ಹೊಸ ಹೇರ್‌ಕಟ್‌

ತಲೆಯಲ್ಲಿ ಹೆಬ್ಬುಲಿ

ಇತ್ತೀಚೆಗೆ ಸ್ನೇಹಿತರೊಬ್ಬರು ಫೇಸ್‌ಬುಕ್‌ನಲ್ಲಿ ‘ಪ್ರೀತಿಯ ಪಾರಿವಾಳ ತಲೆ ಮೇಲೆ ಗೆಳೆಯಾ...’ ಎಂದು ದೇವದುರ್ಗದಲ್ಲಿ ತಲೆ ಮೇಲೆ ಪಕ್ಷಿ ಚಿತ್ರ ಬಿಡಿಸಿಕೊಂಡ ಯುವಕನ ಚಿತ್ರವನ್ನು ಹಂಚಿಕೊಂಡಿದ್ದರು. ಕೂದಲಲ್ಲಿ, ಹಾರಲು ಸಿದ್ಧವಾಗಿರುವ ಪಾರಿವಾಳದ ಚಿತ್ರ ಆಕರ್ಷಕವಾಗಿತ್ತು. ಚಿತ್ರ ನೋಡಿದ ನಂತರ ಸುಮ್ಮನಿರಲು ಮನಸಾಗಲಿಲ್ಲ. ವಿಚಾರಿಸಿದಾಗ...

ತಲೆಯಲ್ಲಿ ಹೆಬ್ಬುಲಿ

ಇತ್ತೀಚೆಗೆ ಸ್ನೇಹಿತರೊಬ್ಬರು ಫೇಸ್‌ಬುಕ್‌ನಲ್ಲಿ ‘ಪ್ರೀತಿಯ ಪಾರಿವಾಳ ತಲೆ ಮೇಲೆ ಗೆಳೆಯಾ...’ ಎಂದು ದೇವದುರ್ಗದಲ್ಲಿ ತಲೆ ಮೇಲೆ ಪಕ್ಷಿ ಚಿತ್ರ ಬಿಡಿಸಿಕೊಂಡ ಯುವಕನ ಚಿತ್ರವನ್ನು ಹಂಚಿಕೊಂಡಿದ್ದರು. ಕೂದಲಲ್ಲಿ, ಹಾರಲು ಸಿದ್ಧವಾಗಿರುವ ಪಾರಿವಾಳದ ಚಿತ್ರ ಆಕರ್ಷಕವಾಗಿತ್ತು.

ಚಿತ್ರ ನೋಡಿದ ನಂತರ ಸುಮ್ಮನಿರಲು ಮನಸಾಗಲಿಲ್ಲ. ಪರಿಚಿತರನ್ನು ವಿಚಾರಿಸಿದಾಗ ರಾಯಚೂರು ಜಿಲ್ಲೆ, ದೇವದುರ್ಗದ ಕ್ಷೌರಿಕ ಕುರುಡಿ ಮಹಾದೇವಪ್ಪ ಅವರ ಪರಿಚಯವಾಯಿತು.

ಫ್ಯಾಷನ್‌ ಲೋಕವನ್ನು ಒಳಗಣ್ಣಿನಿಂದ ಗಮನಿಸುವ ಮಹಾದೇವಪ್ಪ ಅವರು ದೇವದುರ್ಗದಲ್ಲಿ ‘ರಾಶಿ ಮಾದಪ್ಪ’ ಎಂದೇ ಫೇಮಸ್ಸು. ಕೂದಲನ್ನು ವಿಭಿನ್ನವಾಗಿ ಕತ್ತರಿಸುವುದರಲ್ಲಿ ಮತ್ತು ವಿನ್ಯಾಸ ಮಾಡುವುದರಲ್ಲಿ ಎತ್ತಿದ ಕೈ. ತಲೆಯಲ್ಲೇ ಚಿಟ್ಟೆ, ಮೀನು, ಪಾರಿವಾಳ, ಚಿರತೆ, ಹೂವು, ನಕ್ಷತ್ರ, ಎಲೆ, ನವಿಲು, ಮೊಲ, ತಾಜ್‌ಮಹಲ್‌ ಹೀಗೆ ಸಾಕಷ್ಟು ವಿನ್ಯಾಸ ಮಾಡಿದ್ದಾರೆ.

‘ನಾನ್ರೀ, ಕೆಲವೊಬ್ಬರಿಗೆ ಗಡ್ಡದಲ್ಲೂ ವಿನ್ಯಾಸ ಮಾಡಿದ್ದೀನ್ರೀ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

‘ಎರಡು ಮೂರು ವರ್ಷಗಳ ಹಿಂದೆ ಸ್ನೇಹಿತರೊಬ್ಬರು ಪೇಪರ್‌ ತೋರಿಸಿ ಅದರಲ್ಲಿರುವ ತಲೆಕೂದಲ ವಿನ್ಯಾಸ ಮಾಡುವಂತೆ ಹಟ ಹಿಡಿದರು. ನಾನು ಹಿಂದೆಂದೂ ಅಂಥ ವಿನ್ಯಾಸ ಮಾಡಿರಲಿಲ್ಲ. ಆದರೆ ಕೆಲ ಚಿತ್ರಗಳನ್ನು ನೋಡಿದ್ದೆ. ನನ್ನ ಮೇಲೆ ವಿಶ್ವಾಸವಿರಿಸಿ ಗಿರಾಕಿ ತಲೆಯೊಡ್ಡಿದ್ದರು. ಆದರೆ ಕತ್ತರಿಯಾಡಿಸಬೇಕಿದ್ದ ನನಗೆ ಆತ್ಮವಿಶ್ವಾಸ ಇರಲಿಲ್ಲ. ಅವರ ಹಟದ ಮುಂದೆ ನಾನು ಮಣಿಯಬೇಕಾಯಿತು. ಪ್ರಯತ್ನಿಸಿದೆ, ಎಲ್ಲರೂ ಮೆಚ್ಚಿದರು. ಅದಾದ ಮೇಲೆ ನನಗೆ ಹೊಸ ವಿನ್ಯಾಸಗಳಲ್ಲಿ ಆಸಕ್ತಿ ಮೂಡಿತು. ಪ್ರಯೋಗ ಮಾಡುತ್ತಾ ಬಂದೆ’ ಎಂದು ಹೊಸತನಕ್ಕೆ ಹೊರಳಲು ಕಾರಣವಾದ ಘಟನೆಯನ್ನು ಮೆಲುಕು ಹಾಕುತ್ತಾರೆ.

‘ಮೊದಲು ಗುರುತು ಮಾಡಿಕೊಂಡು ಬಳಿಕ ಕತ್ತರಿಯಿಂದ ಕೂದಲು ಕಟ್‌ ಮಾಡುತ್ತೇನೆ. ನಂತರ ಬ್ಲೇಡ್‌ನಿಂದ ವಿನ್ಯಾಸ ಮಾಡುತ್ತೇನೆ. ಎಲ್ಲಿ ವಿನ್ಯಾಸ ಮಾಡಬೇಕೋ ಅಲ್ಲಿ ತುಂಬ ಜಾಗ್ರತೆಯಿಂದ ಕೆಲಸ ಮಾಡಬೇಕು. ಒಂದು ಸ್ವಲ್ಪ ಆಚೆ ಈಚೆಯಾದರೂ ವಿನ್ಯಾಸ ಕೆಟ್ಟು ಹೋಗಬಹುದು. ಇಲ್ಲಿ ಕೈಚಳಕ ಮುಖ್ಯ. ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರ ತಲೆಯಲ್ಲಿ ಏಡಿ, ಮೊಲ, ಮೀನು ಬಿಡಿಸಿದ್ದೇನೆ. ಆಗ ನೋಡಿದವರೆಲ್ಲಾ ಆಶ್ಚರ್ಯ ವ್ಯಕ್ತಪಡಿಸಿದ್ದರು’ ಎನ್ನುತ್ತಾರೆ ಮಹಾದೇವಪ್ಪ.

‘16 ರಿಂದ 25 ವರ್ಷದೊಳಗಿನ ಯುವಕರೇ ಇಂತಹ ವಿನ್ಯಾಸ ಮಾಡಿಕೊಳ್ಳಲು ಹೆಚ್ಚಾಗಿ ನನ್ನ ಬಳಿ ಬರುತ್ತಾರೆ. ‘ಹೆಬ್ಬುಲಿ’ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಅನೇಕರು ತಲೆಯಲ್ಲಿ ಹೆಬ್ಬುಲಿಯ ಚಿತ್ರ, ಅಕ್ಷರದಲ್ಲಿ ‘ಹೆಬ್ಬುಲಿ’ ಎಂದು ಬಿಡಿಸಿಕೊಂಡಿದ್ದರು. ಇತ್ತೀಚೆಗೆ ಯುವಕನೊಬ್ಬ ತಾಜ್‌ಮಹಲ್‌ ಬಿಡಿಸಿಕೊಂಡಿದ್ದ’ ಎಂದು ಯುವಕರ ಅಭಿರುಚಿಯನ್ನು ತಿಳಿಸುತ್ತಾರೆ.

ಕೆಲ ವರ್ಷಗಳಿಂದ ಹೇರ್‌ ಕಟ್‌ನಲ್ಲಿ ಟ್ರೆಂಡ್‌ ಆಗಿರುವ ಬ್ಲೇಡ್ ಮೂಲಕ ಕೂದಲು ಕತ್ತರಿಸುವ ರೇಜರ್ ಹೇರ್‌ಕಟ್‌, ಬೆಂಕಿಯಲ್ಲಿ ಕೂದಲು ಸುಡುತ್ತಾ ಕೂದಲ ವಿನ್ಯಾಸ ಮಾಡುವ ಫೈರ್‌ ಹೇರ್‌ಕಟ್‌ ಕೂಡ ಇವರು ಮಾಡುತ್ತಾರೆ.

ಮಹಾದೇವಪ್ಪ ಸಂಪರ್ಕಕ್ಕೆ– 74064 91433

Comments
ಈ ವಿಭಾಗದಿಂದ ಇನ್ನಷ್ಟು
ದುನಿಯಾ ವಿಜಯ್‌ಗೆ ನಲವತ್ಮೂರು

ಈ ದಿನ ಜನ್ಮದಿನ
ದುನಿಯಾ ವಿಜಯ್‌ಗೆ ನಲವತ್ಮೂರು

20 Jan, 2018
ಈ ನೋವಿದ್ದರೂ ನಗುತ್ತೇನೆ

ಬುದ್ಧಿ ಕಲಿತೆ
ಈ ನೋವಿದ್ದರೂ ನಗುತ್ತೇನೆ

20 Jan, 2018
ಇದು ‘ನಮ್ದುk’ ಜಮಾನ...

ಯೂಟ್ಯೂಬ್‌ ಚಾನೆಲ್
ಇದು ‘ನಮ್ದುk’ ಜಮಾನ...

20 Jan, 2018
ಚಳಿಗಾಲಕ್ಕೂ ಜಂಪ್‌ಸೂಟ್‌’

ಫ್ಯಾಷನ್
ಚಳಿಗಾಲಕ್ಕೂ ಜಂಪ್‌ಸೂಟ್‌’

20 Jan, 2018
ಸಿಹಿ ಸೇವನೆಗಿರಲಿ ಮಿತಿ

ಆರೋಗ್ಯ
ಸಿಹಿ ಸೇವನೆಗಿರಲಿ ಮಿತಿ

19 Jan, 2018