ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌ ಮತ್ತು ಹೊಸ ವರ್ಷಕ್ಕೆ ವಿಶೇಷ ಭಕ್ಷ್ಯಗಳು

Last Updated 22 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಚಾಕೊಲೇಟ್ ಬೇಕ್ಡ್ ಓಟ್ಸ್

ಬೇಕಾಗುವ ಸಾಮಗ್ರಿಗಳು:  ಓಟ್ಸ್ – 1½ಕಪ್, ಸಕ್ಕರೆ – 1ಕಪ್, ಬೆಣ್ಣೆ – ¼ಕಪ್,  ಮೊಟ್ಟೆಯ ಬಿಳಿ ಭಾಗ – 2,  ಬೇಕಿಂಗ್ ಪೌಡರ್ – 1 ಟೀ ಚಮಚ, ಕೆನೆ ತೆಗೆದ ಹಾಲು –  ¾ಕಪ್‌ನಷ್ಟು, ವೆನಿಲ್ಲಾ ಫ್ಲೇವರ್ –1ಟೀ ಚಮಚ, ಕೊಕೊ – 2ಟೇಬಲ್ ಚಮಚ,  ಚಾಕೊಲೇಟ್ ಚಿಪ್ಸ್ – 1ಕಪ್

ತಯಾರಿಸುವ ವಿಧಾನ: ಮೊದಲಿಗೆ ಓವನ್ ಅನ್ನು 180 ಡಿಗ್ರಿ ಸೆಲ್ಸಿಯಸ್‌ನಲ್ಲಿ ಬಿಸಿ ಮಾಡಿ. ಕಪ್‌ಕೇಕ್ ಲೈನರ್‌ಗಳಿಂದ ಕಪ್‌ಕೇಕ್ ಟ್ರೇಗೆ ಹಾಕಿ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡಿ. 20ರಿಂದ 25 ನಿಮಿಷಗಳವರೆಗೆ ಬೇಯಿಸಿ. ಕಂದು ಬಣ್ಣ ಬರುವವರೆಗೆ ಬೇಯಿಸಿದರೆ ಚಾಕೊಲೇಟ್ ಬೇಕ್ಡ್ ಕ್ವೇಕರ್ ಓಟ್ಸ್ ಸವಿಯಲು ಸಿದ್ಧ.

**

ಆಪಲ್ ಸಿನಮನ್ ಕೇಕ್

ಬೇಕಾಗುವ ಸಾಮಗ್ರಿಗಳು: ಓಟ್ಸ್ – 1ಕಪ್, ಕೆನೆ ತೆಗೆದ ಹಾಲು – 1ಕಪ್‌ನಷ್ಟು, ಸಿಹಿರಹಿತ ಸೇಬು ಹಣ್ಣಿನ ಸಾಸ್ – ½ಕಪ್, ಕಿತ್ತಳೆಹಣ್ಣಿನ ರಸ – 2ಟೇಬಲ್ ಚಮಚ,  ಬ್ರೌನ್ ಶುಗರ್ – ½ಕಪ್,  ತುರಿದಿಟ್ಟುಕೊಂಡ ಸೇಬು – 1, ಹುರುಳಿ ಹಿಟ್ಟು – 1ಕಪ್, ಬೇಕಿಂಗ್ ಪೌಡರ್ – 1ಟೀ ಚಮಚ, ಬೇಕಿಂಗ್ ಸೋಡ –  ½ಕಪ್, ಸಿನಮನ್ – 1ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಆಪಲ್ ಸಾಸ್ ತಯಾರಿಸಿಕೊಳ್ಳುವ ವಿಧಾನ: 1 ಸಣ್ಣ ಸೇಬನ್ನು ಕತ್ತರಿಸಿ 2 ಟೇಬಲ್ ಸ್ಪೂನ್ ನೀರಿನಲ್ಲಿ ಮಿಶ್ರಣ ಮಾಡಿ. ಸೇಬು ಮೆತ್ತಗಾಗುವವರೆಗೆ ಬೇಯಿಸಿ. ನಂತರ ಅದನ್ನು ನಾದಿಕೊಳ್ಳಬೇಕು.

ತಯಾರಿಸುವ ವಿಧಾನ: ಮೊದಲಿಗೆ 200 ಡಿಗ್ರಿ ಸೆಲ್ಸಿಯಸ್‌ನಲ್ಲಿ ಓವನ್‌ನನ್ನು ಬಿಸಿ ಮಾಡಿ. ಹಾಲಿನೊಂದಿಗೆ ಓಟ್ಸ್ ಅನ್ನು 15 ನಿಮಿಷಗಳ ಕಾಲ ನೆನೆಸಿಡಿ. ಅದಕ್ಕೆ ಎಲ್ಲಾ ಒಣ ಪದಾರ್ಥಗಳನ್ನು ಮಿಶ್ರಣ ಮಾಡಿ. ತುರಿದ ಸೇಬು ಮತ್ತು ಓಟ್ಸ್ ಮಿಶ್ರಣದೊಂದಿಗೆ ಆಪಲ್ ಸಾಸ್ ಹಾಗೂ ಕಿತ್ತಳೆಹಣ್ಣಿನ ರಸದೊಂದಿಗೆ ಎಲ್ಲಾ ಜ್ಯೂಸ್ ಅನ್ನು ಬೆರಸಿ ಚೆನ್ನಾಗಿ ನಾದಬೇಕು. ಈ ಮಿಶ್ರಣ ಗಟ್ಟಿಯಾದರೆ ಮತ್ತೊಂದು ಟೇಬಲ್‌ ಚಮಚದಷ್ಟು ಕಿತ್ತಳೆಹಣ್ಣಿನ ಜ್ಯೂಸ್ ಅನ್ನು ಸೇರಿಸಿ ನಾದಿ. ಹೀಗೆ ನಾದಿದ ಹಿಟ್ಟನ್ನು 9 ಇಂಚಿನ ಪಾನ್‌ನಲ್ಲಿ ಹಾಕಿ 20ರಿಂದ 25 ನಿಮಿಷಗಳವರೆಗೆ ಬೇಯಿಸಿದರೆ ಓಟ್ಸ್ ಆಪಲ್ ಸಿನಮನ್ ಕೇಕ್ ಸಿದ್ಧವಾಗುತ್ತದೆ.

**

ಓಟ್ಸ್ ಮತ್ತು ಡೇಟ್ಸ್ ಪೈ

ಬೇಕಾಗುವ ಸಾಮಗ್ರಿಗಳು : ಹುರಿದು ಪುಡಿ ಮಾಡಿದ ಓಟ್ಸ್ – 20ಗ್ರಾಂನಷ್ಟು, ರವೆ – 20ಗ್ರಾಂನಷ್ಟು, ಎಣ್ಣೆ – 2.5ಎಂಎಲ್ ಹಾಗೂ ಸಕ್ಕರೆ – ರುಚಿಗೆ ತಕ್ಕಷ್ಟು.  ಸ್ವಲ್ಪ ಡೇಟ್ಸ್, ನಿಂಬೆರಸ – 1ಟೀ ಚಮಚ, ಕತ್ತರಿಸಿದ ಸೇಬು – ಸ್ವಲ್ಪ, ವಾಲ್‌ನಟ್ (ಕತ್ತರಿಸಿದ್ದು) – 15ಗ್ರಾಂನಷ್ಟು, ಬಿಸಿನೀರು – 2ಟೀ ಚಮಚ

ಓಟ್ಸ್ ಪುಡಿ ಮಾಡುವ ಬಗೆ: ಓಟ್ಸ್ ಅನ್ನು 3 ನಿಮಿಷಗಳ ಕಾಲ ಹುರಿಯಿರಿ. ನಂತರ ತಣ್ಣಗೆ ಮಾಡಿ ಮಿಕ್ಸರ್‌ನಲ್ಲಿ ಪುಡಿ ಮಾಡಿಕೊಳ್ಳಬೇಕು.

