ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಗದಿತ ವೇಳೆಗೆ ಕಲ್ಲಿದ್ದಲು ಖಾಲಿ’

Last Updated 23 ಡಿಸೆಂಬರ್ 2017, 5:39 IST
ಅಕ್ಷರ ಗಾತ್ರ

ಶಕ್ತಿನಗರ: ಯರಮರಸ್‌ ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ (ವೈಟಿಪಿಎಸ್‌) ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಸಿಂಗರೇಣಿ ಕೋಲ್‌ ಲಿಂಕ್ ಮೂಲಕ ಬಂದ ಕಲ್ಲಿದ್ದಲನ್ನು ನಿಗದಿತ ಸಮಯಕ್ಕೆ ಕೆಳಗೆ ಹಾಕಿಕೊಳ್ಳಲು ಅಧಿಕಾರಿಗಳು ಯಶಸ್ವಿ ಆಗಿದ್ದಾರೆ.

ವ್ಯಾಗನ್‌ಗಳಲ್ಲಿ ಇದ್ದ ಕಲ್ಲಿದ್ದಲು ಐದು ತಾಸಿನಲ್ಲಿ ಖಾಲಿ ಮಾಡಬೇಕಿತ್ತು. 6 ರಿಂದ 7 ತಾಸಿನಲ್ಲಿ ಈ ಬಾರಿ ಸಂಪೂರ್ಣವಾಗಿ ಕಲ್ಲಿದ್ದಲು ಖಾಲಿ ಮಾಡಿದರು. ವ್ಯಾಗನ್‌ದಿಂದ ಕಲ್ಲಿದ್ದಲು ಹೊರ ಹಾಕಲು 300 ಕಾರ್ಮಿಕರನ್ನು ನಿಯೋಜಿಸಲಾಗಿತ್ತು.

ನಿಗದಿತ ಸಮಯಕ್ಕೆ ವ್ಯಾಗನ್‌ದಿಂದ ಕಲ್ಲಿದ್ದಲು ಹೊರ ಹಾಕಲು ಯಶಸ್ವಿಯಾದ ಬಗ್ಗೆ ಸ್ಥಳೀಯ ಅಧಿಕಾರಿಗಳು, ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರನಾಯಕ ಅವರ ಗಮನಕ್ಕೆ ತಂದಿದ್ದಾರೆ. ಕೆಪಿಸಿಎಲ್ ವ್ಯವಸ್ಥಾಪಕರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿ.9ರಂದು ಸಂಪೂರ್ಣವಾಗಿ ಕಲ್ಲಿದ್ದಲು ಖಾಲಿ ಮಾಡಲು 30 ತಾಸು ತೆಗೆದುಕೊಂಡ ಕಾರಣ ರೈಲ್ವೆ ಇಲಾಖೆಯ ಅಧಿಕಾರಿಗಳು ₹2.47 ಲಕ್ಷ ದಂಡ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT