ಅಕ್ಕಿಆಲೂರ

ಸಹೃದಯತೆ ಬೆಳೆಸಲು ರಂಗಭೂಮಿಯ ಪರಿಚಯ ಅಗತ್ಯ

‘ನಾಡು ನುಡಿ ಸೇವೆಗೆ ರಂಗಭೂಮಿ ಕಲೆಯನ್ನು ಶ್ರೀಮಂತಗೊಳಿಸುವುದು ಅತ್ಯಂತ ಮಹತ್ವದ್ದಾಗಿದೆ. ಬದುಕಿ ನೊಂದಿಗೆ ಕಲೆ ಹಾಸುಹೊಕ್ಕಾಗಿದೆ. ಅದನ್ನು ನೋಡುವ ದೃಷ್ಟಿಕೋನ ಅಗತ್ಯ.

ಅಕ್ಕಿಆಲೂರ: ‘ಮುಂದಿನ ಪೀಳಿಗೆಗೆ ಸಹೃದಯತೆ ಉಣ ಬಡಿಸುವ ರಂಗ ಭೂಮಿಯ ಪರಿಚಯ ಇಂದಿನ ಅಗತ್ಯವಾಗಿದ್ದು, ಗ್ರಾಮೀಣ ಸಮು ದಾಯದಲ್ಲಿ ಮಾತ್ರ ಇಂಥ ಪ್ರಯತ್ನ ಯಶಸ್ಸು ಕಾಣುತ್ತಿರುವುದಕ್ಕೆ ಖುಷಿ ಪಡ ಬೇಕಿದೆ’ ಎಂದು ಹಾನಗಲ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಸಿ.ಪೀರಜಾದೆ ಹೇಳಿದರು.

ಸಮೀಪದ ಶೇಷಗಿರಿ ಗ್ರಾಮದ ಸಿ.ಎಂ.ಉದಾಸಿ ಕಲಾಕ್ಷೇತ್ರದಲ್ಲಿ ಗುರುವಾರ ಧಾರವಾಡದ ರಂಗಾಯಣ ಹಾಗೂ ಗಜಾನನ ಯುವಕ ಮಂಡಳದ ಆಶ್ರಯದಲ್ಲಿ ನಡೆದ ಕಾಲೇಜು ರಂಗೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾಡು ನುಡಿ ಸೇವೆಗೆ ರಂಗಭೂಮಿ ಕಲೆಯನ್ನು ಶ್ರೀಮಂತಗೊಳಿಸುವುದು ಅತ್ಯಂತ ಮಹತ್ವದ್ದಾಗಿದೆ. ಬದುಕಿ ನೊಂದಿಗೆ ಕಲೆ ಹಾಸುಹೊಕ್ಕಾಗಿದೆ. ಅದನ್ನು ನೋಡುವ ದೃಷ್ಟಿಕೋನ ಅಗತ್ಯ. ಗ್ರಾಮೀಣ ರಂಗಭೂಮಿ ಕಣ್ಮರೆ ಯಾಗುವ ಕಾಲ ಸನ್ನಿಹಿತವಾಗುತ್ತಿದೆ ಎಂಬ ಸಂದೇಹ ಎಲ್ಲರಲ್ಲಿಯೂ ಮನೆ ಮಾಡಿದೆ ಎಂದು ವಿಷಾದಿಸಿದ ಅವರು, ವೃತ್ತಿ ರಂಗಭೂಮಿಯೂ ಕೂಡ ಈಗ ವಿರಳ ಎನ್ನುವಂತಾಗಿದೆ. ಆಧುನಿಕತೆಯ ಪ್ರಭಾವದ ಮಧ್ಯೆಯೂ ಶೇಷಗಿರಿ ಉತ್ತರ ಕರ್ನಾಟಕದ ರಂಗ ಕೇಂದ್ರವಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದರು.

ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ಶಾಮಸುಂದರ ಅಡಿಗ ಅವರು ಮಾತನಾಡಿ, ‘ಪ್ರಸ್ತುತ ಸಂದರ್ಭದಲ್ಲಿ ವಾಸ್ತವ ತೆರೆದಿಡುವ ಪ್ರಭಾವಶಾಲಿ ರಂಗ ಪ್ರಯೋಗಗಳ ಅವಶ್ಯಕತೆ ಇದೆ. ಮನರಂಜನೆಗೆ ರಂಗ ಎನ್ನುವ ಭಾವನೆ ದೂರವಾಗಬೇಕಿದೆ. ರಂಗಕ್ಷೇತ್ರ ಸಮುದಾಯಕ್ಕೆ ಇನ್ನಷ್ಟು ಹತ್ತಿರವಾಗಬೇಕಿದ್ದು, ಮನಸ್ಸನ್ನು ಅರಳಿಸಿ, ಪ್ರತಿಭೆಗಳನ್ನು ಬೆಳೆಸಿ, ಸಂಬಂಧ ಕಟ್ಟುವಲ್ಲಿ ಇಂಥ ನಾಟಕಗಳು ಸಹಕಾರಿಯಾಗಿವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿದ್ದಪ್ಪ ಕರಡಿ ಮಾತನಾಡಿ, ‘ಸಿನೆಮಾ, ದೂರದರ್ಶನ, ಮೊಬೈಲ್ ಗೀಳಿನಿಂದಾಗಿ ಮನಸ್ಸುಗಳು ತಲ್ಲಣಗೊಳ್ಳುತ್ತಿದ್ದು ಪರೋಕ್ಷವಾಗಿ ಹಿಂಸೆ ಪ್ರೋತ್ಸಾಹಿಸುತ್ತಿವೆ. ಜಂಜಾಟ ಜೀವನದ ಈ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಮೌಲ್ಯಗಳ ಅಡಿಯಲ್ಲಿ ಸುಂದರ ಬದುಕು ರೂಪಿಸಿಕೊಳ್ಳುವತ್ತ ಪ್ರತಿಯೊಬ್ಬರೂ ಮುಂದಾಗಬೇಕಿದ್ದು ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ತುಂಬು ವಲ್ಲಿ ಗಮನ ನೀಡುವ ಅಗತ್ಯವಿದೆ’ ಎಂದರು.

ರಂಗ ನಿರ್ದೇಶಕ ಮಹದೇವ ಹಡಪದ, ರಂಗಕರ್ಮಿ ಸಿದ್ದರಾಮ ಹಿಪ್ಪರಗಿ, ಕೃಷ್ಣಮೂರ್ತಿ, ಉಪನ್ಯಾಸಕ ಎಚ್,ಎಸ್.ಬಾರ್ಕಿ, ಕೇಶವ ಬಡಿಗೇರ, ಕೃಷ್ಣ ಆಲದಕಟ್ಟಿ, ಪ್ರಭು
ಗುರಪ್ಪನವರ, ನಾಗರಾಜ್ ಧಾರೇಶ್ವರ ಇದ್ದರು.

ನಾಟಕ ಪ್ರದರ್ಶನ: ಕಾಲೇಜು ರಂಗೋ ತ್ಸವದ ಮೊದಲ ದಿನ ಪ್ರದರ್ಶನಗೊಂಡ ನಾಲ್ಕೂ ನಾಟಕಗಳು ರಂಗಾಸಕ್ತರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದವು. ಅಕ್ಕಿಆಲೂರಿನ ಎಚ್‌ಟಿಇಎಸ್ ಕಲಾ ಮತ್ತು ಎಸ್.ಬಿ.ಜಾಬೀನ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ದೇವಿಪ್ರಸಾದ ಯರತೋಟಿ ನಿರ್ದೇಶನದ ‘ಪ್ರೀತಿಗಿಂತ ದೊಡ್ಡದು ಇಲ್ಲೇನಿದೆ?’ ನಾಟಕ, ಹಾನಗಲ್ಲಿನ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹರೀಶ ಗುರಪ್ಪನವರ ನಿರ್ದೇಶನದಲ್ಲಿ ‘ಮಾಧವಿ’ ನಾಟಕ ಪ್ರದರ್ಶಿಸಿದರು.

ಶಿಗ್ಗಾಂವಿಯ ಅಂಕಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ‘ವಿಗಡ ವಿಕ್ರಮರಾಯ, ಮದುವೆ ಆಲ್ಬಂ’ ನಾಟಕವನ್ನು ಪ್ರಮೋದ ಕಮ್ಮಾರ ನಿರ್ದೇಶನ, ಹಂಸಭಾವಿಯ ಎಂಎಎಸ್‌ಸಿ ಕಾಲೇಜು ವಿದ್ಯಾರ್ಥಿಗಳು ಜಮೀರ್ ಪಠಾಣ ನಿರ್ದೇಶನದಲ್ಲಿ ಪಂಜರಶಾಲೆ ನಾಟಕ ಪ್ರದರ್ಶಿಸಿದರು.

* * 

ವರ್ಗ ಕೋಣೆಗಳಲ್ಲಿ ದೊರೆಯದ ಶಿಕ್ಷಣವನ್ನು ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆಗಳಿಂದ ನೀಡಬಹುದು. ಮಕ್ಕಳ ವಿಕಸನಕ್ಕೆ ಇದು ಸಹಾಯಕ
ಎಸ್‌.ಸಿ.ಪೀರಜಾದೆ ಪ್ರಾಚಾರ್ಯ

Comments
ಈ ವಿಭಾಗದಿಂದ ಇನ್ನಷ್ಟು

ಸವಣೂರ
ಪುರಸಭೆಯಿಂದ ಮತದಾನ ಜಾಗೃತಿ ಜಾಥಾ

ಭಾರತದ ಪ್ರತಿಯೊಬ್ಬ ಪ್ರಜೆಗೆ ಮತದಾನ ಜನ್ಮಸಿದ್ಧಹಕ್ಕು. ಅದನ್ನು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ, ಹಕ್ಕನ್ನು ಮಾರಿಕೊಳ್ಳದೆ ಯೋಗ್ಯ ಅಭ್ಯರ್ಥಿಗೆ ಮತ ನೀಡಬೇಕು ಎಂದು ಜಿಲ್ಲಾ...

21 Apr, 2018

ಶಿಗ್ಗಾವಿ
ಸ್ಪರ್ಧೆ ಯಾರ ವಿರುದ್ಧವಲ್ಲ; ಜನಸೇವೆಗಾಗಿ

‘ನಾನು ಚುನಾವಣೆ ಕಣಕ್ಕಿಳಿದಿರುವುದು ಯಾರ ವಿರುದ್ಧವಲ್ಲ. ಯಾರನ್ನೂ ಸೋಲಿಸಲು ಅಲ್ಲ. ಜನ ಸೇವೆ, ಅಭಿವೃದ್ಧಿಗಾಗಿ ಎಂಬುವುದನ್ನು ಮರೆಯಬಾರದು’ ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ...

21 Apr, 2018
ಮದ್ಯದಂಗಡಿ ಮುಂದೆ ಮುಂಜಾನೆಯೇ ಸರದಿ !

ಹಾವೇರಿ
ಮದ್ಯದಂಗಡಿ ಮುಂದೆ ಮುಂಜಾನೆಯೇ ಸರದಿ !

21 Apr, 2018

ಹಾಸನ
ಬಿಜೆಪಿ: 3 ಹೊಸ ಮುಖಗಳಿಗೆ ಅವಕಾಶ

ಬಿಜೆಪಿ ಬಿಡುಗಡೆ ಮಾಡಿದ ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಹೊಳೆನರಸೀಪುರ, ಅರಸೀಕೆರೆ, ಶ್ರವಣಬೆಳಗೊಳ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಉಳಿದಂತೆ ಬೇಲೂರು, ಸಕಲೇಶಪುರ ಹಾಗೂ...

21 Apr, 2018

  ಹಾವೇರಿ
ಹಾವೇರಿ ಜಿಲ್ಲೆ: ಆರು ಕ್ಷೇತ್ರಗಳಿಂದ 7 ನಾಮಪತ್ರ

ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಒಟ್ಟು ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

20 Apr, 2018