿ ಪ್ರತಿಭಟನೆ

18 Jan, 2018
ಗೋವಾ ಮೊಂಡುವಾದ ನಿಲ್ಲಿಸಲಿ

ನರಗುಂದ
ಗೋವಾ ಮೊಂಡುವಾದ ನಿಲ್ಲಿಸಲಿ

17 Jan, 2018

ನರೇಗಲ್
ವಿದ್ಯಾರ್ಥಿಗಳ ಶ್ರಮದಾನ; ಶೌಚಾಲಯ ನಿರ್ಮಾಣ

ಗ್ರಾಮದಲ್ಲಿ ನಡೆಯುತ್ತಿರುವ ಆರು ದಿನಗಳ ಶಿಬಿರವನ್ನು ಸಂಪೂರ್ಣ ಶೌಚಾಲಯ ನಿರ್ಮಾಣ ಮಾಡುವುದಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಗ್ರಾಮ ಪಂಚಾಯ್ತಿ ಶೌಚಾಲಯ ನಿರ್ಮಾಣಕ್ಕೆ ಬೇಕಾಗುವ ವೆಚ್ಚವನ್ನು ಭರಿಸಿ ಸಹಕರಿಸುತ್ತಿದೆ. ...

17 Jan, 2018