ತಯಾರಿಸುವ ವಿಧಾನ: ಸಕ್ಕರೆ ಮತ್ತು ಎಣ್ಣೆಯೊಂದಿಗೆ ಓಟ್ಸ್ ಮತ್ತು ರವೆಯನ್ನು ಮಿಶ್ರಣ ಮಾಡಿ. ಸೇಬು, ಡೇಟ್ಸ್ ಮತ್ತು ವಾಲ್‌ನಟ್‌ಗಳನ್ನು ಮಿಶ್ರಣ ಮಾಡಿ ಅದಕ್ಕೆ ಕುದಿಯುವ ನೀರು ಮತ್ತು ನಿಂಬೆರಸವನ್ನು ಹಾಕಿ ಮೃದುವಾಗುವವರೆಗೆ ಕಲಸಿ. ನಂತರ 375 ಡಿಗ್ರಿ ಸೆಲ್ಸಿಯಸ್‌ನಲ್ಲಿ ಬೇಯಿಸಿ. ಹೀಗೆ ಬಿಸಿ ಮಾಡುವಾಗ ಅರ್ಧದಷ್ಟು ಕ್ವೇಕರ್ ಓಟ್ಸ್ ಮತ್ತು ರವೆಯನ್ನು ಬೆರೆಸಿ. ಮೇಲ್ಭಾಗದಲ್ಲಿ ಡೇಟ್ಸ್‌ ಮತ್ತು ಓಟ್ಸ್ ಮಿಶ್ರಣವನ್ನು ಸೇರಿಸಬೇಕು. ನಂತರ 35ರಿಂದ 40 ನಿಮಿಷಗಳವರೆಗೆ ಬೇಯಿಸಬೇಕು. (ಮೇಲ್ಪದರವು ಕಂದು ಬಣ್ಣಕ್ಕೆ ಬರುತ್ತಿದ್ದಂತೆ ಉರಿಯನ್ನು ಕಡಿಮೆ ಮಾಡಬೇಕು).

**

ಡೋನಟ್ಸ್

ಬೇಕಾಗುವ ಸಾಮಗ್ರಿಗಳು: ಓಟ್ಸ್ ಪುಡಿ – 1ಕಪ್, ಗೋಧಿಹಿಟ್ಟು – 1ಕಪ್,  ಮೈದಾಹಿಟ್ಟು – 1ಕಪ್, ಸಕ್ಕರೆಪುಡಿ – 1ಕಪ್, ಕಡಿಮೆ ಕೊಬ್ಬು ಇರುವ ಗಟ್ಟಿ ಮೊಸರು – 125ಗ್ರಾಂನಷ್ಟು, ಮೊಟ್ಟೆಯ ಬಿಳಿ ಭಾಗ – 2, ಎಣ್ಣೆ – 1ಟೇಬಲ್ ಚಮಚ,  ವೆನಿಲ್ಲಾ ಫ್ಲೇವರ್ – ¼ಟೀ ಚಮಚ, ಬೇಕಿಂಗ್ ಪೌಡರ್ – ½ಟೀ ಚಮಚ, ಚಾಕೊಲೇಟ್ – 50ಗ್ರಾಂ.

ತಯಾರಿಸುವ ವಿಧಾನ: ಗೋಧಿ ಮತ್ತು ಮೈದಾಹಿಟ್ಟು, ಓಟ್ಸ್, ಬೇಕಿಂಗ್ ಪೌಡರ್‌ ಅನ್ನು ಮಿಶ್ರಣ ಮಾಡಿ ನಂತರ ಜರಡಿ ಮಾಡಿಕೊಳ್ಳಬೇಕು. ಮೊಟ್ಟೆಯ ಬಿಳಿ ಭಾಗ, ಮೊಸರು, ಎಣ್ಣೆ, ಸಕ್ಕರೆ ಮತ್ತು ವೆನಿಲ್ಲಾವನ್ನು ಒಟ್ಟಿಗೆ ಬೆರೆಸಿ ನಂತರ ಇದಕ್ಕೆ ಎಲ್ಲಾ ಒಣ ಪದಾರ್ಥಗಳನ್ನು ಸೇರಿಸಬೇಕು. 180 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದ ಉರಿಯಲ್ಲಿ ಬಿಸಿ ಮಾಡಿ. ಹೀಗೆ 10 ನಿಮಿಷಗಳವರೆಗೆ ಬಿಸಿ ಮಾಡಿದ ನಂತರ ತಣ್ಣಗಾಗಲು ಬಿಡಿ. ನಂತರ ಮೆಲ್ಟೆಡ್ ಚಾಕೊಲೇಟ್‌ನೊಂದಿಗೆ ಡೋನಟ್‌ಗಳನ್ನು ಸೇರಿಸಿ ಮತ್ತು ಸ್ಪ್ರಿಂಕ್ಲರ್‌ಗಳಿಂದ ಹೊಳೆಯುವಂತೆ ಮಾಡಿ ಸರ್ವ್ ಮಾಡಿ.

**

ಸ್ಪ್ಯಾನಿಷ್ ಆಮ್ಲೆಟ್

ಬೇಕಾಗುವ ಸಾಮಗ್ರಿಗಳು:  ಓಟ್ಸ್ – 1ಕಪ್ (100 ಗ್ರಾಂನಷ್ಟು), ಮೊಟ್ಟೆ ಬಿಳಿ ಭಾಗ – 4 ಮತ್ತು ರುಚಿಗೆ ತಕ್ಕಷ್ಟು ಉಪ್ಪು. ಕಾಳುಮೆಣಸಿನ ಪುಡಿ – ½ಟೀ ಚಮಚ‌,  ಸ್ಕಿಮ್ಡ್ ಮಿಲ್ಕ್ – 2ಟೇಬಲ್ ಚಮಚ,  ಕತ್ತರಿಸಿದ ಸಣ್ಣ ಕ್ಯಾಪ್ಸಿಕಂ – 1, ಸಣ್ಣ ಈರುಳ್ಳಿ – 1ಕತ್ತರಿಸಿದ್ದು, ಟೊಮೆಟೊ – 1ಕತ್ತರಿಸಿದ್ದು,  ಮಶ್ರೂಮ್ – 2ಕತ್ತರಿಸಿದ್ದು(ಬೇಕಿದ್ದಲ್ಲಿ).

ತಯಾರಿಸುವ ವಿಧಾನ: ಮೊಟ್ಟೆಯ ಬಿಳಿ ಭಾಗ, ಓಟ್ಸ್, ಉಪ್ಪು, ಕಾಳುಮೆಣಸು ಪುಡಿ ಮತ್ತು ಹಾಲನ್ನು ಮಿಶ್ರಣ ಮಾಡಬೇಕು. ನಂತರ ನಾನ್‌ಸ್ಟಿಕ್ ಪಾನ್‌ಗೆ ಮೊಟ್ಟೆಯ ಮಿಶ್ರಣವನ್ನು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಅದರ ಮೇಲೆ ಕ್ಯಾಪ್ಸಿಕಂ, ಈರುಳ್ಳಿ ಮತ್ತು ಮಶ್ರೂಮ್‌ನ ಚೂರುಗಳನ್ನು ಹಾಕಿ ನಿಧಾನವಾಗಿ ಒತ್ತಿ. ಪಾನ್ ಅನ್ನು ಮುಚ್ಚಿ 1–2 ನಿಮಿಷಗಳವರೆಗೆ ಮಂದ ಉರಿಯಲ್ಲಿ ಹದವಾಗಿ ಬೇಯಿಸಿ. ನಂತರ ಮುಚ್ಚಳವನ್ನು ತೆಗೆದು ಕಂದು ಬಣ್ಣ ಬರುವವರೆಗೆ ಬೇಯಿಸಿ. ನಂತರ ಉಳಿದ ಮೊಟ್ಟೆಯ ಮಿಶ್ರಣವನ್ನು ಹಾಕಿ ಮತ್ತೊಂದು ಆಮ್ಲೆಟ್ ತಯಾರಿಸಿ. ನಂತರ ಕತ್ತರಿಸಿ ಟೋಸ್ಟ್ ಮಾಡಿದ ಬ್ರೆಡ್‌ನೊಂದಿಗೆ ಬಡಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT